ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹಗಳೆಲ್ಲ ವಜ್ರಾಂಗಿ ಕೆಬಿಬಿಎ ಕೃಶಾಂಗಿ

Last Updated 15 ಜುಲೈ 2018, 19:30 IST
ಅಕ್ಷರ ಗಾತ್ರ

ಬಾಡಿ ಬಿಲ್ಡಿಂಗ್‌ ಕ್ಷೇತ್ರದಲ್ಲಿ ಸಾಧನೆಗೆ ಬೆಂಬಲವಾಗಿ ಶ್ರಮಿಸುತ್ತಿದೆ ಕರ್ನಾಟಕ ಬಾಡಿ ಬಿಲ್ಡರ್ಸ್‌ ಅಸೋಸಿಯೇಷನ್ (ಕೆಬಿಬಿಎ).

ಕೆಬಿಬಿಎ ಪ್ರಾರಂಭವಾಗಿದ್ದು 1954ರಲ್ಲಿ. ಇದು ಇಂಡಿಯನ್ ಫಿಟ್‌ನೆಸ್ ಆ್ಯಂಡ್ ಬಾಡಿ ಬಿಲ್ಡರ್ಸ್‌ ಫೆಡರೇಷನ್‌ನ ಅಂಗಸಂಸ್ಥೆ. ಕಾಯಕ ಜಿಲ್ಲಾ ಹಾಗೂ ರಾಜ್ಯದ ಮಟ್ಟದ ಬಾಡಿ ಬಿಲ್ಡರ್ಸ್‌ಗಳನ್ನು ಗುರುತಿಸಿ ಅವರನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಶಿಫಾರಸ್ಸು ಮಾಡುವುದು. ಆ ಮೂಲಕ ರಾಜ್ಯದ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವ ಅಚಲ ನಿಲುವು ಅಸೋಸಿಯೇಷನ್‌ನದ್ದು. ಬಾಡಿ ಬಿಲ್ಡರ್ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಶ್ಯಕವಾದ ಎಲ್ಲ ರೀತಿಯ ಮಾರ್ಗದರ್ಶನವನ್ನು ಅಸೋಸಿಯೇಷನ್ ನೀಡುತ್ತದೆ.

ವಿದೇಶದಲ್ಲಿ ಬಾಡಿ ಬಿಲ್ಡಿಂಗ್ ಕ್ಷೇತ್ರ ಸದ್ದು ಮಾಡುತ್ತಿತ್ತು. ಈ ಕ್ಷೇತ್ರದಲ್ಲಿ ನಮ್ದೇ ಕಾರುಬಾರು,ನಮ್ದೇ ಹವಾ ಎಂಬ ಮಾತುಗಳು ಗಟ್ಟಿಯಾಗಿ ಸೌಂಡ್ ಮಾಡುತ್ತಿದ್ದ ಕಾಲದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಹಾಗೂ ರಾಜ್ಯವನ್ನು ಪ್ರತಿನಿಧಿಸಿ ಪದಕ ಗೆದ್ದು ಅಚ್ಚರಿ ಪಡುವಂತೆ ಮಾಡಿದ್ದು ಕೋಲಾರದ ವೆಂಕಟೇಶ್ ಅಯ್ಯರ್. ಕೆ.ವಿ.ಅಯ್ಯರ್ ಎಂದೇ ಅವರು ಚಿರಪರಿಚಿತ.

ಕೆ.ವಿ.ಅಯ್ಯರ್, ಬಾಡಿ ಬಿಲ್ಡಿಂಗ್‌ ಅನ್ನು ರಾಜ್ಯದಲ್ಲಿ ಪ್ರಮೋಟ್ ಮಾಡಿದವರ ಪೈಕಿ ಮೊದಲಿಗರಾಗಿ ನಿಲ್ಲುತ್ತಾರೆ. ಅದೇ ರೀತಿ ಹತ್ತಾರು ವರ್ಷಗಳಿಂದ ಸಾಕಷ್ಟು ಮಂದಿ ಈ ಅಸೋಸಿಯೇಷನ್‌ ಕಟ್ಟಿ ಬೆಳೆಸಿದ್ದಾರೆ.

ಅಸೋಸಿಯೇಷನ್‌ ಮೂಲಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ರಾಜ್ಯದ ಬಹುತೇಕರು ಪದಕ ಪಡೆದಿದ್ದಾರೆ. ಹಲವರಿಗೆ ಏಕಲವ್ಯ ಪ್ರಶಸ್ತಿ ದಕ್ಕಿದೆ. ಫಿಲಿಪ್ಪೈನ್ಸ್‌ನಲ್ಲಿ ನಡೆದ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ರಾಜ್ಯದ ಮನೋಜ್‌ಕುಮಾರ್ ಚಿನ್ನದ ಪದಕ ಪಡೆದಿದ್ದಾರೆ. ರಾಜಾ ಮುರುಗನ್ ಹಾಗೂ ಇಸ್ಮಾಯಿಲ್ ಬೆಳ್ಳಿ ಮತ್ತು ಸೈಯ್ಯದ್ ಸಿದ್ಧಿಕಿಕಂಚಿನ ಪದಕ ಪಡೆದುಕೊಂಡಿದ್ದಾರೆ. ಅಸೋಸಿಯೇಷನ್‌ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.

ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಬಾಡಿ ಬಿಲ್ಡರ್ಸ್‌ಗಳಿಗೆ ಸರ್ಕಾರ–ದಿಂದಲೂ ಹೆಚ್ಚು ಪ್ರೋತ್ಸಾಹವಿದೆ. ಸಾರಿಗೆ ಭತ್ಯೆ, ದಿನ ಭತ್ಯೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಸ್ಪರ್ಧಾಳುಗಳಿಗೆ ನೀಡುತ್ತದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಪ್ರತಿಭೆಗಳು ಪದಕ ಪಡೆದಿರುತ್ತಾರೆ. ಮುಂದೇನು ಎಂದು ಗೊತ್ತಿಲ್ಲದೆ, ಹಣಕಾಸು ಸಮಸ್ಯೆ, ಜೀವನ ನಿರ್ವಹಣೆ ಹಾಗೂ ದೇಹ ಪೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಅಂಥವರನ್ನು ಗುರುತಿಸಿ ಮಂದಿನ ಹಂತಗಳಿಗೆ ಕಳಿಸುವುದೇ ನಮ್ಮ ಕಾಯಕ ಎನ್ನುತ್ತಾರೆ ಅಸೋಸಿಯೇಷನ್‌ನ ಸಂಸ್ಥಾಪಕ ಸದಸ್ಯ ಹಾಗೂಇಂಡಿಯನ್ ಫಿಟ್‌ನೆಸ್ ಆ್ಯಂಡ್ ಬಾಡಿ ಬಿಲ್ಡರ್ಸ್‌ ಫೆಡರೇಷನ್‌ನ ಕಾರ್ಯದರ್ಶಿ ನಾಯ್ಡು.

‘ಉದಯ’ (ಮೊದಲ ಬಾರಿಗೆ ಪಾಲ್ಗೊಳ್ಳುವವರಿಗೆ), ‘ಕಿಶೋರ’ (21 ವರ್ಷದೊಳಗಿನವರಿಗೆ), ‘ಕುಮಾರ’ (24 ವರ್ಷದೊಳಗಿನವರಿಗೆ), ‘ಸೀನಿಯರ್ಸ್‌’ (25 ವರ್ಷಕ್ಕೂ ಮೇಲ್ಪಟ್ಟವರಿಗೆ) ಹಾಗೂ ‘ಮಾಸ್ಟರ್ಸ್‌’ (40 ವರ್ಷಕ್ಕೂ ಮೇಲ್ಪಟ್ಟವರಿಗೆ) ಸ್ಪರ್ಧೆಗಳನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳಬೇಕು ಎನ್ನುತ್ತಾರೆ ಅವರು.

ಸ್ವಂತ ಕಟ್ಟಡವಿಲ್ಲ
ಬಾಡಿ ಬಿಲ್ಡರ್ಸ್ ಕ್ಷೇತ್ರದಲ್ಲಿ ರಾಜ್ಯಕ್ಕೆ ನೂರಾರು ಪದಕಗಳು ಸಿಗಲು ಕಾರಣವಾಗಿರುವ ಹಾಗೂ 64 ವರ್ಷ ಇತಿಹಾಸವುಳ್ಳ ಕರ್ನಾಟಕ ಬಾಡಿ ಬಿಲ್ಡರ್ಸ್‌ ಅಸೋಸಿಯೇಷನ್‌ಗೆ ಸ್ವಂತ ಕಟ್ಟಡವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿಯೇ ಸಭೆ–ಸಮಾರಂಭಗಳನ್ನು ನಡೆಸಿಕೊಂಡು ಬಾಡಿ ಬಿಲ್ಡರ್ಸ್ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.

‘ಅಸೋಸಿಯೇಷನ್‌ಗೆ ಸ್ವಂತ ಕಚೇರಿ ಹಾಗೂ ಕ್ರೀಡಾಪಟುಗಳಿಗೆ ಸುಸಜ್ಜಿತ ತರಬೇತಿ ಕೇಂದ್ರ ನಿರ್ಮಿಸಲು ನಗರ ಪ್ರದೇಶದಲ್ಲಿ ಜಾಗ ನೀಡುವಂತೆ ಹಿಂದಿನ ಸರ್ಕಾರಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಅದನ್ನು ಪರಿಗಣಿಸುವ ಗೋಜಿಗೆ ಸರ್ಕಾರ ಇದುವರೆಗೆ ಹೋಗಿಲ್ಲ’ ಎನ್ನುತ್ತಾರೆ ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ಬಾಡಿ ಬಿಲ್ಡರ್ ಆಗಿರುವ ಟಿ.ಆರ್.ಮಂಜುನಾಥ ಹೆಗಡೆ.

*
ಗರದಲ್ಲಿ ಸುಮಾರು 200 ಮಂದಿ ಬಾಡಿ ಬಿಲ್ಡರ್ಸ್‌ಗಳಿದ್ದಾರೆ. ಬಾಡಿ ಬಿಲ್ಡಿಂಗ್ ಹಾಗೂ ಫಿಟ್‌ನೆಸ್‌ ಅನ್ನು ಉತ್ತೇಜಿಸುವುದು ನಮ್ಮ ಧ್ಯೇಯೋದ್ದೇಶ
-ಪಿ.ಎಸ್‌.ಬಿ. ನಾಯ್ಡು, ಸಂಸ್ಥಾಪಕ, ಕೆಬಿಬಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT