ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮೌಲ್ಯ: ಬಿಎಸ್‌ಇ ದಾಖಲೆ

Last Updated 30 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ರಪಂಚದಲ್ಲಿ ಅತಿಹೆಚ್ಚು ಕಂಪೆನಿ­ಗಳನ್ನು ವಹಿವಾಟಿಗೆ ನೋಂದಾಯಿಸಿ­ಕೊಂಡಿ­ರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈ ಷೇರು ವಿನಿಮಯ ಕೇಂದ್ರವು (ಬಿಎಸ್‌ಇ) ಬಂಡವಾಳ ಮೌಲ್ಯದ ಆಧಾರದ ಮೇಲೆ ವಿಶ್ವದ ಹತ್ತರಲ್ಲಿ ಸ್ಥಾನ ಪಡೆದಿದೆ.

ಈ ವಾರದ ಮಧ್ಯಾಂತರದ ಚಟುವಟಿಕೆಯಲ್ಲಿ ಪೇಟೆಯ ಬಂಡವಾಳ ಮೌಲ್ಯವು ಒಂದು ನೂರು ಲಕ್ಷ ಕೋಟಿ ತಲುಪಿದೆ. ನ್ಯಾಶನಲ್‌ ಸ್ಟಾಕ್‌ ಎಕ್‌್ಸಚೇಂಜ್‌ ಬಂಡವಾಳ ಮೌಲ್ಯದ ದೃಷ್ಟಿಯಿಂದ 11ನೇ ಸ್ಥಾನದಲ್ಲಿದೆ. ಶುಕ್ರವಾರದಂದು ಕಂಡ ಬೃಹತ್‌ ಮುನ್ನಡೆಯ ಕಾರಣ ಬಿಎಸ್‌ಇ ಬಂಡವಾಳ  ಮೌಲ್ಯವು ರೂ. 99.81 ಲಕ್ಷ ಕೋಟಿಯಲ್ಲಿ ಹೊಸ ದಾಖಲೆಯ ಅಂತ್ಯ ಕಂಡಿತು.

ಸಂವೇದಿ ಸೂಚ್ಯಂಕವು ವಾರದ ಆರಂಭದ ದಿನ 28,541ರಲ್ಲಿ ಹೊಸ ಗರಿಷ್ಠ ಅಂತ್ಯದ ದಾಖಲೆ­ಯಿಂದ ಆರಂಭವಾಗಿ ವಾರಾಂತ್ಯದ ದಿನ ಸಾರ್ವಕಾಲೀನ ಗರಿಷ್ಠ ಹಂತ 28,822.37ರ ತಲುಪಿದೆ. ಈ ಏರಿಕೆಗೆ ಹಿಂದೂಸ್ತಾನ್‌ ಯೂನಿಲಿ­ವರ್‌, ಹೆಚ್‌ಡಿಎಫ್‌ಸಿ, ಇನ್‌ಫೊಸಿಸ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಹೀರೊ ಮೊಟಾರ್ಸ್‌, ಡಾಕ್ಟರ್‌ ರೆಡ್ಡಿ ಲ್ಯಾಬ್‌ ವಾರ್ಷಿಕ ಗರಿಷ್ಠ ದಾಖಲಿಸುವು­ದರೊಂದಿಗೆ ಕಾರಣವಾಗಿವೆ.

ಆರ್‌ಬಿಐ ಬ್ಯಾಂಕ್‌ ಬಡ್ಡಿದರ ಕಡಿತದತ್ತ ಒಲವು ತೋರಿರುವುದು ಎಂಬುದು ಪೇಟೆಯಲ್ಲಿ ಮಿಂಚಿನ ವೇಗದ ಏರಿಕೆ ಕಾರಣವಾಯಿತು. ಸಾರ್ವಜನಿಕ ವಲಯದ ಬ್ಯಾಂಕಿಂಗ್‌ ಷೇರುಗಳು ಅತಿಯಾದ ಬೇಡಿಕೆಯಿಂದ ಏರಿಕೆ ಕಂಡವು.

ಭಾರತೀಯ ಸ್ಟೇಟ್‌ ಬ್ಯಾಂಕ್‌ ಷೇರಿನ ಮುಖ­ಬೆಲೆ ಸೀಳಿಕೆ ನಂತರ ಹೆಚ್ಚಿನ ಚಟುವಟಿಕೆ­ಗೊಳ­ಗಾದರೆ, ಐಸಿಐಸಿಐ ಬ್ಯಾಂಕ್‌ ಹಾಗೂ

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗಳು ಮುಖಬೆಲೆ ಸೀಳಿಕೆಗೆ ದಿನಾಂಕ ನಿಗದಿಪಡಿಸಿದ ಕಾರಣ ಹೆಚ್ಚಿನ ಏರಿಕೆ ಪ್ರದರ್ಶಿಸಿದವು.
ಸಾರ್ವಜನಿಕ ವಲಯದ ಬಿಎಚ್‌ಇಎಲ್‌ ಹೆಚ್ಚಿನ ಬೇಡಿಕೆಯಿಂದ ಏರಿಕೆ ಪಡೆದರೆ ತೈಲ ಕಂಪೆನಿ­ಗಳಾದ ಬಿಪಿಸಿಎಲ್‌ ಮತ್ತು ಎಚ್‌ಪಿ­ಸಿಎಲ್‌ ಶುಕ್ರವಾರ ರಭಸದ ಏರಿಕೆ ಪ್ರದರ್ಶಿಸಿದವು. ಆಟೊ ವಲಯದ ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್‌ ಮಹೀಂದ್ರಾ ವಾರಾಂತ್ಯದ ದಿನ ತ್ವರಿತ ಏರಿಕೆ ಪ್ರದರ್ಶಿಸಿದವು. ಮೂಲಾಧಾರಿತ ಪೇಟೆಯ ಹೊಸ ಚಕ್ರದ ಕಾರಣ ಶುಕ್ರವಾರ ಪ್ರವೇಶಿಸಿದ ಸ್ಟ್ರೈಡ್‌ ಆರ್ಕೋಲ್ಯಾಬ್‌, ವೋಕಾರ್ಡ್‌ಗಳು ಆಕರ್ಷಕ ಏರಿಕೆ ಪಡೆದುಕೊಂಡವು..

ಈ ವಾರ ಲುಬ್ರಿಕಂಟ್‌್ಸ ವಲಯದ ಕ್ಯಾಸ್ಟ್ರಾಲ್‌ ಇಂಡಿಯಾ ದಾಖಲೆಯ ಅಂತ್ಯ
ರೂ. 501.85ರಲ್ಲಿ ಕೊನೆಗೊಂಡು ಸಂಭ್ರಮಿಸಿತು.

ಒಟ್ಟಾರೆ ಈ ವಾರದಲ್ಲಿ 359 ಅಂಶಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 74 ಅಂಶ, ಕೆಳಮಧ್ಯಮ

ಶ್ರೇಣಿ ಸೂಚ್ಯಂಕ 55 ಅಂಶಗಳಷ್ಟು ಏರಿಕೆ ಕಂಡವು.

ವಿದೇಶಿ ಸಂಸ್ಥೆಗಳು ರೂ. 3,083 ಕೋಟಿ ನಿವ್ವಳ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ. 1,334 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ.

ಹೊಸ ಷೇರು
*ಮೊಂಟೆ ಕಾರ್‍ಲೊ ಫ್ಯಾಷನ್‌್ಸ ಲಿಮಿಟೆಡ್‌ ಕಂಪೆನಿ 54.33 ಲಕ್ಷ ಷೇರುಗಳನ್ನು ರೂ. 630 ರಿಂದ ರೂ. 645ರ ಅಂತರದಲ್ಲಿ ಸಾರ್ವಜನಿಕ ಆರಂಭ ವಿತರಣೆ ಮಾಡಲಿದೆ. ಡಿ.3 ರಿಂದ 5 ರವರೆಗೂ ನಡೆಯಲಿದೆ.

ಬೋನಸ್‌ ಷೇರು
ಜೆಎಂಡಿ ಟೆಲಿಫಿಲಂ ಕಂಪೆನಿ 1:1ರ ಅನು­ಪಾತದ ಬೋನಸ್‌ ಷೇರು ಪ್ರಕಟಿಸಿದೆ.

ವಹಿವಾಟಿನಿಂದ ಹಿಂದಕ್ಕೆ
ಶ್ರೀನಿವಾಸ ಹ್ಯಾಚರೀಸ್‌ ಲಿ. ಕಂಪೆನಿ ಮುಂಬೈ ಷೇರು ವಿನಿಮಯದ ವಹಿವಾಟಿನ ನೋಂದಾ­ವಣೆಯಿಂದ ಹಿಂದೆ ಸರಿಯುವ ಕುರಿತು ಡಿ.4ರಂದು ಪರಿಶೀಲಿಸಲಿದೆ.

ವಾರದ ವಿಶೇಷ
ರಿಸರ್ಚ್‌ ಅನಲಿಸ್ಟ್ಸ್ ರೆಗ್ಯುಲೇಷನ್ಸ್ ಜಾರಿ

ಮಾಧ್ಯಮಗಳಲ್ಲಿ ಷೇರುಪೇಟೆಯ ಬಗ್ಗೆ ರಿಸರ್ಚ್‌ ಅನಲಿಸ್ಟ್‌ಗಳೆಂದು ವಿಶ್ಲೇಷಣೆಗಳನ್ನು ನೀಡುವು­ದನ್ನು ನಿಯಂತ್ರಿಸಿ ಸುಧಾರಣೆ ಜಾರಿಗೊಳಿಸಲು ಪೇಟೆ ನಿಯಂತ್ರಕ ಸೆಬಿ ‘ಸೆಬಿ (ರಿಸರ್ಚ್‌ ಅನಲಿಸ್ಟ್ಸ್) ರೆಗ್ಯುಲೇಷನ್ಸ್ 2014’ ನಿಯಮಗಳು 1ನೇ ಸೆಪ್ಟೆಂಬರ್ 2014 ರಿಂದ ನೋಟಿಫೈ ಆಗಿದ್ದು, ಸೋಮವಾರದಿಂದ (ಡಿ.1 ರಿಂದ) ಜಾರಿಯಾಗಲಿದೆ.

