ಭಾರಿಪ ಬಹುಜನ ಮಹಾಸಂಘದ ಅಭ್ಯರ್ಥಿ ಗೋಖಲೆ ನಾಮಪತ್ರ ಸಲ್ಲಿಕೆ

ಸ್ವಾಭಿಮಾನದ ಬದುಕಿಗಾಗಿ ಸ್ಪರ್ಧೆ

ವಿಧಾನಸಭಾ ಕ್ಷೇತ್ರದ ಭಾರಿಪ ಬಹುಜನ ಮಹಾಸಂಘದ ಅಭ್ಯರ್ಥಿ ಅಂಕುಶ ಗೋಖಲೆ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಶನಿವಾರ ತೆರೆದ ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಬಂದು, ನಾಮಪತ್ರ ಸಲ್ಲಿಸಿದರು.

ಹುಮನಾಬಾದ್: ವಿಧಾನಸಭಾ ಕ್ಷೇತ್ರದ ಭಾರಿಪ ಬಹುಜನ ಮಹಾಸಂಘದ ಅಭ್ಯರ್ಥಿ ಅಂಕುಶ ಗೋಖಲೆ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಶನಿವಾರ ತೆರೆದ ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಬಂದು, ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಇಲ್ಲಿನ ಹಳೆ ತಹಶೀಲ್ದಾರ್‌ ಕಚೇರಿ ಬಳಿ ಜಮಾಗೊಂಡ ಅಂಕುಶ ಗೋಖಲೆ ಅವರ ನೂರಾರು ಬೆಂಬಲಿಗರು ವಾದ್ಯವೃಂದದೊಂದಿಗೆ ಗೋಖಲೆ ಪರ ಘೋಷಣೆ ಕೂಗುತ್ತ ಮುಖ್ಯ ರಸ್ತೆ ಮೂಲಕ ಡಾ.ಅಂಬೇಡ್ಕರ್‌ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಶಿವಚಂದ್ರ ನೆಲ್ಲೊಗಿ ವೃತ್ತಗಳ ಮೂಲಕ ಮಿನಿವಿಧಾನ ಸೌಧ ತೆರಳಿ ನಾಮಪತ್ರ ಸಲ್ಲಿಸಿದರು.

ಭಾರಿಪ ಬಹುಜನ ಮಹಾಸಂಘ ಬೀದರ್‌ ಉತ್ತರ ಕ್ಷೇತ್ರದ ಅಭ್ಯರ್ಥಿ ಜುಲ್ಪೀಕರ್‌ ಹಾಸ್ಮಿ, ಪಕ್ಷದ ತಾಲ್ಲೂಕು ಅಧ್ಯಕ್ಷ ಎಂ.ಡಿ.ಜಮೀಲ್‌ಖಾನ್‌, ಚೇತನ್‌ ಗೋಖಲೆ ಹಿರಿಯ ಮುಖಂಡರಾದ ಶಿವರಾಜ್‌ ಲಾಡ್ಕರ್‌, ಬಾಬುರಾವ ಕುಲಕರ್ಣಿ ಸೇರಿದಂತೆ ಪುರುಷ ಹಾಗೂ ಮಹಿಳಾ ಕಾರ್ಯಕರ್ತರು ಇದ್ದರು.

ಗೆಲ್ಲುವ ಆತ್ಮವಿಶ್ವಾಸ: ‘ಹುಮನಾಬಾದ್‌ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದ ಜನರು ಮೂಲಸೌಲಭ್ಯ ಸೌಲಭ್ಯ ಕೊರತೆ ಜತೆಯಲ್ಲಿ ಅತ್ಯಂತ ಭಯದಲ್ಲಿ ದಿನಗಳೆಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಉಳುವವರ ಭೂಮಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ ಕ್ಷೇತ್ರದ ಬಡ ರೈತರನ್ನು ಭೂರಹಿತರನ್ನಾಗಿ ಮಾಡುತ್ತಿದ್ದಾರೆ ಎಂದು ಭಾರಿಪ ಬಹುಜನ ಮಹಾಸಂಘ ಹುಮನಾಬಾದ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಂಕುಶ ಗೋಖಲೆ ದೂರಿದರು.

ಈ ಕ್ಷೇತ್ರದಲ್ಲಿ ಅಧಿಕಾರದಲ್ಲಿ ಇರುವವರಿಗೆ ದಲಿತರು ಹಾಗೂ ಅಲ್ಪಸಂಖ್ಯಾತರ ನೆನಪು ಚುನಾವಣೆ ಮಾತ್ರ ನೆನಪು ಬರುತ್ತದೆ. ಹಿಂದುಳಿದವರನ್ನು ಕರಿಬೇವಿನಂತೆ ಬಳಸಿ ಎಸೆಯುವ ಮನೋಭಾವ ಹೊಂದಿದ್ದರಿಂದ ಈಗಲೂ ದಲಿತರು ದಾಸ್ಯತ್ವದಿಂದ ಹೊರಗೆ ಬಂದಿಲ್ಲ. ತುಳಿತಕ್ಕೊಳಗಾದವರು ಎಲ್ಲರಂತೆ ಸ್ವಂತಂತ್ರ ಹಾಗೂ ಸ್ವಾಭಿಮಾನದಿಂದ ಬಾಳಿ ಬದುಕಬೇಕೆಂಬ ಕನಸುಹೊತ್ತು ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ಕಳೆದ ಬಾರಿ ಸೋತರು ಈ ಬಾರಿ ಗೆಲುವು ನಮ್ಮದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

ಚಿಟಗುಪ್ಪ
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

26 May, 2018

ಬಸವಕಲ್ಯಾಣ
ಹುಲಸೂರ ರಸ್ತೆ ಸುಧಾರಣೆಗೆ ಆಗ್ರಹ

ಬಸವಕಲ್ಯಾಣ– ಹುಲಸೂರ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಶುಕ್ರವಾರ ಇಲ್ಲಿನ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಾಂತಗೌಡ...

26 May, 2018

ಬೀದರ್
ದೇಶದಲ್ಲಿ ಏಳು ಸಾವಿರ ಸೊಳ್ಳೆ ಪ್ರಭೇದ 

‘ವಿಶ್ವದಲ್ಲಿ ಹನ್ನೊಂದು ಸಾವಿರ ಸೊಳ್ಳೆ ಪ್ರಭೇದಗಳಿವೆ. ಭಾರತದಲ್ಲಿ ಏಳು ಸಾವಿರ ಪ್ರಭೇದಗಳು ಕಾಣಸಿಗುತ್ತವೆ. ಅರಣ್ಯ ಪ್ರದೇಶದಲ್ಲಿರುವ ಸೊಳ್ಳೆಗಳಿಗಿಂತ ಜನವಸತಿ ಪ್ರದೇಶ ದಲ್ಲಿರುವ ಸೊಳ್ಳೆಗಳು ಇತ್ತೀಚಿನ...

26 May, 2018
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

ಬಸವಕಲ್ಯಾಣ
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

26 May, 2018
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

ಬಸವಕಲ್ಯಾಣ
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

25 May, 2018