ಮೈಸೂರು

15 ಸಾವಿರ ಕಳಪೆ ಹೆಲ್ಮೆಟ್ ವಶ

ನಗರದಲ್ಲಿ ಪೊಲೀಸರು ಮಂಗಳವಾರ ನಡೆಸಿದ ಆಪರೇಷನ್ ಸೇಫ್‌ ರೈಡ್‌ಗೆ 15,501 ಹೆಲ್ಮೆಟ್‌ಗಳು ವಶವಾದವು. ಪೊಲೀಸರ ವಿನೂತನ ಕಾರ್ಯಾಚರಣೆಯಿಂದ ಸಾರ್ವಜನಿಕರು ಗಲಿಬಿಲಿಗೊಂಡರು.

ಮೈಸೂರು: ನಗರದಲ್ಲಿ ಪೊಲೀಸರು ಮಂಗಳವಾರ ನಡೆಸಿದ ಆಪರೇಷನ್ ಸೇಫ್‌ ರೈಡ್‌ಗೆ 15,501 ಹೆಲ್ಮೆಟ್‌ಗಳು ವಶವಾದವು. ಪೊಲೀಸರ ವಿನೂತನ ಕಾರ್ಯಾಚರಣೆಯಿಂದ ಸಾರ್ವಜನಿಕರು ಗಲಿಬಿಲಿಗೊಂಡರು.

ಬೆಳಿಗ್ಗೆ 10 ಗಂಟೆಯಿಂದ ಏಕಕಾಲಕ್ಕೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 1.30ರ ವರೆಗೂ ಮುಂದುವರಿಯಿತು. ಆಯಕಟ್ಟಿನ ಜಾಗಗಳಲ್ಲಿ ನಿಂತ ಸಿವಿಲ್ ಹಾಗೂ ಸಂಚಾರ ಪೊಲೀಸರು; ಕಳಪೆ ಹೆಲ್ಮೆಟ್ ಧರಿಸಿ ಬರುವವರಿಗೆ ಗಾಳ ಹಾಕಿದರು.

ಹೆಲ್ಮೆಟ್ ಧರಿಸಿದ್ದರೂ ಪೊಲೀಸರು ತಡೆಯುತ್ತಿರುವುದಾದರೂ ಏಕೆ ಎಂದು ವಾಹನ ಸವಾರರು ಗೊಂದಲಕ್ಕೆ ಒಳಗಾದರು. ಕಳಪೆ ಹೆಲ್ಮೆಟ್ ತೆಗೆದು ಅದಕ್ಕೊಂದು ಸ್ಟಿಕ್ಕರ್ ಅಂಟಿಸಿ, ಅದರ ಮೇಲೆ ವಾಹನದ ಸಂಖ್ಯೆ ಹಾಗೂ ಸವಾರರ ಮೊಬೈಲ್ ಸಂಖ್ಯೆ ಬರೆದುಕೊಂಡು ಐಎಸ್‌ಐ ಚಿಹ್ನೆ ಇರುವ ಹೆಲ್ಮೆಟ್‌ ಖರೀದಿಸಿ ಎಂದು ಹೇಳಿ, ಹೆಲ್ಮೆಟ್‌ ಅನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದಂತೆ ಜನ ಅವಕ್ಕಾದರು.

‘ಅರೆ ಇದು ₹ 500 ಕೊಟ್ಟು ಖರೀದಿಸಿದ್ದು. ವಾಪಸ್ ಕೊಡಿ. ಬೇಕಾದರೆ ಲಂಚ ತೆಗೆದುಕೊಳ್ಳಿ, ಇಲ್ಲವೇ ದಂಡ ವಿಧಿಸಿ. ಹೆಲ್ಮೆಟ್ ವಾಪಸ್ ಬೇಕೇ ಬೇಕು’ ಎಂದು ಕೆಲವರು ಪ್ರತಿರೋಧ ಒಡ್ಡಿದರು.

ಸಾರ್ವಜನಿಕರ ಆಕ್ರೋಶ

‘ರಾಜಾರೋಷವಾಗಿ ಕಳಪೆ ಹೆಲ್ಮೆಟ್ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವ ಪೊಲೀಸರು ಸಾರ್ವಜನಿಕರ ಮೇಲೆ ಮುಗಿಬಿದ್ದಿರುವುದು ಸರ್ವಥಾ ಸರಿಯಲ್ಲ’ ಎಂದು ಸರಸ್ವತಿಪುರಂನ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ಈಗಲೂ ನಗರದ ಹಲವೆಡೆ ಕಳಪೆ ಹೆಲ್ಮೆಟ್‌ ಅಗ್ಗದ ದರದಲ್ಲೆ ಸಿಗುತ್ತಿವೆ. ಸಹಜವಾಗಿಯೇ ಬಡವರು ಕಡಿಮೆ ಬೆಲೆಗೆ ದೊರಕುವ ಇಂತಹ ಹೆಲ್ಮೆಟ್‌ಗಳನ್ನು ಖರೀದಿಸುತ್ತಾರೆ. ಹಿಂಬದಿ ಸವಾರರಿಗೆ ಅರ್ಧ ತಲೆ ಮುಚ್ಚುವ ಹೆಲ್ಮೆಟ್‌ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದು ಸ್ಕೂಟರ್‌ಗಳಲ್ಲಿ ಇಟ್ಟುಕೊಳ್ಳಲು ಸುಲಭವೂ ಆಗಿದೆ. ಕೆಲವು ವ್ಯಾಪಾರಸ್ಥರು ಇಂತಹ ಹೆಲ್ಮೆಟ್‌ಗೆ ₹ 200ರಿಂದ ₹ 300 ದರ ಪಡೆದು ಅಮಾಯಕರನ್ನು ವಂಚಿಸಿದ್ದಾರೆ. ಇಷ್ಟೆಲ್ಲ ಆದರೂ ಕಳಪೆ ಹೆಲ್ಮೆಟ್ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಮೇಲೆ ಕಾರ್ಯಾಚರಣೆ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಅವರು ಪ್ರಶ್ನಿಸಿದರು.