ಈ ನಿಯಮದ ಪ್ರಕಾರ ರಿಸರ್ಚ್‌ ಅನಲಿಸ್ಟ್ ಅಥವಾ ಸಂಸ್ಥೆಯು ಯಾವುದೇ ‘ಕಾಲ್ಸ್’ ಗಳನ್ನು ನೀಡುವುದಕ್ಕೆ ಮುಂಚೆ, ಸೆಬಿಯೊಂದಿಗೆ ರಿಜಿಸ್ಟಾರ್‌ ಆಗಿರಬೇಕು. ಸಾರ್ವಜನಿಕವಾಗಿ ಮಾಧ್ಯಮ­ಗಳಲ್ಲಿ ಶಿಫಾರಸುಗಳನ್ನು ಮಾಡುವಾಗ ಅವರ ಹೆಸರು, ರಿಜಿಸ್ಟ್ರೇಷನ್‌ ನಂಬರ್‌ ಮತ್ತು ಫೈನಾನ್ಶಿ­ಯಲ್‌ ಇಂಟರೆಸ್ಟ್ ಮುಂತಾದವನ್ನು ತಿಳಿಸಬೇಕು. ಸೆಬಿ ನಿಯಮದ ಪ್ರಕಾರ ರಿಸರ್ಚ್ ಅನನಿಸ್ಟ್ ಅಂದರೆ ರಿಸರ್ಚ್‌ ರಿಪೋರ್ಟನ್ನು ತಯಾರಿಸುವುದು ಅಥವಾ ಪ್ರಕಟಿಸುವುದು, ರಿಪೋರ್ಟ್ ಒದಗಿಸುವುದು. ಕೊಳ್ಳುವ ಅಥವಾ ಮಾರಾಟ ಮಾಡುವ ಶಿಫಾರಸು ಮಾಡುವುದು, ‘ಟಾರ್ಗೆಟ್‌ ಪ್ರೈಸ್‌’ ನೀಡುವುದು, ಸಾರ್ವಜನಿಕ ವಿತರಣೆಗೆ ಅಭಿಪ್ರಾಯ ವ್ಯಕ್ತಪಡಿಸುವುದೂ ಸೇರಿದೆ.

ವಿನಿಮಯ ಕೇಂದ್ರಗಳಲ್ಲಿ ಲೀಸ್ಟೆಡ್‌ ಷೇರುಗಳನ್ನು ರಿಸರ್ಚ್‌ ಅನಲಿಸ್ಟ್ ಎಂದು ವಿಶ್ಲೇಷಿಸುವವರು ಈ ನಿಯಮಗಳ ವ್ಯಾಪ್ತಿಗೆ ಬರುತ್ತಾರೆ.
ರಿಸರ್ಚ್‌ ಸಂಸ್ಥೆ ಎಂದರೆ, ಮಧ್ಯಸ್ಥಿಕೆ ಸಂಸ್ಥೆಯಾಗಿ ಸೆಬಿಯೊಂದಿಗೆ ರಿಜಿಸ್ಟರ್‌ ಆಗಿರುವ ಮರ್ಚೆಂಟ್‌ ಬ್ಯಾಂಕರ್‌, ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌, ಬ್ರೋಕರೇಜ್‌ ಸೇವೆ, ಮುಂತಾದವು ಸೇರಿ ರಿಸರ್ಚ್‌ ರಿಪೋರ್ಟ್‌ ನೀಡುವುದು,  ರಿಸರ್ಚ್‌ ಅನಲಿಸ್ಟ್ ಎಂದು ಹೇಳಿಕೊಳ್ಳುವವರೂ ನೋಂದಾವಣೆ ಮಾಡಿ­­ಕೊಳ್ಳ­ಬೇಕು.

ಪೇಟೆಯ ಚಲನೆ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯ, ಸೂಚ್ಯಂಕಗಳ ಏರಿಳಿತಗಳ ಚರ್ಚೆ, ರಾಜಕೀಯ, ಆರ್ಥಿಕ ಹಾಗೂ ಪೇಟೆಗಳ ಅಭಿಪ್ರಾಯ ವ್ಯಕ್ತಪಡಿಸುವಿಕೆ, ಕಂಪೆನಿಗಳ ಆರ್ಥಿಕ ಅಂಕಿ ಅಂಶಗಳ ಸಾರಾಂಶ, ಮುಂತಾದವು ನಿಯಮದ ವ್ಯಾಪ್ತಿಯಿಂದ ಹೊರ­ಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT