ಮುಸ್ಲಿಂ ಮಹಿಳೆಯರ ಮಸೂದೆ 2017

ರಾಜ್ಯಸಭೆಯಲ್ಲಿ ‘ತಲಾಖ್‌’ ಜಟಾಪಟಿ

ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಆಗ್ರಹಿಸಿದವು. ಕಾನೂನುಬಾಹಿರವಾಗಿ ತ್ರಿವಳಿ ತಲಾಕ್‌ ಪದ್ಧತಿ ಅನುಸರಿಸುವುದನ್ನು ತಪ್ಪಿಸಲು ಮಸೂದೆ ಶೀಘ್ರ ಅಂಗೀಕಾರವಾಗಬೇಕು ಎಂದು ಬಿಜೆಪಿ ಪ್ರತಿಪಾದಿಸಿತು.

ರಾಜ್ಯಸಭೆಯಲ್ಲಿ ‘ತಲಾಖ್‌’ ಜಟಾಪಟಿ

ನವದೆಹಲಿ: ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಯಿತು.

ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಆಗ್ರಹಿಸಿದವು. ಕಾನೂನುಬಾಹಿರವಾಗಿ ತ್ರಿವಳಿ ತಲಾಕ್‌ ಪದ್ಧತಿ ಅನುಸರಿಸುವುದನ್ನು ತಪ್ಪಿಸಲು ಮಸೂದೆ ಶೀಘ್ರ ಅಂಗೀಕಾರವಾಗಬೇಕು ಎಂದು ಬಿಜೆಪಿ ಪ್ರತಿಪಾದಿಸಿತು.

ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಭಾರಿ ಗದ್ದಲದ ನಡುವೆಯೇ ಮಸೂದೆ ಮಂಡಿಸಿದರು. ವಿರೋಧ ಪಕ್ಷಗಳ ಗದ್ದಲಕ್ಕೆ ಅಷ್ಟೇ ಆಕ್ರೋಶಭರಿತರಾಗಿ ಆಡಳಿತ ಪಕ್ಷಗಳ ಸದಸ್ಯರೂ ಪ್ರತಿಕ್ರಿಯೆ ನೀಡಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು. ಮಧ್ಯಾಹ್ನ ನಂತರ 3 ಗಂಟೆಗೆ ಮತ್ತೆ ಸದನ ಸೇರಿದಾಗಲೂ ಪರಿಸ್ಥಿತಿ ತಿಳಿಯಾಗಲಿಲ್ಲ.

ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ನೀಡುವ ಗಂಡನಿಗೆ ಮೂರು ವರ್ಷ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಕಳೆದ ಡಿಸೆಂಬರ್‌ 28ರಂದು ಲೋಕಸಭೆ ಅನುಮೋದನೆ ನೀಡಿದೆ.

ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ಹಾಗಾಗಿ ಮಸೂದೆಯನ್ನು ತುರ್ತಾಗಿ ಅಂಗೀಕರಿಸಬೇಕು ಎಂದು ಸರ್ಕಾರ ವಾದಿಸಿತು. ಆದರೆ, ಮಸೂದೆ ಸಿದ್ಧಪಡಿಸುವಾಗ ಸಂಬಂಧಪಟ್ಟವರ ಅಭಿಪ್ರಾಯ ಪಡೆದಿಲ್ಲ. ಹಾಗಾಗಿ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು.

ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ಒತ್ತಾಯದ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸದೆ ಉಪಸಭಾಪತಿ ಪಿ.ಜೆ. ಕುರಿಯನ್‌ ಸದನವನ್ನು ಗುರುವಾರಕ್ಕೆ ಮುಂದೂಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ 47 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ !

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ ವರದಿ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ 47 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ !

20 Apr, 2018
ದೇಶದಾದ್ಯಂತ ಕಾಲ್ನಡಿಗೆ ಯಾತ್ರೆ ಮೂಲಕ ರಕ್ತದಾನ ಜಾಗೃತಿ ಮೂಡಿಸಿದ ಯುವಕ; ಇಲ್ಲಿವರೆಗೆ ಕ್ರಮಿಸಿದ್ದು 6,000 ಕಿಮೀ!

ಸಿಂಪ್ಲಿ ಬ್ಲಡ್ ಆ್ಯಪ್ ಮೂಲಕ ಜಾಗೃತಿ
ದೇಶದಾದ್ಯಂತ ಕಾಲ್ನಡಿಗೆ ಯಾತ್ರೆ ಮೂಲಕ ರಕ್ತದಾನ ಜಾಗೃತಿ ಮೂಡಿಸಿದ ಯುವಕ; ಇಲ್ಲಿವರೆಗೆ ಕ್ರಮಿಸಿದ್ದು 6,000 ಕಿಮೀ!

20 Apr, 2018

ಪಟ್ನಾ
ನಿತೀಶ್ ಸೇರಿ ಹನ್ನೊಂದು ಮಂದಿ ಪರಿಷತ್‌ಗೆ ಆಯ್ಕೆ

ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಉಪಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಮೋದಿ ಮತ್ತು ಆರ್‌ಜೆಡಿ ನಾಯಕಿ ರಾಬ್ಡಿದೇವಿ ಸೇರಿದಂತೆ ಒಟ್ಟು 11 ಮಂದಿ ರಾಜ್ಯ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ...

20 Apr, 2018

ಮುಂಬೈ
ಅತ್ಯಾಚಾರಿಗಳ ದೇಶ: ಬಾಂಬೆ ಹೈಕೋರ್ಟ್‌ ಆತಂಕ

ಭಾರತದಲ್ಲಿ ಕೇವಲ ಅತ್ಯಾಚಾರ ಮತ್ತು ಅಪರಾಧಗಳು ನಡೆಯುತ್ತವೆ ಎನ್ನುವ ಭಾವನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಇದರಿಂದ ದೇಶದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್‌...

20 Apr, 2018

ಭ್ರಷ್ಟಾಚಾರ ಆರೋಪ: ಹೈಕೋರ್ಟ್‌ ಮಹತ್ವದ ಆದೇಶ
ಅಧಿಕಾರ ವಹಿಸಿಕೊಂಡ 30 ನಿಮಿಷಗಳಲ್ಲೇ ನ್ಯಾಯಾಧೀಶ ಅಮಾನತು

ಭ್ರಷ್ಟಾಚಾರದ ಆರೋಪಕ್ಕಾಗಿ ಮೆಹಬೂಬ್‌ನಗರದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೊಲ್ಲ ರಂಗರಾವ್‌ ಅವರನ್ನು ಅಮಾನತು ಮಾಡಲಾಗಿದೆ.

20 Apr, 2018