ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಟಗಾರ್ತಿ ದ್ಯುತಿ ಚಾಂದ್‌ ನಿರಾಳ

ಐಎಎಫ್‌ ನಿರ್ಧಾರಕ್ಕೆ ಕ್ರೀಡಾ ನ್ಯಾಯಾಲಯದಿಂದ ತಡೆ ಮುಂದುವರಿಕೆ
Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಪುರುಷ ಹಾರ್ಮೋನ್‌ ಅಧಿಕವಾಗಿರುವ ಮಹಿಳೆಯರು ಸ್ಪರ್ಧಿಸುವುದನ್ನು ತಡೆಯುವ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ನ ನಿರ್ಧಾರದ ಮೇಲೆ ಹೇರಿದ್ದ ನಿಷೇಧವನ್ನು ಕ್ರೀಡಾ ನ್ಯಾಯಾಲಯ ಆರು ತಿಂಗಳು ಮುಂದುವರಿಸಿದೆ.

ನ್ಯಾಯಾಲಯದ ಈ ನಡೆಯಿಂದಾಗಿ ಭಾರತದ ಓಟಗಾರ್ತಿ ದ್ಯುತಿ ಚಾಂದ್ ಅವರು ನಿರಾಳವಾಗಿದ್ದಾರೆ. ಮುಂಬರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಅವರ ಹಾದಿ ಸುಲಭವಾಗಿದೆ.

‘ಆರು ತಿಂಗಳ ಕಾಲ ನಿಷೇಧದ ಮೇಲೆ ತಡೆ ಹೇರಲಾಗಿದೆ. ಈ ಅವಧಿಯಲ್ಲಿ ತನ್ನ ನಿರ್ಧಾರವನ್ನು ಹೇಗೆ ಜಾರಿಗೆ ತರುತ್ತದೆ ಎಂಬುದನ್ನು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ (ಐಎಎಎಫ್‌) ನ್ಯಾಯಾಲಯಕ್ಕೆ ವಿವರಿಸಬೇಕು’ ಎಂದು ಪ್ರಕಟಣೆ ತಿಳಿಸಿದೆ.

‘ತನ್ನ ನಿಯಮಾವಳಿಗಳಲ್ಲಿ ಮಾಡುವ ತಿದ್ದುಪಡಿಗೆ ಸಂಬಂಧಿಸಿ ಐಎಎಎಫ್‌ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಪುರುಷ ಹಾರ್ಮೋನ್ ಹೆಚ್ಚು ಇರುವ ಮತ್ತು ನಿಗದಿತ ಪ್ರಮಾಣದಲ್ಲಿರುವವರ ಸಾಮರ್ಥ್ಯದಲ್ಲಿ ಏನು ವ್ಯತ್ಯಾಸವಿದೆ ಎಂಬುದನ್ನು ತಿಳಿಸಬೇಕು’ ಎಂದು ಕೂಡ ನ್ಯಾಯಾಲಯ ತಿಳಿಸಿದೆ.

2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುವುದರಿಂದ ದ್ಯುತಿ ಚಾಂದ್ ಮೇಲೆ ನಿಷೇಧ ಹೇರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT