ಮಂಡ್ಯ

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌

ಎಲ್ಲಾ ಖಾಸಗಿ ಆಸ್ಪತ್ರೆಗಳ ಒಳರೋಗಿಗಳ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೊಸ ದಾಖಲಾತಿಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಒಪಿಡಿಗಳನ್ನು ಮಾತ್ರ ಬಂದ್‌ ಮಾಡಲಾಗಿತ್ತು.

ಎನ್‌ಎಂಸಿ ನೀಡಿದ್ದ ಮುಷ್ಕರ ಕರೆ ಬೆಂಬಲಿಸಿ ಮಂಡ್ಯದ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗ ಬಂದ್‌ ಮಾಡಿದ್ದವು

ಮಂಡ್ಯ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ಕೊಟ್ಟಿದ್ದ ಮುಷ್ಕರಕ್ಕೆ ನಗರದ ಖಾಸಗಿ ಆಸ್ಪತ್ರೆಗಳು ಬೆಂಬಲ ನೀಡಿದವು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಒಪಿಡಿಗಳನ್ನು ಬಂದ್‌ ಮಾಡಲಾಗಿತ್ತು.

ಎಲ್ಲಾ ಖಾಸಗಿ ಆಸ್ಪತ್ರೆಗಳ ಒಳರೋಗಿಗಳ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೊಸ ದಾಖಲಾತಿಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಒಪಿಡಿಗಳನ್ನು ಮಾತ್ರ ಬಂದ್‌ ಮಾಡಲಾಗಿತ್ತು. ಮುಷ್ಕರ ಮಾಹಿತಿ ಇಲ್ಲದೆ ಹಳ್ಳಿಗಳಿಂದ ಆಸ್ಪತ್ರೆಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡಿದರು.

ನಗರದ ರಾಮಕೃಷ್ಣ ಆಸ್ಪತ್ರೆ, ಅರ್ಚನಾ ಆಸ್ಪತ್ರೆ, ಸೇವಾ ನರ್ಸಿಂಗ್‌ ಹೋಂ, ಪ್ರಶಾಂತ್‌ ನರ್ಸಿಂಗ್‌ ಹೋಂ, ಸುಬ್ರಮಣ್ಯ ಆಸ್ಪತ್ರೆ, ಶಿಲ್ಪಶ್ರೀ ಆಸ್ಪತ್ರೆ ಸೇರಿ ವಿವಿಧೆಡೆ ಒಪಿಡಿಯಲ್ಲಿ ಚಿಕಿತ್ಸೆ ದೊರೆಯಲಿಲ್ಲ.

ಜಿಲ್ಲಾಸ್ಪತ್ರೆ ಸಜ್ಜು : ಮುಷ್ಕರದ ಮಾಹಿತಿ ಇದ್ದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆಸ್ಪತ್ರೆಗೆ ಬಂದ ಎಲ್ಲಾ ರೋಗಿಗಳಿಗೂ ಸೂಕ್ತ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು.

‘ಜಿಲ್ಲಾಸ್ಪತ್ರೆಯ ಎರಡು ವಿಭಾಗಗಳಲ್ಲಿ ವೈದ್ಯರು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳವಾರ ನಿಗದಿಯಾಗಿದ್ದ ತಿಂಗಳ ಸಭೆಯನ್ನು ರದ್ದು ಮಾಡಿ ಎಲ್ಲಾ ವೈದ್ಯಾಧಿಕಾರಿಗಳು ರೋಗಿಗಳ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ತಾಲ್ಲೂಕು ವೈದ್ಯಾಧಿಕಾರಿಗಳು ಆಯಾ ತಾಲ್ಲೂಕುಗಳಲ್ಲಿ ಯಾವುದೇ ತೊಂದರೆ ಆಗದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಪಾಂಡವಪುರ
ಚಳವಳಿ: ದರ್ಶನ್‌ ಪುಟ್ಟಣ್ಣಯ್ಯ ಎಚ್ಚರಿಕೆ

ಪಾಂಡವಪುರದಲ್ಲಿ ರೈತರ ಭತ್ತದ ಬೆಳೆ ಒಣಗಿಹೋಗುತ್ತಿದ್ದು, ಭತ್ತದ ರಕ್ಷಣೆಗಾಗಿ ಶೀಘ್ರದಲ್ಲಿಯೇ ನೀರು ಹರಿಸಬೇಕು. ಇಲ್ಲದಿದ್ದರೆ  ಹೋರಾಟ ನಡೆಸಲಾಗುವುದು ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ...

26 Apr, 2018

ಮಂಡ್ಯ
ಅಭಿವೃದ್ಧಿ ಕಾಣದ ಮಂಡ್ಯ ಕ್ಷೇತ್ರ: ಆಕ್ರೋಶ

‘ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್ ಪಕ್ಷಗಳು ಹಲವು ಬಾರಿ ಆಧಿಕಾರ ನಡೆಸಿವೆ. ಆದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ’ ಎಂದು ಪಕ್ಷೇತರ ಅಭ್ಯರ್ಥಿ...

26 Apr, 2018

ಮಂಡ್ಯ
113 ನಾಮಪತ್ರ ಸಿಂಧು, 2 ತಿರಸ್ಕೃತ

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಕಾರ್ಯ ಬುಧವಾರ ನಡೆಯಿತು. ಮಳವಳ್ಳಿ, ಹಾಗೂ ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ತಲಾ ಒಂದು ಸೇರಿ...

26 Apr, 2018
ಜಿಲ್ಲೆಯಾದ್ಯಂತ ‘ಹಸಿ ಬರಗಾಲ’: ಆತಂಕ

ಮಂಡ್ಯ
ಜಿಲ್ಲೆಯಾದ್ಯಂತ ‘ಹಸಿ ಬರಗಾಲ’: ಆತಂಕ

26 Apr, 2018
ಕಳೆಗುಂದಿದ ಮದ್ದೂರಮ್ಮ ದನಗಳ ಜಾತ್ರೆ

ಮದ್ದೂರು
ಕಳೆಗುಂದಿದ ಮದ್ದೂರಮ್ಮ ದನಗಳ ಜಾತ್ರೆ

25 Apr, 2018