ತೇಜಸ್ವಿ ಯಾದವ್‌ ಸೇರಿ ಮೂರು ಜನರಿಗೆ ನ್ಯಾಯಾಂಗ ನಿಂದನೆ ನೋಟಿಸ್‌

ಮೇವು ಹಗರಣ: ಲಾಲು ಸೇರಿ 16 ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟಣೆ ಮುಂದೂಡಿದ ನ್ಯಾಯಾಲಯ

ಲಾಲು ಪುತ್ರ ತೇಜಸ್ವಿ ಯಾದವ್‌, ಆರ್‌ಜೆಡಿಯು ಪಕ್ಷದ ಉಪಾಧ್ಯಕ್ಷ ರಘುವಂಶ ಪ್ರಸಾದ್‌ ಹಾಗೂ ಮನೋಜ್‌ ಝಾ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಂಗ ನಿಂದನೆ ಆರೋಪದಡಿ ನೋಟಿಸ್‌ ಜಾರಿ ಮಾಡಿದ್ದು, ಜ.23ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಮೇವು ಹಗರಣ: ಲಾಲು ಸೇರಿ 16 ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟಣೆ ಮುಂದೂಡಿದ ನ್ಯಾಯಾಲಯ

ರಾಂಚಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಶಿಕ್ಷೆಯ ಪ್ರಮಾಣ ಘೋಷಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಮುಂದೂಡಿದೆ.

ಅಡ್ವೊಕೇಟ್‌ ವಿಂದೇಶ್ವರಿ ಪ್ರಸಾದ್‌ ಅವರ ನಿಧನ ಕಾರಣದಿಂದ ಕೋರ್ಟ್‌ ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಿಲ್ಲ. ಲಾಲು ಪ್ರಸಾದ್‌ ಸೇರಿ 16 ಜನರನ್ನು ಅಪರಾಧಿಗಳಿಗೆ ಗುರುವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

ಲಾಲು ಪುತ್ರ ತೇಜಸ್ವಿ ಯಾದವ್‌, ಆರ್‌ಜೆಡಿಯು ಪಕ್ಷದ ಉಪಾಧ್ಯಕ್ಷ ರಘುವಂಶ ಪ್ರಸಾದ್‌ ಹಾಗೂ ಮನೋಜ್‌ ಝಾ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಂಗ ನಿಂದನೆ ಆರೋಪದಡಿ ನೋಟಿಸ್‌ ಜಾರಿ ಮಾಡಿದ್ದು, ಜ.23ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಒಟ್ಟು 22 ಆರೋಪಿಗಳ ಪೈಕಿ ಲಾಲು ಸೇರಿದಂತೆ 16 ಜನರನ್ನು ಅಪರಾಧಿಗಳು ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ನ್ಯಾಯಾಲಯ ಘೋಷಿಸಿ, ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್‌ ಮಿಶ್ರಾ ಸೇರಿ ಆರು ಮಂದಿಯನ್ನು ದೋಷಮುಕ್ತಗೊಳಿಸಿತ್ತು.

ಮತ್ತೊಂದು ಪ್ರಕರಣದಲ್ಲಿ 2013ರ ಸೆಪ್ಟೆಂಬರ್‌ 13ರಂದು ಲಾಲು ಅವರು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತಲ್ಲದೇ, ಐದು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಇದರಿಂದಾಗಿ ಅವರು ಲೋಕಸಭಾ ಸದಸ್ವತ್ವ ಕಳೆದುಕೊಂಡಿದ್ದರು.

ಮೇವು ಹಗರಣ: ಅಂದಿನಿಂದ ಇಂದಿನವರೆಗೆ

ಜನವರಿ, 1996: ಚಾಯಿಬಾಸಾ ಜಿಲ್ಲಾಧಿಕಾರಿಯಾಗಿದ್ದ ಅಮಿತ್‌ ಖರೆ ಅವರು ಪಶುಸಂಗೋಪನಾ ಇಲಾಖೆಯಲ್ಲಿ ತಪಾಸಣೆ ನಡೆಸಿದಾಗ ಮೇವು ಹಗರಣ ಬಯಲಿಗೆ. ಶೋಧಕಾರ್ಯದ ವೇಳೆ ವಶಪಡಿಸಿಕೊಳ್ಳಲಾಗಿದ್ದ ದಾಖಲೆಗಳು ಹಗರಣ ನಡೆದಿರುವ ಬಗ್ಗೆ ಪುರಾವೆ ಒದಗಿಸಿತ್ತು

ಮಾರ್ಚ್‌, 1996: ಮೇವು ಹಗರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದ ಪಟ್ನಾ ಹೈಕೋರ್ಟ್‌. ತೀರ್ಪಿನ ಅನುಸಾರ ಚಾಯಿಬಾಸಾ (ಅವಿಭಜಿತ ಬಿಹಾರ) ಖಜಾನೆಯಿಂದ ಹಣ ಪಡೆದ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲು‌

ಜೂನ್‌, 1997: ಆರೋಪಪಟ್ಟಿ ಸಲ್ಲಿಸಿದ ಸಿಬಿಐ. ಆರೋಪಿಗಳಲ್ಲಿ ಒಬ್ಬರಾಗಿ ಲಾಲು ಪ್ರಸಾದ್‌ ಹೆಸರು ದಾಖಲು

ಜುಲೈ, 1997: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಲಾಲು. ಪತ್ನಿ ರಾಬ್ಡಿದೇವಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ. ಸಿಬಿಐ ನ್ಯಾಯಾಲಯಕ್ಕೆ ಶರಣಾದ ಲಾಲು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಲಯ

ಏಪ್ರಿಲ್‌, 2000: ರಾಬ್ಡಿ ದೇವಿ ಕೂಡ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂದು ಹೆಸರಿಸಲಾಯಿತು. ಆದರೆ, ಅವರಿಗೆ ಜಾಮೀನು ಮಂಜೂರು

ಅಕ್ಟೋಬರ್‌, 2001: ರಾಜ್ಯ ವಿಭಜನೆ ನಂತರ ಜಾರ್ಖಂಡ್‌ ಹೈಕೋರ್ಟ್‌ಗೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ಫೆಬ್ರುವರಿ, 2002: ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

ಡಿಸೆಂಬರ್‌, 2006: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಲಾಲು ಮತ್ತು ರಾಬ್ಡಿದೇವಿ ಅವರನ್ನು ಖುಲಾಸೆ ಮಾಡಿದ ಪಟ್ನಾದ ಅಧೀನ ನ್ಯಾಯಾಲಯ

ಮಾರ್ಚ್‌, 2012: ಲಾಲು ಮತ್ತು ಪ್ರಕರಣದ ಮತ್ತೊಬ್ಬ ಆರೋಪಿ ಡಾ. ಜಗನ್ನಾಥ್‌ ಮಿಶ್ರಾ ವಿರುದ್ಧ ದೋಷಾರೋಪ ನಿಗದಿ

ಸೆಪ್ಟೆಂಬರ್‌ 30, 2013: ಮೇವು ಹಗರಣದ ಮತ್ತೊಂದು ಪ್ರಕರಣದಲ್ಲಿ (ಆರ್‌ಸಿ 20ಎ/96) ಲಾಲು, ಮಿಶ್ರಾ ಮತ್ತು ಇತರ 45 ಮಂದಿ ತಪ್ಪಿತಸ್ಥರು ಎಂದು ಸಾಬೀತು. ರಾಂಚಿ ಜೈಲಿಗೆ ಲಾಲು. ಲೋಕಸಭೆಯಿಂದ ಅನರ್ಹಗೊಂಡ ಆರ್‌ಜೆಡಿ ಮುಖ್ಯಸ್ಥ. ಚುನಾವಣೆ ಸ್ಪರ್ಧಿಸುವುದಕ್ಕೂ ನಿರ್ಬಂಧ

ಡಿಸೆಂಬರ್‌, 2013: ಲಾಲುಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

ಮೇ, 2017: ಸುಪ್ರೀಂ ಕೋರ್ಟ್‌ನ ಮೇ 8ರ ತೀರ್ಪಿನ ನಂತರ ವಿಚಾರಣೆ ಪುನಾರರಂಭ. ದೇವಗಡ ಖಜಾನೆಯಿಂದ ಹಣ ಪಡೆದ ಪ್ರಕರಣಕ್ಕೆ (ಆರ್‌ಸಿ 64ಎ/96) ಸಂಬಂಧಿಸಿದಂತೆ ಪ್ರತ್ಯೇಕ ವಿಚಾರಣೆ ಆರಂಭಿಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿದ ‘ಸುಪ್ರೀಂ’. ಒಂಬತ್ತು ತಿಂಗಳೊಳಗೆ ವಿಚಾರಣೆ ಮುಕ್ತಾಯಗೊಳಿಸಲು ನಿರ್ದೇಶನ

ಡಿಸೆಂಬರ್‌ 23, 2017: ಲಾಲು ಪ್ರಸಾದ್‌ ಮತ್ತು ಇತರ 15 ಆರೋಪಿಗಳು ಅಪರಾಧಿಗಳು ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯ. ಒಟ್ಟು ಆರು ಪ್ರಕರಣಗಳ ಪೈಕಿ ಎರಡರಲ್ಲಿ ಲಾಲು ತಪ್ಪಿತಸ್ಥ ಎಂಬುದು ಸಾಬೀತು.

Comments
ಈ ವಿಭಾಗದಿಂದ ಇನ್ನಷ್ಟು
ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ: ಸರ್ಕಾರಿ ಅಧಿಕಾರಿಗಳ ತಕ್ಷಣ ಬಂಧನಕ್ಕೆ ತಡೆ

ಸುಪ್ರೀಂ ಕೋರ್ಟ್ ಆದೇಶ
ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ: ಸರ್ಕಾರಿ ಅಧಿಕಾರಿಗಳ ತಕ್ಷಣ ಬಂಧನಕ್ಕೆ ತಡೆ

20 Mar, 2018
ವಿದ್ಯಾರ್ಥಿನಿಯರ ದಿರಿಸಿನ ಬಗ್ಗೆ ಸಹಾಯಕ ಪ್ರಾಧ್ಯಾಪಕ  ಆಕ್ಷೇಪಾರ್ಹ ಹೇಳಿಕೆ

ವಿದ್ಯಾರ್ಥಿಗಳಿಂದ ‘ಕಲ್ಲಂಗಡಿ ಹಣ್ಣು’ ಪ್ರತಿಭಟನೆ
ವಿದ್ಯಾರ್ಥಿನಿಯರ ದಿರಿಸಿನ ಬಗ್ಗೆ ಸಹಾಯಕ ಪ್ರಾಧ್ಯಾಪಕ ಆಕ್ಷೇಪಾರ್ಹ ಹೇಳಿಕೆ

20 Mar, 2018
ರಾಹುಲ್ ಗಾಂಧಿ ಭಾಷಣದ ಪ್ರಭಾವ; ಗೋವಾ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಪ್ರತಿಭಾನ್ವಿತ ಯುವಕರಿಂದ ಪಕ್ಷ ಕಟ್ಟಲು ಕರೆ
ರಾಹುಲ್ ಗಾಂಧಿ ಭಾಷಣದ ಪ್ರಭಾವ; ಗೋವಾ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

20 Mar, 2018
ತಮಿಳುನಾಡಿನಲ್ಲಿ ಮತ್ತೊಂದು ‍ಪೆರಿಯಾರ್ ಪ್ರತಿಮೆ ಧ್ವಂಸ

ಚೆನ್ನೈ
ತಮಿಳುನಾಡಿನಲ್ಲಿ ಮತ್ತೊಂದು ‍ಪೆರಿಯಾರ್ ಪ್ರತಿಮೆ ಧ್ವಂಸ

20 Mar, 2018
ಭಾರತದಲ್ಲಿ ರ‍್ಯಾಗಿಂಗ್ ಪ್ರಮಾಣ ಶೇ 75ರಷ್ಟು ಹೆಚ್ಚಳ

ಕರ್ನಾಟಕದಲ್ಲಿ ದುಪ್ಪಟ್ಟು
ಭಾರತದಲ್ಲಿ ರ‍್ಯಾಗಿಂಗ್ ಪ್ರಮಾಣ ಶೇ 75ರಷ್ಟು ಹೆಚ್ಚಳ

20 Mar, 2018