ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಿಕಾತನಯದತ್ತ ಪ್ರಶಸ್ತಿ ಪ್ರಕಟ

ಜಿ.ವಿ.ಕುಲಕರ್ಣಿ, ಬನ್ನಂಜೆ ಆಯ್ಕೆ
Last Updated 2 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿಯ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಡಾ.ದ.ರಾ.ಬೇಂದ್ರೆ ಅವರ ಹೆಸರಿನಲ್ಲಿ ಪ್ರತಿ ವರ್ಷ ಕೊಡಮಾಡುವ ಅಂಬಿ­ಕಾತನಯದತ್ತ ಪ್ರಶಸ್ತಿಗೆ ಈ ಬಾರಿ ವಿಜಯಪುರದ ಡಾ.ಜಿ.ವಿ. ಕುಲಕರ್ಣಿ ಹಾಗೂ  ಉಡುಪಿಯ ಬನ್ನಂಜೆ ಗೋವಿಂದಾಚಾರ್ಯ  ಆಯ್ಕೆಯಾಗಿ­ದ್ದಾರೆ.

‘ಪ್ರಶಸ್ತಿಯು  1 ಲಕ್ಷ ಮೊತ್ತ ಹೊಂದಿದ್ದು, ಇಬ್ಬರು ವಿದ್ವಾಂಸರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರಿಂದ ತಲಾ  50 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಫೆ. 1 ರಂದು ಇಲ್ಲಿಯ ಬೇಂದ್ರೆ ಭವನದಲ್ಲಿ ನಡೆಯಲಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬನ್ನಂಜೆ ಅವರು ಬೇಂದ್ರೆ ಕಾವ್ಯದಲ್ಲಿ ಪ್ರೀತಿ, ಆಧ್ಯಾತ್ಮಿಕತೆಗಳ ಶೋಧನೆ ಮಾಡಿದ್ದಾರೆ. ವ್ಯಾಖ್ಯಾನ ಕೃತಿಗಳು, ಕಾವ್ಯ, ನಾಟಕ, ಸಂಸ್ಕೃತ­ದಿಂದ ಅನುವಾದಗಳು, ಆಧುನಿಕ ಪರಿ­ಭಾಷೆಯಲ್ಲಿ ಪುರಾಣ, ಮಹಾ­ಕಾವ್ಯ­ಗಳ ಮರು ನಿರೂಪಣೆ ಮಾಡಿ­ದ್ದಾರೆ.  ಜಿ.ವಿ.ಕುಲಕರ್ಣಿ ಅವರೂ ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ ವಿಮರ್ಶೆ ಸೇರಿದಂತೆ ಸಾಹಿತ್ಯ ಕ್ಷೇತ್ರ­ದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ.

ಒಟ್ಟಾರೆ ಇಬ್ಬರೂ ವಿದ್ವಾಂಸರು ಬೇಂದ್ರೆ ಸಾಹಿತ್ಯದತ್ತ ಒಲವು ತೋರಿದವರು. ಈ ನಿಟ್ಟಿನಲ್ಲಿ ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಇಬ್ಬರನ್ನು ಆಯ್ಕೆ ಮಾಡಿದೆ’ ಎಂದು ಬಿದರಕುಂದಿ ವಿವರಿಸಿದರು.

ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ ವಿಜೇತರು
ಬೆಂಗಳೂರು: ಸ್ನಾತಕೋತ್ತರ ವಿದ್ಯಾರ್ಥಿ­ಗಳಿಗೆ ಬೇಂದ್ರೆ ಕಾವ್ಯಕೂಟ ಏರ್ಪಡಿಸಿದ್ದ ರಾಜ್ಯಮಟ್ಟದ ದ.ರಾ. ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ  ಜಿ.ಎನ್‌. ಉಷಾ ಮೊದಲ ಬಹುಮಾನಗಳಿಸಿದ್ದಾರೆ.

ಮೈಸೂರು ವಿವಿಯ ಮಂಜುಮಣಿ (ದ್ವಿತೀಯ), ತುಮಕೂರು ವಿವಿಯ ಎಸ್‌.ಆರ್‌. ವೆಂಕಟೇಶ್‌ (ತೃತೀಯ) ನಂತರದ ಸ್ಥಾನ ಪಡೆದಿದ್ದಾರೆ. ಬೇಂದ್ರೆ ಅವರ ಜನ್ಮದಿನವಾದ ಜ. 31ರಂದು ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಕಾವ್ಯಕೂಟದ ಅಧ್ಯಕ್ಷ ಡಾ.ಜಿ. ಕೃಷ್ಣಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT