ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೆಚ್ಚಿನ ಸಿಹಿ ತಿನಿಸು

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಮಕ್ಕಳು ಬೇಕರಿ ತಿಂಡಿಗಳನ್ನು ಹೆಚ್ಚಾಗಿ ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುವುದುಂಟು. ಹಾಗಾಗಿ ತಾಯಂದಿರು ಆದಷ್ಟು ಸಿಹಿ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಬೇಕು. ಮಕ್ಕಳು ‘ಅಮ್ಮಾ ನನಗೆ ಅದು ಮಾಡಿಕೊಡು, ಇದು ಮಾಡಿಕೊಡು’ ಎಂದು ಕೇಳುವುದುಂಟು. ಆಗ ತಾಯಂದಿರು ಅವರ ಮೇಲೆ ರೇಗುತ್ತಾರೆ. ಆಗ ಮಕ್ಕಳು ಬೇಕರಿ ತಿಂಡಿ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಇನ್ನೂ ಕೆಲವು ತಾಯಂದಿರು ತಾವೇ ಮಕ್ಕಳಿಗೆ ಹಣ ಕೊಟ್ಟು ಬೇಕರಿಗೆ ಕಳುಹಿಸುವುದುಂಟು. ಇದರ ಪರಿಣಾಮ ಮಕ್ಕಳ ಆರೋಗ್ಯ ಹದಗೆಡುತ್ತದೆ. ಹಾಗಾಗಿ ತಾಯಂದಿರು ಮಕ್ಕಳು ಕೇಳುವ ಎಲ್ಲಾ ತಿನಿಸುಗಳನ್ನು ಮನೆಯಲ್ಲಿಯೇ ಮಾಡಿಕೊಡಬೇಕು. ಈ ಸಿಹಿ ತಿನಿಸುಗಳನ್ನು ಸಾಕಷ್ಟು ದಿನ ಕೆಡದಂತೆ ಸಂಗ್ರಹಿಸಿಡಬಹುದು. ಕೆಡುವ ಮೊದಲೇ ಖಾಲಿಯಾಗುವುದಂತೂ ಸತ್ಯ. ಈ ಸಿಹಿ ತಿನಿಸಿನ ಸವಿರುಚಿಯನ್ನು ಮಕ್ಕಳೊಡನೆ ದೊಡ್ಡವರೂ ಸವಿಯಬಹುದು.

ಕ್ಯಾರೆಟ್ ಬರ್ಫಿ
ಸಾಮಗ್ರಿ: 1ಕೆ.ಜಿ. ಕ್ಯಾರೆಟ್, 1ಕಪ್ ಸಕ್ಕರೆ, ಕಾಲು ಕೆ.ಜಿ.ಕೋವ, 1ತೆಂಗಿನಕಾಯಿ, 1ಕಪ್ ತುಪ್ಪ (ಕೋವ ಹಾಕಿದರೆ ತುಪ್ಪ ಬೇಡ)

ವಿಧಾನ:
ಕ್ಯಾರೆಟ್ ಹೋಳು ಮಾಡಿ ಬೇಯಿಸಬೇಕು, ಮುಕ್ಕಾಲು ಭಾಗ ಬೆಂದ ಮೇಲೆ ಮೊದಲು ತೆಂಗಿನಕಾಯಿ, ಕ್ಯಾರೆಟ್ ಹಾಕಿ ರುಬ್ಬಿ. ಇದಕ್ಕೆ ಸಕ್ಕರೆ, ಕೋವ, ಏಲಕ್ಕಿ ಪುಡಿ ಎಲ್ಲಾ ಸೇರಿಸಿ ಒಲೆಯ ಮೇಲಿಟ್ಟು ಕೈಯಾಡುವುದು. ಪಾತ್ರೆಗೆ ಅಂಟದ ಮುದ್ದೆಯಾದಾಗ ಮಣೆ ಮೇಲೆ ಹಾಕಿ, ನಂತರ ಬಿಲ್ಲೆ ಕೊಯ್ಯುವುದು.

ಕೋವ ಬರ್ಫಿ
ಸಾಮಗ್ರಿ: ಅರ್ಧ ಕೆಜಿ ಕೋವ, 2 ತೆಂಗಿನಕಾಯಿ, 2 ಕಪ್ ಸಕ್ಕರೆ, 1 ಕಪ್ ಏಲಕ್ಕಿ ಪುಡಿ, 1 ಕಪ್ ಗೋಡಂಬಿ.

ವಿಧಾನ:
ತೆಂಗಿನಕಾಯಿ, ಗೋಡಂಬಿ ನುಣ್ಣಗೆ ರುಬ್ಬಬೇಕು. ಇದಕ್ಕೆ ಸಕ್ಕರೆ, ಕೋವ, ಏಲಕ್ಕಿ ಪುಡಿ ಎಲ್ಲಾ ಒಟ್ಟಿಗೆ ಕಲಸಿ ಒಲೆಯ ಮೇಲಿಟ್ಟು ಕೈಯಾಡಿಸಿ. ಪಾತ್ರೆಗೆ ಅಂಟದ ಮುದ್ದೆಯಾದಾಗ ಮಣೆ ಮೇಲೆ ಹರಡಿ, ಆರಿದ ಮೇಲೆ ಬೇಕಾದ ಆಕಾರದಲ್ಲಿ ಕೊಯ್ದುಕೊಳ್ಳಬಹುದು. ಕೊಯ್ಯುವುದು.

ಕಡ್ಲೆ ಬೇಳೆ ಹಿಟ್ಟಿನ ಬರ್ಫಿ
ಸಾಮಗ್ರಿ:
1ಕಪ್ ಕಡ್ಲೆಬೇಳೆ ಹಿಟ್ಟು, 1ಕಪ್ ತೆಂಗಿನಕಾಯಿ ತುರಿ, 1ಕಪ್ ಹಾಲು, 1ಕಪ್ ತುಪ್ಪ, 2 ಕಪ್ ಸಕ್ಕರೆ, ಅರ್ಧ ಕಪ್ ಗೋಡಂಬಿ ಅಥವಾ ಏಲಕ್ಕಿ ಪುಡಿ.

ವಿಧಾನ: ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಂದೇ ಸಾರಿ ಹಾಕಿ ಕಲಸಿ ಒಲೆಯ ಮೇಲಿಟ್ಟು ಕೈಯಾಡಿಸಿ. ಅದು ಪಾತ್ರೆಗೆ ಅಂಟದಂತೆ ಮುದ್ದೆಯಾಗುತ್ತದೆ. ಆಗ ಮಣೆ ಮೇಲೆ ಹಾಕಿ ಸವರಬೇಕು. ಆರಿದ ಮೇಲೆ ಬಿಲ್ಲೆ ಕೊಯ್ಯಬೇಕು.

ಬಾದಾಮಿ ಬರ್ಫಿ
ಸಾಮಗ್ರಿ: ಅರ್ಧ ಕೆ.ಜಿ. ಹಾಲುಪುಡಿ, ಅರ್ಧ ಕೆಜಿ ಸಕ್ಕರೆ, ಅರ್ಧ ಕೆ.ಜಿ. ತುಪ್ಪ, ಕಾಲು ಕೆಜಿ ಗೋಡಂಬಿ, 50 ಬಾದಾಮಿಕಾಯಿ.

ವಿಧಾನ:
ಗೋಡಂಬಿ, ಬಾದಾಮಿಯನ್ನು ಸಣ್ಣ ರವೆ ತರಹ ಪುಡಿ ಮಾಡಬೇಕು. ಸಕ್ಕರೆಗೆ ನೀರು ಹಾಕಿ ನಾರುಪಾಕ ಮಾಡಿಕೊಂಡು ಹಾಲು ಪುಡಿ ಹಾಕಿ. ಅದು ಬೆಂದ ಮೇಲೆ ಗೋಡಂಬಿ, ಬಾದಾಮಿ, ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ತಟ್ಟೆಗೆ ಹಾಕಿ ಬಿಲ್ಲೆ ಮಾಡಿ.

ಗೋಡಂಬಿ ಬರ್ಫಿ
ಸಾಮಗ್ರಿ: 1 ಕಪ್ ಗೋಡಂಬಿ, 1 ಕಪ್ ಸಕ್ಕರೆ, ಅರ್ಧ ಕಪ್ ಹಾಲು, 1ತೆಂಗಿನಕಾಯಿ, 2 ಚಮಚ ತುಪ್ಪ, ಕೇಸರಿ, ಏಲಕ್ಕಿ ಪುಡಿ.

ವಿಧಾನ:
ಗೋಡಂಬಿ, ತೆಂಗಿನ ತುರಿ ಬೇರೆ ಬೇರೆ ಹುರಿಯಬೇಕು. ಗೋಡಂಬಿಯನ್ನು ಹಾಲು ಹಾಕಿ ನುಣ್ಣಗೆ ರುಬ್ಬಿ ತೆಂಗಿನಕಾಯಿ, ಸಕ್ಕರೆ ಬೆರಸಿ ಒಲೆಯ ಮೇಲಿಟ್ಟು ಕೈಯಾಡಿಸಿ. 10-15 ನಿಮಿಷಗಳ ನಂತರ ಗಟ್ಟಿಯಾಗುತ್ತಾ ಬರುವಾಗ ಕೇಸರಿ, ಏಲಕ್ಕಿ ಪುಡಿ ಹಾಕಿ, 5ನಿಮಿಷ ಆದ ಮೇಲೆ ಕೆಳಗಿಳಿಸಿ ತಟ್ಟೆಗೆ ಸುರಿದು ಆರಿದ ಮೇಲೆ ಬಿಲ್ಲೆ ಕೊಯ್ಯುವುದು ಅಥವಾ ಅಚ್ಚಿಗೆ ಹಾಕಿ ಬೇಕಾದ ಆಕಾರದಲ್ಲಿ ಎತ್ತುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT