ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 40,000ಕ್ಕೆ: ಸಿಎಲ್‌ಎಸ್‌ಎ ಭವಿಷ್ಯ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಮುಂದಿನ ಎರಡು ವರ್ಷಗ ಳಲ್ಲಿ 40 ಸಾವಿರ ಅಂಶಗಳನ್ನು ತಲುಪುವುದೆಂಬ ‘ಸಿಎಲ್ಎಸ್ಎ’ ಸಂಸ್ಥೆಯ ಅಭಿಪ್ರಾಯವನ್ನು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಹೂಡಿಕೆ ದಾರರಲ್ಲಿ ಕುತೂಹಲ ಮೂಡಿಸಿರಲೂ ಸಾಧ್ಯ.

ಆದರೆ, ಈಗ ಸಂವೇದಿ ಸೂಚ್ಯಂಕವು ತಲುಪಿ ರುವ 22,628ರ ಹಂತದಲ್ಲೇ ರಭಸದ ಏರಿಳಿತ ಕಾಣುತ್ತಿರುವಾಗ 40 ಸಾವಿರ ಅಂಶಗಳ ಹಂತದ ಲ್ಲಿನ ಏರಿಳಿತದ ವೇಗವನ್ನು ಊಹಿಸಲೂ ಅಸಾಧ್ಯ.

ಸಂವೇದಿ ಸೂಚ್ಯಂಕದಲ್ಲಿನ ಲಾರ್ಸನ್‌ ಅಂಡ್‌ ಟೋಬ್ರೊ, ಎಚ್‌ಡಿಎಫ್‌ಸಿ ಬ್ಯಾಂಕ್‌, ಟಾಟಾ ಸ್ಟೀಲ್‌, ಕೋಲ್‌ ಇಂಡಿಯಾ ಕಂಪೆನಿಗಳ ಷೇರು ಗಳು ಇತ್ತೀಚಿನ ತಿಂಗಳಲ್ಲಿ ಹೆಚ್ಚಿನ ಏರಿಕೆ ಕಂಡಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಕಂಪೆನಿಗಳು ಈ ವಾರದಲ್ಲಿ ಕುಸಿತಕ್ಕೊಳಗಾಗಿ ನಂತರ ವಾರದ ಕೊನೆದಿನ, ಗುರುವಾರದಂದು ಚುರುಕಾದ ಏರಿಕೆ ಪ್ರದರ್ಶಿಸಿದವು. ಹಿಂದಿನ ದಿನಗಳಲ್ಲಿ ದೀರ್ಘ ಕಾಲೀನ ಹೂಡಿಕೆಯು ಪ್ರೋತ್ಸಾಹದಾಯಕವಾಗಿ ದ್ದಕ್ಕೆ ಕಾರಣ ಆಗ ‘ಎಫ್‌ ಅಂಡ್‌ ಓ’ ವಹಿವಾಟು ಪೇಟೆ ಇರಲಿಲ್ಲ ಮತ್ತು ಕಂಪೆನಿಗಳನ್ನು ಅವುಗಳ ಸಾಧನೆಗಳಿಗೆ ಅನುಗುಣವಾಗಿ ವಿಶ್ಲೇಷಿಸಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.

ಕಂಪೆನಿಗಳು ಪ್ರಕಟಿಸುವ ಕಾರ್ಪೊರೇಟ್‌ ಫಲಗಳಾದ ಲಾಭಾಂಶ, ಬೋನಸ್‌, ಹಕ್ಕಿನ ಷೇರು ಮುಂತಾದವು ಷೇರಿನ ದರಗಳ ಮೇಲೆ ನೇರ ಪ್ರಭಾವ ಬೀರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಪೇಟೆಯ ದಿಸೆ ಬದಲಿಸುವಂತೆ ಮಾಡಲು ಹಲವಾರು ಪ್ರಭಾವಿ ಅಂಶಗಳಿವೆ. ಪ್ರಮುಖವಾಗಿ ಯಾಂತ್ರೀಕೃತ ಚಟುವಟಿಕೆ (ಆಲ್ಗೊ ಟ್ರೇಡ್‌), ಮೂಲಾಧಾರಿತ ಪೇಟೆಯ ವಹಿವಾಟು, ಪಾರಿಭಾಷಿಕ ವಿಶ್ಲೇಷಣೆ, ಶೂನ್ಯ ಮಾರಾಟದ ಪ್ರಭಾವ, ವಿವಿಧ ರೀತಿಯ ವಿತ್ತೀಯ ಚಟುವಟಿಕೆ ಮೊದಲಾದವುಗಳ ಪ್ರಭಾವ ಹೆಚ್ಚಾಗಿದೆ. ಈ ಅಂಶಗಳ ಪ್ರಭಾವದ ಅನುಪಾತವೂ ಬದಲಾಗುತ್ತಿದ್ದು, ಜನಸಾಮಾ ನ್ಯರ ಗ್ರಹಿಕೆಗೆ ದೂರವಾಗಿರುತ್ತದೆ.

ಸಂವೇದಿ ಸೂಚ್ಯಂಕವು ಗರಿಷ್ಠ ಮಟ್ಟದಲ್ಲಿ ರುವಾಗ ಹೂಡಿಕೆಗೆ ಇತರೆ ಸೂಚ್ಯಂಕಗಳಲ್ಲಿನ ಉತ್ತಮ ಷೇರುಗಳನ್ನು ಆಯ್ಕೆ ಮಾಡಿಕೊಂಡು ವೈವಿಧ್ಯಮಯ ಕಾರಣಗಳಿಂದ ಏರಿಕೆ ಕಾಣುವಂತೆ ಮಾಡಲಾಗುತ್ತಿದೆ. ಕ್ರಾಂಪ್ಟನ್‌ ಗ್ರೀವ್‌್ಸ ಕಂಪೆನಿಯು ಐದು ವರ್ಷಗಳ ಹಿಂದೆ ಅವಂತಾ ಪವರ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಯ ಶೇ 41ರಷ್ಟು ಭಾಗಿತ್ವವನ್ನು ಖರೀದಿಸಲು ₨227 ಕೋಟಿ ಹೂಡಿಕೆ ಮಾಡಿದಾಗ ಷೇರಿನ ಬೆಲೆಯು ತರಗೆಲೆಯಂತೆ ಧರೆಗಿಳಿಯಿತು.

ಇದಕ್ಕೆ ಪೂರಕವಾಗಿ ಕಂಪೆನಿಯ ಕಾರ್ಪೊ ರೇಟ್‌ ನೀತಿ ಪಾಲನೆಯಲ್ಲಿನ ಲೋಪವನ್ನು ಸಹ ಸೇರಿಸಿ ಮತ್ತಷ್ಟು ಕುಸಿಯುವಂತೆ ಮಾಡಲಾ ಯಿತು. ಈಗ ಕಂಪೆನಿಯ ಚಟುವಟಿಕೆಯನ್ನು ಸಕಾರಾತ್ಮಕವಾಗಿ ವರ್ಣಿಸಿ ವಾರ್ಷಿಕ ಗರಿಷ್ಠ ದರ ತಲುಪಿಸಲಾಗಿದೆ. ‘ಅರವಿಂದೊ ಫಾರ್ಮಾ’ ಕಂಪೆನಿಯು ಅಮೆರಿಕಾದ ‘ಎಫ್‌ಡಿಎ’ದ ಇಂಪೋರ್ಟ್ ಅಲರ್ಟ್ ಕಾರಣ 2011 ರಲ್ಲಿ ಷೇರಿನ ದರವು ಗರಿಷ್ಠ ದರದಿಂದ ಕುಸಿಯುತ್ತಾ ಹೋಗಿ ಎರಡಂಕಿ ದರ ತಲುಪಿತು. ಕಳೆದ ವರ್ಷ ‘ಯುಎಸ್‌ ಎಫ್‌ಡಿಎ’ ಅಲರ್ಟ್ ಹಿಂಪಡೆದಾಗಲಿಂದ ಏರಿಕೆ ಕಂಡು ಈಗ ವಾರ್ಷಿಕ ಗರಿಷ್ಠ ಮಟ್ಟವನ್ನು ಸಮೀಪವಿದೆ. ಗುರುವಾರ ಈ ಷೇರು ವಹಿವಾಟಿನ ಆರಂಭದಲ್ಲಿ ₨550ರ ಸಮೀಪದಿಂದ ₨528ರವರೆಗೂ ಕುಸಿಯಿತು. ನಂತರ ಮಧ್ಯಾಹ್ನದ ವೇಳೆ ₨556ರವರೆಗೂ ಜಿಗಿದು ₨551ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ಆ ಮೂಲಕ ಪೇಟೆ ಎಷ್ಟು ಹರಿತ ಎಂಬುದನ್ನು ತೋರಿಸಿತು.

‘ಅರವಿಂದೊ ಫಾರ್ಮಾ’ ಕಂಪೆನಿಯ ಷೇರಿನ ದರವು ಕಳೆದೊಂದು ವರ್ಷದಲ್ಲಿ ₨138ರಿಂದ ₨575ರವರೆಗೂ ಏರಿಳಿತ ಪ್ರದರ್ಶಿಸಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಸೆಪ್ಟೆಂಬರ್‌ 2013ರಲ್ಲಿ ಶೇ 19.76ರಿಂದ ಡಿಸೆಂಬರ್‌ 2013ರಲ್ಲಿ ಶೇ 21.17 ಮಾರ್ಚ್‌ 2014ರಲ್ಲಿ ಈ ಕಂಪೆನಿಯ ಲ್ಲಿನ ಜಂಟಿ ಭಾಗಿತ್ವ ವನ್ನು ಶೇ 23.74ರಷ್ಟು ಹೆಚ್ಚಿಸಿಕೊಂಡಿವೆ. ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಹೂಡಿಕೆದಾರರು ತಮ್ಮ ಷೇರುಗಳನ್ನು ಈ ಅವಧಿಯಲ್ಲಿ ಮಾರಾಟ ಮಾಡಿ ಭಾಗಿತ್ವವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ವಿದೇಶಿ ಸಿರಿವಂತ ವ್ಯಕ್ತಿಗಳು, ಮಂಡೂಕ ನಿಧಿಗಳು (ಹೆಡ್‌್ಜ ಫಂಡ್‌್ಸ), ಪಿ.ನೋಟ್‌್ಸ ಮೂಲಕ ಮಾರ್ಚ್ ಅಂತ್ಯದಲ್ಲಿ ₨2.07 ಲಕ್ಷ ಕೋಟಿಗಳಷ್ಟು ಹಣ ವನ್ನು ಹೂಡಿಕೆ ಮಾಡಿದ್ದು. ಇದು ಕಳೆದ ಮೂರು ವರ್ಷಗಳಲ್ಲಿನ ಗರಿಷ್ಠ ದಾಖಲೆಯಾಗಿದೆ. ಅಂದರೆ ಮಾರ್ಚ್‌ನಲ್ಲಿ ₨34 ಸಾವಿರ ಕೋಟಿ ಪಿ.ನೋಟ್‌್ಸ ಮೂಲಕ ಪೇಟೆಗೆ ಒಳಹರಿವು ಹೆಚ್ಚಿರುವುದು ಗಮನಾರ್ಹ.

ಕೇವಲ ಮೂರು ದಿನಗಳ ವಹಿವಾಟಿನ ಈ ವಾರದ ಚಟುವಟಿಕೆಯಲ್ಲಿ ಮೊದಲೆರಡು ದಿನ ಸಂವೇದಿ ಸೂಚ್ಯಂಕವು, ಮಾರಾಟದ ಒತ್ತಡದಿಂದ ಇಳಿಕೆ ಕಂಡರೆ, ಮೂರನೇ ದಿನದ ಚಟುವಟಿಕೆಯು ಈ ಇಳಿಕೆಯನ್ನು ಅಳಿಸಿ ಹಾಕಿ ಸಮತೋಲನ ಕಾಣುವಂತೆ ಮಾಡಿದೆ. ಒಟ್ಟಾರೆಯಾಗಿ ಇದರಲ್ಲಿ ಕೇವಲ 0.12 ಅಂಶಗಳಷ್ಟು ಹಾನಿಯಾಗಿದೆ.

ಅದೇ ರೀತಿ ಮಧ್ಯಮ ಶ್ರೇಣಿ ಸೂಚ್ಯಂಕ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಮೊದಲೆರಡು ದಿನದ ಹಾನಿಯನ್ನು ಮೂರನೇ ದಿನದ ಏರಿಕೆ ಯಿಂದ ಸಮತೋಲ ಮಾಡಿಕೊಂಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಆರಂಭದ ಎರಡು ದಿನಗಳು ಮಾರಾಟದಲ್ಲಿದ್ದರೆ, ಮೂರನೇ ದಿನದ ಖರೀದಿ ಯಿಂದ ವಾರದಲ್ಲಿ ಒಟ್ಟು ₨367 ಕೋಟಿ ಮೌಲ್ಯದ ಖರೀದಿ ದಾಖಲಿಸಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ಸತತವಾಗಿ ಮೂರು ದಿನಗಳೂ ಮಾರಾಟದ ಹಾದಿ ಹಿಡಿದು ಒಟ್ಟು ₨748 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ಹಿಂದಿನ ವಾರದ ₨75.81 ಲಕ್ಷ ಕೋಟಿಯಷ್ಟೇ ಈ ವಾರವೂ ಇದೆ. ಆ ಮೂಲಕ ಸಂಪೂರ್ಣ ಸ್ಥಿರತೆ ಪ್ರದರ್ಶಿಸಿದೆ.

ಲಾಭಾಂಶ
ಭಾರತ್‌ ಸೀಟ್‌್ಸ ಪ್ರತಿ ₨2ರ ಮುಖಬೆಲೆ ಷೇರಿಗೆ ₨0.80, ಕ್ರಿಸಿಲ್‌–ಪ್ರತಿ ₨1ರ ಮುಖಬೆಲೆ ಷೇರಿಗೆ ₨3, ಗುಜರಾತ್‌ ಹೋಟೆಲ್‌್ಸ ಪ್ರತಿ ಷೇರಿಗೆ ₨3.50, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಪ್ರತಿ ₨2ರ ಮುಖಬೆಲೆ ಷೇರಿಗೆ ₨4, ಇನ್ಫೊಸಿಸ್‌ ಪ್ರತಿ ₨5ರ ಮುಖಬೆಲೆ ಷೇರಿಗೆ ₨43 (ನಿಗದಿತ ದಿನ ಮೇ 31), ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಹೌಸ್‌ ಪ್ರತಿ ಷೇರಿಗೆ ₨4.25, ಜಯಭಾರತ್‌ ಮಾರುತಿ ಪ್ರತಿ ₨5ರ ಮುಖಬೆಲೆ ಷೇರಿಗೆ ₨1.25, ಮೈಂಡ್‌ ಟ್ರೀ ಪ್ರತಿ ಷೇರಿಗೆ ₨5ಕ್ಕಿಂತ ಹೆಚ್ಚು ಲಾಭಾಂಶ ಘೋಷಿಸಿವೆ. ರಿಲಯನ್‌್ಸ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ₨ 9.50ರಂತೆ  ವಿಶೇಷ ಲಾಭಾಂಶ ಪ್ರಕಟಿಸಿದೆ.

ಬೋನಸ್‌ ಷೇರು
ಮೈಂಡ್‌ ಟೀ ಲಿಮಿಟೆಡ್‌ ಕಂಪೆನಿಯು ಪ್ರತಿ ಒಂದು ಷೇರಿಗೆ ಒಂದರಂತೆ ಬೋನಸ್‌ ಷೇರು ವಿತರಿಸಲಿದೆ.

ಹೊಸ ಷೇರು
* ವುಮನ್‌ ನೆಕ್‌್ಟ್ಸ ಲಿಂಗರೀಸ್‌ ಲಿ ಕಂಪೆನಿಯು ಇತ್ತೀಚೆಗೆ ಪ್ರತಿ ಷೇರಿಗೆ ₨65ರಂತೆ ಸಾರ್ವಜನಿಕ ವಿತರಣೆ ಮಾಡಿದೆ. ‘ಸಣ್ಣ ಮತ್ತು ಮಧ್ಯಮ  ಪ್ರಮಾಣದ ಉದ್ದಿಮೆಗಳು’ (ಎಸ್‌.ಎಂ.ಇ) ವಿಭಾಗದ ಈ ಕಂಪೆನಿ 21ರ ಸೋಮವಾರದಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಎಂ.ಟಿ’ ವಿಭಾಗದಲ್ಲಿ 2,000 ಷೇರುಗಳ ವಹಿವಾಟು ಗುಚ್ಚದೊಂದಿಗೆ ಚಟುವಟಿಕೆ ಆರಂಭಿಸಲಿದೆ.

* ಆರ್‌ ಅಂಡ್‌ ಬಿ ಡೆನಿಮ್‌್ಸ ಲಿ. ಕಂಪೆನಿಯು ಇತ್ತೀಚೆಗೆ ಪ್ರತಿ ಷೇರಿಗೆ ₨10ರಂತೆ ಸಾರ್ವಜನಿಕ ವಿತರಣೆ (ಐಪಿಒ ಬಿಡುಗಡೆ) ಮಾಡಿದ ‘ಎಸ್‌ಎಂಇ’ ವಲಯದ ಕಂಪೆನಿ. 22ರ ಏಪ್ರಿಲ್‌ನಿಂದ ಎಂ.ಟಿ ವಿಭಾಗದಲ್ಲಿ 10 ಸಾವಿರ ಷೇರುಗಳ ವಹಿವಾಟು ಗುಚ್ಛದೊಂದಿಗೆ ಚಟುವಟಕೆಗೆ ಬಿಡುಗಡೆಯಾಗಲಿದೆ.

ಮುಖಬೆಲೆ ಸೀಳಿಕೆ
ಸ್ವದೇಶಿ ಇಂಡಸ್ಟ್ರೀಸ್‌ ಲಿ., ಕಂಪೆನಿಯು ಏ. 24ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

ವಹಿವಾಟಿನಿಂದ ಹಿಂದಕ್ಕೆ
ರಿಲಯನ್‌್ಸ ಮೀಡಿಯಾ ವರ್ಕ್ಸ್‌ ಲಿ., (ಈ ಕಂಪೆನಿಯ ಹಿಂದಿನ ಹೆಸರು ಅಡ್‌ಲ್ಯಾಬ್‌ ಫಿಲಮ್ಸ್‌ ಲಿ. ಎಂದಿತ್ತು) ಇತ್ತೀಚೆಗೆ ಎಲ್ಲಾ ಷೇರುದಾರರಿಗೆ ಮುಕ್ತ ಆಹ್ವಾನ ನೀಡಿದ್ದು, ಷೇರು ಹಿಂದಕ್ಕೆ ಖರೀದಿಸುವ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈಗ ಕಂಪೆನಿಯ ಷೇರುಗಳನ್ನು ವಿನಿಮಯ ಕೇಂದ್ರದ ವಹಿವಾಟಿನಿಂದ ಹಿಂಪಡೆಯಲಿದ್ದು ಏಪ್ರಿಲ್‌ 29ರಿಂದ ಈ ಕಂಪೆನಿಯ ಷೇರುಗಳು ವಹಿವಾಟು ಆಗುವುದಿಲ್ಲ.

ಒಂದು ವೇಳೆ ಷೇರುದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಬಯಸಿದರೆ ಕಂಪೆನಿಯನ್ನು ಸ್ವಾದೀನಪಡಿಸಿಕೊಳ್ಳುತ್ತಿರುವ ಕಂಪೆನಿಗಳು ಮುಂದಿನ ಒಂದು ವರ್ಷದವರೆಗೂ ನಿರ್ಗಮನ ದರವೆಂದು ಗುರುತಿಸಲಾಗಿರುವ ₨61ರಂತೆ ಖರೀದಿಸುವ ಅವಕಾಶವಿದೆ.
ಅಧಿಕೃತವಾಗಿ ಮೇ 6ರಿಂದ ಈ ಕಂಪೆನಿಯ ಷೇರುಗಳು ಡಿ–ಲಿಸ್‌್ಟ   ಆಗಲಿವೆ (ಷೇರುಪೇಟೆ ವಹಿವಾಟು ನೋಂದಣಿ ಪಟ್ಟಿಯಿಂದ ಹೊರಕ್ಕೆ). ಸಧ್ಯ ಈಗಿನ ಪೇಟೆಯಲ್ಲಿ ಈ ಷೇರಿನ ಬೆಲೆಯು ₨60ರ ಸಮೀಪವಿದೆ.

‘ಡಿಮ್ಯಾಟ್‌ ಖಾತೆ ಮಾಡಿಸಿಕೊಳ್ಳಲು ಆದ್ಯತೆ ನೀಡಿ’
ಸಂವೇದಿ ಸೂಚ್ಯಂಕ ಮತ್ತು ಇತರೆ ಉಪ ಸೂಚ್ಯಂಕಗಳಾದ ಬ್ಯಾಂಕೆಕ್‌್ಸ, ಹೆಲ್‌್ತಕೇರ್‌ ಕ್ಯಾಪಿಟಲ್‌ ಗೂಡ್‌್ಸ, ಪಿ.ಎಸ್‌.ಯು, ಎಫ್‌ಎಂಸಿಜಿ ಮುಂತಾದ ವಲಯದ ಕಂಪೆನಿಗಳ ಷೇರುಗಳು ಏರಿಕೆಯತ್ತ ಸಾಗಿವೆ. ಈಗ ರಿಯಾಲ್ಟಿ ವಲಯದ ಸೂಚ್ಯಂಕ ಸಹ ಚುರುಕಾಗುತ್ತಿದೆ.

ಈ ವಾತಾವರಣದಲ್ಲಿಯೂ ಹೆಚ್ಚಿನ ಹೂಡಿಕೆದಾರರು ತಮ್ಮಲ್ಲಿರುವ ಭೌತಿಕ ಷೇರು ಪತ್ರಗಳನ್ನು ಅಭೌತೀಕರಣ ಮಾಡಿಸಿಕೊಳ್ಳದೆ ಮುಂದುವರೆಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕೆಲವು ಕಂಪೆನಿಗಳು ಚುರುಕಾದ ಚಟುವಟಿಕೆಯಲ್ಲಿದ್ದರೂ ಭೌತಿಕ ರೂಪದ ಷೇರುಪತ್ರಗಳನ್ನು ಪರಿವರ್ತಿಸಿಕೊಳ್ಳದೆ ಇರುವ ಷೇರುದಾರರು ಬಹಳಷ್ಟಿದ್ದಾರೆ.

ಇತ್ತೀಚೆಗೆ ಓದುಗರೊಬ್ಬರು ಕರೆ ಮಾಡಿ, ‘ಕುಟುಂಬದವರು ಕರ್ಣಾಟಕ ಬ್ಯಾಂಕ್‌ನ ಒಂದು ಸಾವಿರಕ್ಕೂ ಹೆಚ್ಚಿನ  ಷೇರನ್ನು ಹೊಂದಿದ್ದೇವೆ. ಆ ಷೇರುಗಳು ಭೌತಿಕ ಪತ್ರಗಳಾಗಿವೆ. ಈ ಷೇರಿಗೆ ಕಂಪೆನಿ ವಿತರಿಸಲಿರುವ ಲಾಭಾಂಶವನ್ನು ಇಸಿಎಸ್‌ ಮೂಲಕ ಪಡೆಯಲು ಸಾಧ್ಯವೇ’? ಎಂದು ಪ್ರಶ್ನಿಸಿದ್ದಾರೆ.

