ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇತನ ಹೆಚ್ಚಳ, ಸೇವಾ ಭದ್ರತೆ ಘೋಷಿಸಿ’

Last Updated 3 ಫೆಬ್ರುವರಿ 2018, 6:34 IST
ಅಕ್ಷರ ಗಾತ್ರ

ಬಳ್ಳಾರಿ: ‘ಸೇವಾ ಭದ್ರತೆ ಕಲ್ಪಿಸಬೇಕು ಮತ್ತು ವೇತನ ಹೆಚ್ಚಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವರನ್ನು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದ ಜಿಲ್ಲಾಧಿಕಾರಿ ಕಚೇರಿ ಹೊರಗೆ ಶುಕ್ರವಾರ ಧರಣಿ ನಡೆಸಿದರು.

‘ರಾಜ್ಯದ 411 ಕಾಲೇಜುಗಳಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 13,000ಕ್ಕೂ ಹೆಚ್ಚು ಉಪನ್ಯಾಸಕರು ಅತಿ ಕಡಿಮೆ ವೇತನ ಪಡೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ಇಲ್ಲವಾಗಿದೆ’ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಟಿ.ದುರುಗಪ್ಪ ಆರೋಪಿಸಿದರು.

‘ಪ್ರಸಕ್ತ ಸಾಲಿನಲ್ಲಿ 2160 ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಂಡಿದ್ದರಿಂದ 4320 ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡರು. ಅವರ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಹೀಗಾಗಿ ವಿವಿಧ ಇಲಾಖೆಗಳ ಗುತ್ತಿಗೆ ನೌಕರರನ್ನು ಕಾಯಂ ಮಾಡಿದ ರೀತಿಯಲ್ಲೇ ಉಪನ್ಯಾಸಕರನ್ನೂ ಕಾಯಂ ಮಾಡಬೇಕು’ ಎಂದು ಆಗ್ರಹಿಸಿದರು.

‘2017-18ನೇ ಶೈಕ್ಷಣಿಕ ಸಾಲಿನವರೆಗೂ ಕರ್ತವ್ಯ ನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವಾ ಭದ್ರತೆ ವ್ಯಾಪ್ತಿಗೆ ತಂದು ಸಂಪುಟ ಸಮಿತಿಯಲ್ಲಿ ಇತ್ಯರ್ಥ ಪಡಿಸಬೇಕು. ಮಂಡಿಸಲಿರುವ ಆಯುವ್ಯಯದಲ್ಲಿ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆಯನ್ನು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಜೋಳದರಾಶಿ ಹನುಮೇಶ್, ಕೆ.ಬಸಪ್ಪ, ಡಿ.ಸಿದ್ದೇಶ್, ಟಿ.ರುದ್ರಮುನಿ, ಶ್ಯಾಮೂರ್ತಿ, ಎಸ್.ಎಂ.ರಮೇಶ್, ಮಹಿಳಾ ಪ್ರತಿನಿಧಿಗಳಾದ ಅನಿತಾಯುವರಾಜ ಕಡಾದಿ, ಸುಭಾಷಿಣಿ, ಶುಭ, ಜ್ಯೋತಿ ನೇತೃತ್ವ ವಹಿಸಿದ್ದರು. ರಫೀ, ಗುರುರಾಜ, ಹೆಚ್.ಹುಸೇನಪ್ಪ, ಜಿ.ಪಂಪಾಪತಿ, ಗಾದಿಲಿಂಗಪ್ಪ, ಚಿಕ್ಕಗಾದಿಲಿಂಗಪ್ಪ, ಎಸ್.ಕೆಂಚಪ್ಪ, ಸಿದ್ದರಾಮ ಕಲ್ಮಠ, ಚಿದಾನಂದಪ್ಪ, ಅಂಜಿನಿ, ಹೊನ್ನೂರಪ್ಪ, ಕೆಂಚಪ್ಪ, ಕಪ್ಪಗಲ್ ಗಾದಿಲಿಂಗಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT