ವಿದ್ಯಾರ್ಥಿಗಳ ಗಲಾಟೆ

ಚಾಕುವಿನಿಂದ ಇರಿತ

‘ಸಿದ್ದರಾಜು ಕಾಮಾಕ್ಷಿಪಾಳ್ಯದವನಾಗಿದ್ದು, ಆತನಿಗೂ ನನಗೂ ನಿನ್ನೆ ಗಲಾಟೆ ಆಗಿತ್ತು. ಬೆಳಿಗ್ಗೆ ಗುಂಪು ಕಟ್ಟಿಕೊಂಡು ಬಂದು ನನ್ನನ್ನು ಹೆದರಿಸಿದ. ನಾನು ಯಾವುದಕ್ಕೂ ಹೆದರದೆ ಹೋದಾಗ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ’ ಎಂದು ಗಾಯಾಳು ವಿಘ್ನೇಶ್‌ ಪತ್ರಕರ್ತರಿಗೆ ವಿವರಿಸಿದರು.

ವಿಘ್ನೇಶ್‌ ಅವರನ್ನು ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಗೆ ಕರೆದೊಯ್ದರು

ರಾಮನಗರ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಪ್ಯಾರ ಮೆಡಿಕಲ್ ವಿದ್ಯಾರ್ಥಿಯೊಬ್ಬ ಸಹಪಾಠಿಯನ್ನೇ ಚಾಕುವಿನಿಂದ ಮೂರು ಕಡೆ ಇರಿದು ಗಾಯಗೊಳಿಸಿದ್ದಾನೆ.

ಬೆಳಿಗ್ಗೆ 10ರ ಸುಮಾರಿಗೆ ಮಕ್ಕಳ ವಿಭಾಗದ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿನ ರೋಗಿಗಳು , ಅವರ ಸಂಬಂಧಿಕರು ಹಾಗೂ ಅಲ್ಲಿನ ಸಿಬ್ಬಂದಿ ಬೆಚ್ಚಿ ಬಿದ್ದರು. ಜಿಲ್ಲಾ ಆಸ್ಪತ್ರೆಯ ಪ್ಯಾರ ಮೆಡಿಕಲ್ ಎರಡನೇ ವರ್ಷದ ವಿದ್ಯಾರ್ಥಿ ವಿಘ್ನೇಶ್‌ (20) ಇರಿತಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಚಾಕುವಿನಿಂದ ಇರಿದು ಸಿದ್ದರಾಜು ಪರಾರಿಯಾಗಿದ್ದಾನೆ.

ಈ ಇಬ್ಬರು ಸಹಪಾಠಿಗಳ ನಡುವೆ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಸ್ನೇಹಿತರ ಗುಂಪು ಕಟ್ಟಿಕೊಂಡು ಬಂದ ಸಿದ್ದರಾಜು, ವಿಘ್ನೇಶ್‌ ಅವರನ್ನು ಕೆಣಕಿದ್ದಾನೆ. ಆಗ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರೂ ನಂ. 14 ಕೊಠಡಿಗೆ ತೆರಳಿದ್ದು, ಅಲ್ಲಿ ಈ ಘಟನೆ ನಡೆದಿದೆ. ಕೊಠಡಿಯಲ್ಲಿ ಇದ್ದವರು ಬೆಚ್ಚಿ ಬಿದ್ದು ಹೊರಗೆ ಓಡಿ ಬಂದಿದ್ದಾರೆ.

‘ಸಿದ್ದರಾಜು ಕಾಮಾಕ್ಷಿಪಾಳ್ಯದವನಾಗಿದ್ದು, ಆತನಿಗೂ ನನಗೂ ನಿನ್ನೆ ಗಲಾಟೆ ಆಗಿತ್ತು. ಬೆಳಿಗ್ಗೆ ಗುಂಪು ಕಟ್ಟಿಕೊಂಡು ಬಂದು ನನ್ನನ್ನು ಹೆದರಿಸಿದ. ನಾನು ಯಾವುದಕ್ಕೂ ಹೆದರದೆ ಹೋದಾಗ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ’ ಎಂದು ಗಾಯಾಳು ವಿಘ್ನೇಶ್‌ ಪತ್ರಕರ್ತರಿಗೆ ವಿವರಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ವಿವೇಕ್‌ ದೊರೆ ಆಸ್ಪತ್ರೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪೊಲೀಸರ ವಶಕ್ಕೆ ಒಪ್ಪಿಸಿದರು.

‘ಆಸ್ಪತ್ರೆಯ ಒಳಗೆ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಪೊಲೀಸರಿಗೆ ನಾವೂ ದೂರು ನೀಡಿದ್ದೇವೆ’ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ವಿದೇಶಿ ಮದ್ಯದ ‘ಹಿತಾನುಭವ’

ರಾಜ್ಯದಲ್ಲೀಗ ದೇಶಿ ಮದ್ಯವೇ ದುಬಾರಿ, ಆಮದು ಬ್ರಾಂಡ್‌ ಅಗ್ಗ
ವಿದೇಶಿ ಮದ್ಯದ ‘ಹಿತಾನುಭವ’

20 Apr, 2018
ವಿಷ್ಣುವರ್ಧನ್‌ ಸಮಾಧಿಗೆ ಜಾಗ ನೀಡಲು ಆಗ್ರಹ

ಬೆಂಗಳೂರು
ವಿಷ್ಣುವರ್ಧನ್‌ ಸಮಾಧಿಗೆ ಜಾಗ ನೀಡಲು ಆಗ್ರಹ

20 Apr, 2018
ಬೆಂಗಳೂರು ಕ್ಲಬ್‌ಗೆ 150ನೇ ವರ್ಷಾಚರಣೆ ಸಂಭ್ರಮ

ಬೆಂಗಳೂರು
ಬೆಂಗಳೂರು ಕ್ಲಬ್‌ಗೆ 150ನೇ ವರ್ಷಾಚರಣೆ ಸಂಭ್ರಮ

20 Apr, 2018
ವೇದಳಿಗೆ ಹೆಣ್ಣು ಮರಿ ಜನನದ ಸಂಭ್ರಮ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪುತ್ರೋತ್ಸವದ ಸಂಭ್ರಮ
ವೇದಳಿಗೆ ಹೆಣ್ಣು ಮರಿ ಜನನದ ಸಂಭ್ರಮ

20 Apr, 2018

ಬೆಂಗಳೂರು
ಕಾಂಗ್ರೆಸ್‌ ಬಣ್ಣ ಬಯಲು: ಪ್ರಕಾಶ್ ಜಾವಡೇಕರ್

‘ನ್ಯಾಯಮೂರ್ತಿ ಲೋಯಾ ಅವರದು ಸಹಜ ಸಾವು ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣದ ಮೂಲಕ ಅಮಿತ್ ಶಾ ಹೆಸರಿಗೆ ಮಸಿ...

20 Apr, 2018