ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌ ಅಧಿಕಾರಿ ಬದಲು ಶಾಸಕನಾದೆ!

Last Updated 23 ಮಾರ್ಚ್ 2018, 13:10 IST
ಅಕ್ಷರ ಗಾತ್ರ

ಶಹಾಪುರ: ಶಾಸಕನಾಗುವ ಬಯಕೆ ಇರಲಿಲ್ಲ. ರಾಜಕೀಯ ಕ್ಷೇತ್ರ ಎಂದೂ ಬಯಸಿರಲಿಲ್ಲ. ಅನಿವಾರ್ಯ ಕಾರಣದಿಂದ ರಾಜಕೀಯ ಕ್ಷೇತ್ರಕ್ಕೆ ಬಂದೆ ಎಂದು ಶಾಸಕ ಗುರುಪಾಟೀಲ ಶಿರವಾಳ ಮಾತು ಆರಂಭಿಸಿದರು.

‘ಶಾಸಕನಾದ ಮೇಲೆ ಸದನದ ನಿಯಮಾವಳಿ ಪುಸ್ತಕವನ್ನು ಅಧ್ಯಯನ ಮಾಡುವುದರ ಜತೆಗೆ ಹಿರಿಯರ ಅನುಭವ ಪಡೆದುಕೊಂಡೆ. ಸದನ ನಡೆಯುವ ಮೂರು ತಿಂಗಳು ಮೊದಲು ಕ್ಷೇತ್ರದ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಪ್ರಶ್ನೆಗಳನ್ನು ಕಳುಹಿಸಿ ಸರ್ಕಾರದ ಗಮನದ ಸೆಳೆದೆ.
ರಾಜ್ಯದಲ್ಲಿ ಮರಳು ಸಾಗಾಣಿಕೆ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತಿದಾಗ ಸರ್ಕಾರ ಮರಳು ಮಾಫಿಯಾದಲ್ಲಿ ಭಾಗಿಯಾಗಿಲ್ಲ ಎಂದು ಉತ್ತರಿಸಿತ್ತು.

ಮರು ದಿವಸವೇ ಸರ್ಕಾರ ಯಾದಗಿರಿ ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಿತು. ಆಗ ಇಡೀ ಸದನದಲ್ಲಿ ನನ್ನ ಪ್ರಶ್ನೆಗೆ ಹೆಚ್ಚಿನ ಮಹತ್ವ ಬಂದಿತು’ ಎಂದು ಮೊದಲ ಶಾಸಕನಾದ ಮೇಲೆ ಸದನದ ಗಮನ ಸೆಳೆದ ಪರಿ ನೆನಪಿಸಿಕೊಂಡರು.

‘ಪರಿಶಿಷ್ಟರಿಗೆ ಸುಮಾರು ವರ್ಷದಿಂದ ಕೃಷಿ ಇಲಾಖೆ ವತಿಯಿಂದ ಸಲಕರಣೆ ನೀಡಲಾಗುತ್ತಿಲ್ಲ. ರೈತರಿಗೆ ಬೇಕಾಗುವ ಸಲಕರಣೆ ನೀಡುತ್ತಿಲ್ಲ ಎಂದು ಸದನದಲ್ಲಿ ಗಮನ ಸೆಳೆದಾಗ, ಬದಲಾವಣೆಗೆ ಒಪ್ಪಿಗೆ ಸೂಚಿಸಿತು. ಎಚ್‌ಕೆಆರ್‌ಡಿಬಿಯು ಪ್ರೇಕ್ಷಕರನ್ನು ಕುಳಿತುಕೊಳ್ಳಲು ಮೈದಾನ ನಿರ್ಮಿಸುತ್ತಿದೆ. ಆದರೆ. ಮೊದಲು ನಾವು ಕ್ರೀಡಾಪಟುಗಳನ್ನು ಸಿದ್ಧಪಡಿಸಬೇಕು ಎನ್ನುವ
ಬೇಡಿಕೆಗೆ ಸರ್ಕಾರ ಸ್ಪಂದಿಸಿ ಹೊಸ ಬದಲಾವಣೆಗೆ ಕಾರಣವಾಗಿದೆ’ ಎಂದು ಹೇಳಿದರು.

‘ಸದನದಲ್ಲಿ ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ ಅಂದಿನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ನನಗೆ ನೇರವಾಗಿ ‘ಏ ಶಿರವಾಳ ಮಾತಾಡು’ ಎಂದು ಶಿಕ್ಷಕರು ವಿದ್ಯಾರ್ಥಿಗಳನ್ನು ಗದರಿಸುವಂತೆ ನಮ್ಮನ್ನು ಎದ್ದು ನಿಂತು ಮಾತನಾಡಲು ಅವಕಾಶ ನೀಡಿದ್ದರು. ಇದರಿಂದ ಅನಿವಾರ್ಯವಾಗಿ ಚರ್ಚೆಗೆ ಸಿದ್ಧವಾಗುತ್ತಿದ್ದೆ. ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಚರ್ಚೆಯ ವಿಷಯಗಳ ಬಗ್ಗೆ ಹೆಚ್ಚಿನ ನೆರವು ಹಾಗೂ ಮಾರ್ಗದರ್ಶನ ನೀಡಿರುವುದು ಮರೆಯಲಾರೆ’ ಎಂದು ಸ್ಮರಿಸಿದರು.
**
ಶಿರವಾಳರ ಮೆಟ್ಟಿಲುಗಳು..

ಕಲಬುರ್ಗಿ ಎಸ್‌ಬಿಆರ್ ರೆಸಿಡೆನ್ಸಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣ. 1988ರಲ್ಲಿ ಪಿಯುಸಿ ತೇರ್ಗೆಡೆ. ನಂತರ 1991ರಲ್ಲಿ ಬೆಂಗಳೂರಿನ ಸೇಂಟ್‌ ಜೋಸೆಫ್ ಕಾಲೇಜಿನಿಂದ ಪದವಿ.

ಆ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದರು. 1994ರಲ್ಲಿ ಕಲಬುರ್ಗಿಯ ಎಸ್‌.ಎಸ್‌. ಕಾನೂನು ಕಾಲೇಜಿನಿಂದ
ಕಾನೂನು ಪದವಿ. ದೆಹಲಿಯಲ್ಲಿ ಮೂರು ವರ್ಷ ಐಎಎಸ್ ತರಬೇತಿ
ಪಡೆದರು.

2013ರಲ್ಲಿ ಅನಿರೀಕ್ಷಿತವಾಗಿ ಕೆಜೆಪಿಯಿಂದ ಶಾಸಕನಾದೆ. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆಗೊಂಡೆ. ಈಗ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವೆ ಎಂದು ಮನದಾಳದ ಇಂಗಿತ ವ್ಯಕ್ತಪಡಿಸಿದರು.
**
ಮೊದಲುಗಳು ..

ಒಮ್ಮೆಯೂ ನಾನು ಸ್ಥಳೀಯ ಸಂಸ್ಥೆ ಹಾಗೂ ಇನ್ನಿತರ ಚುನಾವಣೆಯಲ್ಲಿ ಸ್ಫರ್ಧಿಸಿದವನಲ್ಲ. ನೇರವಾಗಿ ಶಾಸಕನಾಗಿ ಸದನದಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದವರಲ್ಲಿ ನಾನೇ ಮೊದಲಿಗ. ಐಎಎಸ್ ಪಾಸ್ ಆಗುವ ಕನಸಿನಿಂದ ಹೊರಬಂದು ಈಗ ಅನೇಕ ಮೊದಲುಗಳನ್ನು ಪಡೆದುಕೊಂಡ ಧನ್ಯತೆ ನನ್ನಲ್ಲಿ ಉಳಿದುಕೊಂಡಿದೆ ಎನ್ನುತ್ತಾರೆ ಶಿರವಾಳ.
**
ರಾಜಕೀಯ ಕ್ಷೇತ್ರವು ಸಾಮಾನ್ಯ ಜನರಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜನರ ಬಯಕೆಗಳಿಗೆ ಕೊನೆ ಇಲ್ಲ. ಕ್ಷಣದಲ್ಲಿ ಈಡೇರಬೇಕು ಎನ್ನುವ ಮನಸ್ಥಿತಿ ಬಂದಿದೆ
– ಗುರುಪಾಟೀಲ ಶಿರವಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT