ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: 18 ವಿದೇಶಿ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ

Published 1 ಮೇ 2024, 4:33 IST
Last Updated 1 ಮೇ 2024, 4:33 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಅನುಭವ ಪಡೆದುಕೊಳ್ಳಲು 10 ದೇಶಗಳ 18 ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ ನೀಡಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ವಿದೇಶಾಂಗ ಸಚಿವ ಜೈಶಂಕರ್‌ ಅವರೊಂದಿಗೆ ಈ ಪಕ್ಷಗಳ ಪ್ರತಿನಿಧಿಗಳು ಚರ್ಚೆಯನ್ನು ನಡೆಸಲಿದ್ದಾರೆ.

ಪಕ್ಷದ ಚುನಾವಣಾ ಪ್ರಚಾರದ ಒಳನೋಟಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುವುದಲ್ಲದೆ, ಒಟ್ಟಾರೆ ಚುನಾವಣೆಯ ರಣತಂತ್ರಗಳ ಬಗ್ಗೆ ಮಾಹಿತಿಯನ್ನೂ ನೀಡಲಾಗುವುದು ಎಂದು ಬಿಜೆಪಿ ತಿಳಿಸಿದೆ.

ಇಂದು (ಬುಧವಾರ) ಜೆ.ಪಿ ನಡ್ಡಾ ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರ ಜೊತೆ ವಿದೇಶಿ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ.

ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿ, ವಿಯೆಟ್ನಾಂನ ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂ, ಬಾಂಗ್ಲಾದೇಶದ ಅವಾಮಿ ಲೀಗ್, ಇಸ್ರೇಲ್‌ನ ಲಿಕುಡ್ ಪಕ್ಷ, ಉಗಾಂಡಾದ ರಾಷ್ಟ್ರೀಯ ಪ್ರತಿರೋಧ ಚಳವಳಿ, ತಾಂಜಾನಿಯಾದ ಚಮಾ ಚಾ ಮಪಿಂಡುಜಿ ಮತ್ತು ರಷ್ಯಾದ ಯುನೈಟೆಡ್ ರಷ್ಯಾ ಪಾರ್ಟಿಯ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡುತ್ತಿರುವ ರಾಜಕೀಯ ಪಕ್ಷಗಳಲ್ಲಿ ಸೇರಿವೆ.

ಶ್ರೀಲಂಕಾದಿಂದ ಶ್ರೀಲಂಕಾ ಪೊದುಜನ ಪೆರಮುನಾ ಮತ್ತು ಯುನೈಟೆಡ್ ನ್ಯಾಶನಲ್ ಪಾರ್ಟಿ, ಮಿಲಿಟೆಂಟ್ ಸೋಷಿಯಲಿಸ್ಟ್ ಮೂವ್‌ಮೆಂಟ್‌, ಮಾರಿಷಸ್ ಲೇಬರ್ ಪಾರ್ಟಿ, ಮಾರಿಷಸ್ ಮಿಲಿಟೆಂಟ್ ಮವ್‌ಮೆಂಟ್‌ ಮತ್ತು ಪಾರ್ಟಿ ಮಾರಿಷಿಯನ್ ಸೋಶಿಯಲ್ ಡೆಮಾಕ್ರಟ್ ಮಾರಿಷಸ್, ಮತ್ತು ನೇಪಾಳಿ ಕಾಂಗ್ರೆಸ್, ಜನಮತ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್), ಕಮ್ಯುನಿಸ್ಟ್ ನೇಪಾಳದ ಪಕ್ಷ (ಮಾವೋವಾದಿ) ಮತ್ತು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷಗಳಿಗೆ ಬಿಜೆಪಿ ಅಹ್ವಾನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT