ಏಕಕಾಲಕ್ಕೆ ಮುಗಿಬಿದ್ದ ರೈತರು

ತೊಗರಿ ಖರೀದಿ ನೋಂದಣಿಗೆ ನೂಕುನುಗ್ಗಲು: ಲಾಠಿ ಪ್ರಹಾರ

ನೋಂದಣಿ ಆರಂಭವಾಗುತ್ತಿದ್ದಂತೆಯೇ ಚೀಟಿ ಪಡೆಯಲು ಏಕಕಾಲಕ್ಕೆ ಮುಗಿಬಿದ್ದರು. ರೈತರ ಆತಂಕ ಹಾಗೂ ಧಾವಂತದಿಂದಾಗಿ ಆವರಣದಲ್ಲಿ ನೂಕುನುಗ್ಗಲು ಉಂಟಾಯಿತು. ರೈತರನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು, ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿದರು.

ಸಿಂದಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಮಂಗಳವಾರ ನೂಕುನುಗ್ಗಲು ಉಂಟಾಗಿದ್ದರಿಂದ, ಪೊಲೀಸರು ಲಾಠಿ ಬೀಸಿ ರೈತರನ್ನು ಚದುರಿಸಿದರು.

ಸಿಂದಗಿ (ವಿಜಯಪುರ ಜಿಲ್ಲೆ): ತೊಗರಿ ಖರೀದಿಗಾಗಿ ಹೆಸರು ನೋಂದಾಯಿಸಲು ಇಲ್ಲಿನ ಎಪಿಎಂಸಿಯಲ್ಲಿ ಮಂಗಳವಾರ ನೂಕುನುಗ್ಗಲು ಉಂಟಾಗಿದ್ದು, ರೈತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ತಾಲ್ಲೂಕಿನಲ್ಲಿ 10 ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲೆಲ್ಲ ಮಂಗಳವಾರ ಏಕಕಾಲಕ್ಕೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿ ಪ್ರಕ್ರಿಯೆ ವಾರದ ಹಿಂದೆಯೇ ಆರಂಭವಾಗಬೇಕಿತ್ತು. ಮೊದಲೇ ಹೆಸರು ಬರೆಯಿಸಿ, ಚೀಟಿ ಪಡೆಯಬೇಕು ಎಂದು ಹಲವಾರು ರೈತರು ಎರಡು ಮೂರು ದಿನಗಳಿಂದ ಕೇಂದ್ರದ ಎದುರೇ ಮಲಗಿದ್ದರು.

ನೋಂದಣಿ ಆರಂಭವಾಗುತ್ತಿದ್ದಂತೆಯೇ ಚೀಟಿ ಪಡೆಯಲು ಏಕಕಾಲಕ್ಕೆ ಮುಗಿಬಿದ್ದರು. ರೈತರ ಆತಂಕ ಹಾಗೂ ಧಾವಂತದಿಂದಾಗಿ ಆವರಣದಲ್ಲಿ ನೂಕುನುಗ್ಗಲು ಉಂಟಾಯಿತು. ರೈತರನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು, ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿದರು.

‘ಇಲ್ಲಿನ ಕೇಂದ್ರದಲ್ಲಿ 400 ರೈತರ ನೋಂದಣಿಗೆ ಅವಕಾಶವಿದೆ. ಇವತ್ತು 300 ಮಂದಿಗೆ ಚೀಟಿ ಕೊಟ್ಟಿದ್ದು ಸಂಜೆವರೆಗೂ ಕೇವಲ 45 ರೈತರ ನೋಂದಣಿ ಆಗಿದೆ. ಆನ್‌ಲೈನ್‌ನಲ್ಲಿ ಒಬ್ಬ ರೈತನ ನೋಂದಣಿ ಆಗಲು 20 ನಿಮಿಷ ಹಿಡಿಯುತ್ತದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಮುಖ ಅಶೋಕ ಅಲ್ಲಾಪುರ ‘ಪ್ರಜಾವಾಣಿ’ ಗೆ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಹೊಸ ಎತ್ತರಕ್ಕೇರಿದ ಸೂಚ್ಯಂಕ

36 ಸಾವಿರ ಅಂಶಗಳ ಗಡಿ ದಾಟಿ
ಹೊಸ ಎತ್ತರಕ್ಕೇರಿದ ಸೂಚ್ಯಂಕ

24 Jan, 2018

ನವದೆಹಲಿ
ತಯಾರಿಕಾ ವಲಯ ಪ್ರಗತಿ 5 ವರ್ಷದ ಗರಿಷ್ಠ ಮಟ್ಟಕ್ಕೆ

ದೇಶದ ತಯಾರಿಕಾ ವಲಯ ಡಿಸೆಂಬರ್‌ನಲ್ಲಿ ಉತ್ತಮ ಪ್ರಗತಿ ಸಾಧಿಸುವ ಮೂಲಕ 2017ನೇ ವರ್ಷ ಅಂತ್ಯವಾಗಿದೆ.

24 Jan, 2018

ಬೆಂಗಳೂರು
ಐಕಾಜ್ ಸ್ಟಾರ್ಟ್‌ಅಪ್‌ ಗ್ರ್ಯಾಬ್‍ ಸ್ವಾಧೀನಕ್ಕೆ

ದಕ್ಷಿಣ ಏಷ್ಯಾದ ಪ್ರಮುಖ ಮೊಬೈಲ್ ಪಾವತಿ ಸಂಸ್ಥೆಯಾಗಿರುವ ಗ್ರ್ಯಾಬ್, ಬೆಂಗಳೂರಿನ ಪಾವತಿ ಸ್ಟಾರ್ಟ್‌ಅಪ್‌ ಕಂಪನಿ ಐಕಾಜ್ ಸ್ವಾಧೀನಪಡಿಸಿಕೊಂಡಿದೆ.

24 Jan, 2018

ನವದೆಹಲಿ
ಪ್ರಯಾಣಿಕ ವಾಹನ: ಅಗ್ರ ಸ್ಥಾನದಲ್ಲಿ ಮಾರುತಿ

ಪ್ರಯಾಣಿಕ ವಾಹನ ಮಾರಾಟದಲ್ಲಿ ಮಾರುತಿ ಸುಜುಕಿ ಇಂಡಿಯಾ ಅಗ್ರ ಸ್ಥಾನದಲ್ಲಿದೆ. ಡಿಸೆಂಬರ್‌ನಲ್ಲಿ ಒಟ್ಟಾರೆ 10 ಮಾದರಿಯ ಪ್ರಯಾಣಿಕ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಅದರಲ್ಲಿ...

24 Jan, 2018
ಹೂಡಿಕೆದಾರರ ಸಂಪತ್ತು  ₹ 1 ಲಕ್ಷ ಕೋಟಿ ವೃದ್ಧಿ

ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯವೂ ಹೆಚ್ಚಳ
ಹೂಡಿಕೆದಾರರ ಸಂಪತ್ತು ₹ 1 ಲಕ್ಷ ಕೋಟಿ ವೃದ್ಧಿ

24 Jan, 2018