ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ, ಟೊಮೆಟೊ ಬೆಲೆ ಇಳಿಕೆ

Last Updated 12 ಫೆಬ್ರುವರಿ 2018, 10:29 IST
ಅಕ್ಷರ ಗಾತ್ರ

ಹಾವೇರಿ: ಕೆಲವು ತಿಂಗಳಿನಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಬೆಲೆಯು ಈಗ ಇಳಿಕೆಯಾಗಿದೆ. ಆದರೆ, ಟೊಮೆಟೊ ಬೆಲೆ ತೀರಾ ಕನಿಷ್ಠಮಟ್ಟಕ್ಕೆ ಕುಸಿದು ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ.

ಈರುಳ್ಳಿ ಬೆಲೆಯು ಕೆಲವು ದಿನಗಳ ಹಿಂದಿನ ತನಕ ಕೆ.ಜಿ.ಗೆ ₹ 45ರಿಂದ ₹ 55ರ ವರೆಗೆ ಇತ್ತು. ಆದರೆ, ಕಳೆದ ವಾರದಿಂದ ಸ್ಥಳೀಯ ಈರುಳ್ಳಿಯು ಹಾವೇರಿಯ ಮಾರುಕಟ್ಟೆಗೆ ಬರಲು ಆರಂಭಿಸಿದ್ದು, ಕೆ.ಜಿ.ಗೆ ₹ 20ರಿಂದ ₹ 25ರ ವರೆಗೆ ಮಾರಾಟಗೊಳ್ಳುತ್ತಿದೆ.

‘ಮಾರುಕಟ್ಟೆಗೆ ಟೊಮೆಟೊ ಗರಿಷ್ಠ ಆವಕವಾಗುತ್ತಿದ್ದು, ಬೆಲೆ ತೀವ್ರ ಕುಸಿತ ಕಂಡಿದೆ. ಕೆ.ಜಿ.ಗೆ ಕೇವಲ ₹ 2ರಿಂದ ₹3ಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ, ಟೊಮೆಟೊ ಬೆಳೆದ ರೈತರು ಕಣ್ಣೀರು ಹಾಕುವ ಸ್ಥಿತಿಗೆ ಬಂದಿದ್ದಾರೆ’ ಎಂದು ತರಕಾರಿ ವ್ಯಾಪಾರಿ ಹನುಮಂತಪ್ಪ ತಳವಾರ ‘ಪ್ರಜಾವಾಣಿ’ಗೆ ಜೊತೆ ನೋವು ತೋಡಿಕೊಂಡರು.

‘ಮಾರುಕಟ್ಟೆಯಲ್ಲಿ ಟೊಮೆಟೊ ಜೊತೆ ಇತರ ತರಕಾರಿಗಳ ಬೆಲೆಯೂ ಕಡಿಮೆಯಾಗಿವೆ. ಕಳೆದ ತಿಂಗಳು ಹಸಿಮೆಣಸಿನಕಾಯಿಯನ್ನು ₹50ರಿಂದ ₹ 60ರ ವರೆಗೆ ಮಾರುತ್ತಿದ್ದೆವು. ಆದರೆ, ಈ ವಾರ ₹30ರಿಂದ ₹ 40ರ ವರೆಗೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಹಿರೇಕಾಯಿ ಕೆ.ಜಿ.ಗೆ ₹30ರಿಂದ ₹ 40, ಸೌತೆಕಾಯಿ ಕೆ.ಜಿ.ಗೆ ₹10ರಿಂದ ₹15, ಎಲೆ ಕೋಸು ಹಾಗೂ ಹೂ ಕೋಸು ₹20ರಿಂದ ₹30ರ ವರೆಗೆ ಮಾರುತ್ತಿದ್ದೇವೆ ಎಂದು ತರಕಾರಿ ವ್ಯಾಪಾರಿ ರಬ್ಬಾನಿ ಹೊಂಬಳಿ ತಿಳಿಸಿದರು. ಬೀನ್ಸ್‌, ಬೆಂಡಿಕಾಯಿ, ಚವಳಿಕಾಯಿ, ಆಲೂಗಡ್ಡೆಗಳ ದರದಲ್ಲಿ ವ್ಯತ್ಯಯ ಆಗಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT