ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ವಾಭಾವಿಕ ನೈತಿಕ ನಿಲುವಿನ ಹಿಂಸೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವೇಶ್ಯಾವಾಟಿಕೆಯ ಬಗ್ಗೆ  ನಮ್ಮ ಈಗಿನ ಇರುಸುಮುರುಸು–ಇತ್ತೀಚಿನ ಕೆಲವು ಶತ­ಮಾನಗಳಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಮತಗಳ ಉಗ್ರ ನೈತಿಕ ನಿಲುವಿನ ಪ್ರಭಾವದ ಬಳುವಳಿ. ಹಿಂದೆ ವಾರಾಂಗನೆಯರು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು ಅವರಿಗೆ ಘನತೆ ಗೌರವ ಇತ್ತು. ನೃತ್ಯ, ಸಂಗೀತ ಮುಂತಾದ ವಿದ್ಯೆ­­ಗಳಲ್ಲಿ ವಿಶೇಷ ಪರಿಣತಿ ಹೊಂದಿದವ­ರಾಗಿರುತ್ತಿದ್ದರು. ಅನೇಕರು ಸಮಾಜಮುಖಿ­ಗಳೂ ಆಗಿದ್ದರು. ಕರ್ನಾಟಕದಲ್ಲಿ ಅಧಿಕ ಸಂಖ್ಯೆಯ ಕೆರೆಕಟ್ಟೆಗಳನ್ನು ಕಟ್ಟಿಸಿದವರು ವೇಶ್ಯೆ­ಯರೇ ಆಗಿದ್ದರು. ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ­ರುವ ಅತಿದೊಡ್ಡ ಕೆರೆಯ ಹೆಸರು ಸೂಳೆಕೆರೆ. ಸೂಳೆಕೆರೆ, ಸೂಳೆ­ಬಾವಿ ಹೆಸರಿನ ಊರುಗಳು ನಮ್ಮಲ್ಲಿವೆ.

ಮನುಷ್ಯರ ಮೂಲ­ಭೂತ ಅವಶ್ಯಕತೆ­ಗಳಲ್ಲಿ ಒಂದಾದ ಲೈಂಗಿಕ ಸುಖವನ್ನು ಆರೋಗ್ಯ­ಕರ ರೀತಿಯಲ್ಲಿ ಅವಶ್ಯಕತೆ ಇರುವ ಎಲ್ಲರಿಗೂ ಕೊಡಮಾಡುವುದು ನಾಗರಿಕ ಸಮಾಜದ ಆದ್ಯಕರ್ತವ್ಯ. ವಿವಾಹ ಅಥವಾ ದೀರ್ಘ­ಕಾಲ ಒಟ್ಟಿಗೆ ಬಾಳು­ವುದರ ಮೂಲಕ ಅಂತಹ ಸ್ವಾತಂತ್ರ್ಯ ಚಲಾವಣೆ ಅನೇಕರಿಗೆ ಸಾಧ್ಯ­ವಿಲ್ಲದಿರಬಹುದು. ಸಂಸಾರ ಸಾಗಿ­ಸಲು ಆರ್ಥಿಕವಾಗಿ ಸಬಲ­ರಿಲ್ಲದವರು, ಯಾರೂ ಮದುವೆಯಾಗಲು ಮುಂದೆ ಬಾರ­ದಂತಹ ಅಂಗ­ವಿಕಲರು, ಅಂತಹ ವ್ಯವಸ್ಥೆ­ಯಲ್ಲಿ ನಂಬಿಕೆ ಇಲ್ಲದವರು, ಮುಂತಾದವ­ರನ್ನು ವ್ಯವಸ್ಥೆ ಮೂಲಕವೇ ಲೈಂಗಿಕ ತೃಪ್ತಿ ಪಡೆಯ­ಬೇಕೆಂದು ಒತ್ತಾ­ಯಿ­ಸುವ ಹಕ್ಕು ಯಾರಿಗಿದೆ?

ಲೈಂಗಿಕತೆಯ ಬಗೆಗೆ ವಿಕೃತ ಮನೋ­ಭಾವದ ಅನೇಕ ಧಾರ್ಮಿಕ ಮುಖಂಡರು, ಬೂಟಾಟಿಕೆ­ಯನ್ನೇ ಬಂಡವಾಳ ಮಾಡಿ­ಕೊಂಡು ಸಮಾಜದ ಹುಸಿ ಗೌರವಕ್ಕೆ ಹಾತೊ­ರೆಯುವ ರಾಜಕಾರಣಿಗಳು ಈ ಬಗ್ಗೆ ತಳೆ­ಯುವ ನಿಲುವಿಗೆ ಸೊಪ್ಪು ಹಾಕದೇ ಪ್ರಜ್ಞಾ­ವಂತರು ಈ ಸಂಬಂಧ ರಚನಾತ್ಮಕ ಒತ್ತಾಯ ತರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT