ಶಿವಮೊಗ್ಗ

ಸ್ಮರಣಾ ಶಕ್ತಿ ವೃದ್ಧಿಸುವ ಶಿಕ್ಷಣ ಅತ್ಯಗತ್ಯ

ಇಂದಿನ ಶಿಕ್ಷಣ ಕೇವಲ ಪಠ್ಯ ಕೇಂದ್ರಿತವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ಬೌದ್ಧಿಕ ಮಟ್ಟ ವೃದ್ಧಿಯಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರಾಪಂಚಿಕಜ್ಞಾನದ ಶಿಕ್ಷಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮುನ್ನಡೆಯಬೇಕು.

ಶಿವಮೊಗ್ಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಡಾ.ಕೆ.ವಿ.ಕಿಶೋರ್ ಕುಮಾರ್, ಡಾ.ಆನಂದ ಪಾಂಡುರಂಗಿ, ಡಾ.ಹಮೀದ್ ದಾಬೋಲ್ಕರ್ ಅವರಿಗೆ ಡಾ.ಅಶೋಕ್‌ ಪೈ ಮಾನಸ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು

ಶಿವಮೊಗ್ಗ : ಪ್ರಸ್ತುತ ದಿನಗಳಲ್ಲಿ ಸ್ಮರಣಾ ಶಕ್ತಿ ಜಾಗೃತಗೊಳಿಸುವಂತಹ ಶಿಕ್ಷಣ ಅಗತ್ಯವಿದೆ ಎಂದು ಚಿಂತಕ ಪ್ರೊ.ಗಣೇಶ್‌ ಎನ್‌.ದೇವಿ ಹೇಳಿದರು.

ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮಾನಸ ಟ್ರಸ್ಟ್‌ನಿಂದ ಶನಿವಾರ ಏರ್ಪಡಿಸಿದ್ದ ಡಾ.ಅಶೋಕ್‌ ಪೈ ಮಾನಸ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಶಿಕ್ಷಣ ಕೇವಲ ಪಠ್ಯ ಕೇಂದ್ರಿತವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ಬೌದ್ಧಿಕ ಮಟ್ಟ ವೃದ್ಧಿಯಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರಾಪಂಚಿಕಜ್ಞಾನದ ಶಿಕ್ಷಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮುನ್ನಡೆಯಬೇಕು. ಆಗ ಸಮಾಜಕ್ಕೆ ಸದೃಢ ಪ್ರಜೆಗಳನ್ನು ನೀಡಲು ಸಾಧ್ಯ ಎಂದರು.

ಡಾ.ಅಶೋಕ್ ಪೈ ಮನೋ ವಿಜ್ಞಾನವನ್ನು ಮನೆಮನೆಗೆ ತಲುಪಿಸುವಂತಹ ಕೆಲಸ ಮಾಡಿದ್ದರು. ಮನೋ ವಿಜ್ಞಾನದ ಕುರಿತು ಸಮಾಜಕ್ಕೆ ಜಾಗೃತಿ ಮೂಡಿಸುವಂತಹ ಅನೇಕ ಕೆಲಸ ಮಾಡಿದ್ಡರು. ಇಂತಹ ಕೆಲಸಗಳು ಎಲ್ಲಾ ಕಾಲಕ್ಕೂ ಮುಂದುವರೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾನಸ ಟ್ರಸ್ಟ್‌ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಸುರೇಶ್‌ ಹೆಬ್ಳೀಕರ್ ಮಾತನಾಡಿ, ‘ಡಾ.ಅಶೋಕ್‌ ಪೈ ಅವರು ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೇ ಚಲನಚಿತ್ರದ ಮೂಲಕವೂ ಮನೋವಿಜ್ಞಾನದ ವಿವಿಧ ಪ್ರಕಾರಗಳನ್ನು ತೋರಿಸುವ ಪ್ರಯತ್ನ ಮಾಡಿದ್ದರು. ಈ ಮೂಲಕ ಮನೋರೋಗಗಳ ಸಮಸ್ಯೆ ಮತ್ತು ಪರಿಹಾರವನ್ನು ಚಿತ್ರದ ಮೂಲಕ ತಿಳಿಸಿದ್ದರು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಕೆ.ವಿ.ಕಿಶೋರ್ ಕುಮಾರ್, ಡಾ.ಆನಂದ ಪಾಂಡುರಂಗಿ, ಡಾ.ಹಮೀದ್ ದಾಬೋಲ್ಕರ್ ಅವರಿಗೆ ಡಾ.ಅಶೋಕ್‌ ಪೈ ಮಾನಸ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜೋಗನ್ ಶಂಕರ್, ಡಾ.ರಾಜೇಂದ್ರ ಚೆನ್ನಿ, ಪ್ರಧಾನ ಟ್ರಸ್ಟಿ ಡಾ.ರಜನಿ ಪೈ, ಡಾ.ಪ್ರೀತಿ ಶಾನಭೋಗ್, ಮುಕುಂದ್ ಪೈ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

ಭದ್ರಾವತಿ
ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

21 Apr, 2018

ಸಾಗರ
ಪ್ರಧಾನಿ ಸಮ್ಮುಖದಲ್ಲೇ ನಡೆದಿದೆ ಅಭ್ಯರ್ಥಿಗಳ ಆಯ್ಕೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲೆ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ ಎಂದು ಸಾಗರ...

21 Apr, 2018

ಸೊರಬ
ಹಣ, ಹೆಂಡ, ತೋಳ್ಬಲ ಮೆಟ್ಟಿ ನಿಲ್ಲಿ

ಈ ಬಾರಿಯ ಚುನಾವಣೆಯನ್ನು ಸೊರಬ ತಾಲ್ಲೂಕಿನ ಮತದಾರರು ಪ್ರತಿಷ್ಠೆಯ ಚುನಾವಣೆಯನ್ನಾಗಿ ಪರಿಗಣಿಸದೇ ಹಣ, ಹೆಂಡ ಹಾಗೂ ತೋಳ್ಬಲವನ್ನು ಮೆಟ್ಟಿ ನಿಲ್ಲಬೇಕು ಎಂದು ಎಂದು ಬಿಜೆಪಿ...

21 Apr, 2018

ಸೊರಬ
ಕುಟುಂಬ ರಾಜಕಾರಣ ಅಂತ್ಯಗೊಳಿಸಿ

ಸೊರಬ ತಾಲ್ಲೂಕಿನ ಅಭಿವೃದ್ಧಿಗೆ 50 ವರ್ಷಗಳಿಂದ ಮಣ್ಣೆರಚಿದ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸಲು ಕಾಂಗ್ರೆಸ್‌ಗೆ  ಮತ ನೀಡಬೇಕು ಎಂದು ಇಲ್ಲಿನ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್...

21 Apr, 2018

ಶಿವಮೊಗ್ಗ
ಈಶ್ವರಪ್ಪ ವಿರುದ್ಧ ಹರಿಹಾಯ್ದ ಪ್ರಸನ್ನಕುಮಾರ್

ಎಲ್ಲ ಜಾತಿ, ಧರ್ಮದ ಜನರನ್ನೂ ಗೌರವಿ ಸುವುದು ಕಾಂಗ್ರೆಸ್ ಸಿದ್ಧಾಂತ. ಆದರೆ, ಬಿಜೆಪಿಗೆ ಅಭಿವೃದ್ಧಿಯ ಚಿಂತೆಯಿಲ್ಲ. ಕೇವಲ ಹಿಂಧೂ ಧರ್ಮದ ಹೆ ಸರಿನಲ್ಲಿ ಮತ...

21 Apr, 2018