ಇಂದಿನಿಂದ ದಂಡ

ಐಎಸ್‌ಐ ಅಥವಾ ಬಿಐಎಸ್‌ ಚಿಹ್ನೆ ಇಲ್ಲದ ಹೆಲ್ಮೆಟ್‌ ಧರಿಸಿದವರ ವಿರುದ್ಧ ಮುಂದುವರಿಯಲಿದ್ದು, ಬುಧವಾರದಿಂದ ಇಂತಹ ಹೆಲ್ಮೆಟ್ ಧರಿಸಿದವರ ವಿರುದ್ಧ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕಳಪೆ ಗುಣಮಟ್ಟದ ಹೆಲ್ಮೆಟ್‌ನಿಂದ ಯಾವುದೇ ಪ್ರಯೋಜನ ಇಲ್ಲ. ಸಾರ್ವಜನಿಕರು ಕೂಡಲೇ ಐಎಸ್‌ಐ ಚಿಹ್ನೆ ಇರುವ ಹೆಲ್ಮೆಟ್ ಖರೀದಿಸಬೇಕು. ಇಲ್ಲದಿದ್ದರೆ, ಅಂತಹರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಪಿರಿಯಾಪಟ್ಟಣ
ಟಿಕೆಟ್ ವಂಚಿತರ ಸಮಾಧಾನಕ್ಕೆ ಮುಂದಾದ ಕೇಂದ್ರ ಸಚಿವ

ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಮುಂದಾದ ಕೇಂದ್ರ ಸಚಿವ ಮನ್‌ ಸುಖ್‌ ಲಾಲ್‌ ಟಿಕೆಟ್‌ ವಂಚಿತರ ಆಕ್ರೋಶದಿಂದ ಸಭೆ ಮೊಟಕು ಗೊಳಿಸಿ ಅವರ ಸಂಧಾನಕ್ಕೆ...

20 Apr, 2018
ಬಸ್ ಬಿಟ್ಟರೆ ಮತ, ಇಲ್ಲದಿದ್ದರೆ ಬಹಿಷ್ಕಾರ

ಹಂಪಾಪುರ
ಬಸ್ ಬಿಟ್ಟರೆ ಮತ, ಇಲ್ಲದಿದ್ದರೆ ಬಹಿಷ್ಕಾರ

20 Apr, 2018

ಮೈಸೂರು
ಹಣ್ಣಿನ ವ್ಯಾಪಾರಿ ಪುತ್ರನಿಗೆ ಕೆವಿಪಿವೈ ಫೆಲೋಶಿಪ್‌

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಡೆಸುವ ‘ಕಿಶೋರ್‌ ವೈಜ್ಞಾನಿಕ ಪ್ರೋತ್ಸಾಹನ ಯೋಜನಾ (ಕೆವಿಪಿವೈ) ಫೆಲೋಶಿಪ್‌’ಗೆ ಬಾಳೆಹಣ್ಣಿನ ವ್ಯಾಪಾರಿಯ ಪುತ್ರ ಎಸ್‌.ಅರುಣ್‌ಕುಮಾರ್‌ ಸೇರಿ ಮೂವರು ವಿದ್ಯಾರ್ಥಿಗಳು...

20 Apr, 2018

ನಂಜನಗೂಡು
ಸಿದ್ದರಾಮಯ್ಯ, ಪುತ್ರ ಇಬ್ಬರೂ ಗೆಲ್ಲುವುದಿಲ್ಲ

ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆದರಿ ಓಡಿ ಹೋಗಿ ಬಾದಾಮಿಯಲ್ಲಿ ಸ್ಪರ್ಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

20 Apr, 2018

ಮೈಸೂರು
12 ಅಭ್ಯರ್ಥಿಗಳಿಂದ ಉಮೇದುವಾರಿಕೆ

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದ್ದು, ಎಚ್‌.ವಿಶ್ವನಾಥ್‌, ವಾಸು, ಅಬ್ದುಲ್‌ ಮಜೀದ್‌ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ 12 ಅಭ್ಯರ್ಥಿಗಳು ಗುರುವಾರ...

20 Apr, 2018