ಅವರಿಗೆ ‘ಡಿಮ್ಯಾಟ್‌’ (ಅಭೌತೀಕರಣ) ಖಾತೆಯಲ್ಲಿ ಷೇರುಗಳನ್ನು ಹೊಂದಿದ್ದರೆ ಅದಕ್ಕೆ ತಗಲುವ ವೆಚ್ಚ ಹೆಚ್ಚಾಗಿರುತ್ತದೆಂಬ ಭಾವನೆ ಇತ್ತು. ಈ ಅಭಿಪ್ರಾಯ ತಪ್ಪು. ಡಿಮ್ಯಾಟ್‌ ಖಾತೆಯನ್ನು ಹೊಂದಿದ್ದಲ್ಲಿ ಅಂತಹ ಖಾತೆಗೆ ವಿಧಿಸಲಾಗುವ ವೆಚ್ಚವು ಕೇವಲ ವಾರ್ಷಿಕ ನಿರ್ವಹಣಾ ಶುಲ್ಕವಷ್ಟೆ. ಈ ಖಾತೆಗಳಲ್ಲಿರುವ ಷೇರುಗಳ ಸಂಖ್ಯೆಯಾಗಲಿ ಅಥವಾ ಕಂಪೆನಿಗಳ ಸಂಖ್ಯೆಯಾಗಲಿ ನಗಣ್ಯ.

ಒಂದು ಖಾತೆಯಲ್ಲಿ ಐದಾಗಲಿ, ಐವತ್ತಾಗಲಿ, ಐದು ನೂರಾಗಲಿ ಕಂಪೆನಿಗಳು ಇದ್ದರೂ ಅದಕ್ಕೆ ಪ್ರತ್ಯೇಕ ಶುಲ್ಕವಿಲ್ಲ. ಯಾವುದೇ ರೀತಿಯ ವಹಿವಾಟು ನಡೆದಲ್ಲಿ ಅದರ ಶುಲ್ಕ ನೀಡಬೇಕಾಗುವುದು. ಇದು ಸರಳವಾದ ಕ್ರಮ. ಷೇರುಗಳನ್ನು ಅಭೌತೀಕೃತ ರೂಪ (ಡಿಮ್ಯಾಟ್‌)ದಲ್ಲಿ ಹೊಂದಿದ್ದರೆ, ಡಿ ಮ್ಯಾಟ್‌ ಖಾತೆ ತೆರೆಯುವಾಗ ನೀಡಿದ ಬ್ಯಾಂಕ್‌ ಖಾತೆಗೆ ಲಾಭಾಂಶವು ನೇರವಾಗಿ ‘ಇಸಿಎಸ್’ ಮೂಲಕ ಸಂದಾಯವಾಗುತ್ತದೆ. ಅಲ್ಲದೆ, ಡಿಮ್ಯಾಟ್‌ ಖಾತೆಗೆ ವಾರಸುದಾರರನ್ನು (ನಾಮಿನೇಷನ್‌) ನೇಮಿಸಬಹುದು. ವಿಳಾಸ ಬದಲಾವಣೆ ಏನಾದರೂ ಇದ್ದರೆ ಕೇವಲ ಡಿಮ್ಯಾಟ್‌ ಖಾತೆ ತೆರೆದಿರುವ ಡಿಪಾಜಿಟರಿ ಪಾರ್ಟಿಸಿಫಂಟ್‌ಗೆ ತಿಳಿಸಿದರೆ ಸಾಕು ಎಲ್ಲಾ ಕಂಪೆನಿಗಳಲ್ಲೂ ವಿಳಾಸ ಬದಲಾವಣೆಯಾಗುವುದು. ಪ್ರತ್ಯೇಕವಾಗಿ ಕಂಪೆನಿಗಳಿಗೆ ತಿಳಿಸುವ ಅವಶ್ಯಕತೆ ಇಲ್ಲ.

ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿದ್ದರೆ, ಕಂಪೆನಿ ಷೇರಿನ ಮುಖಬೆಲೆ ಸೀಳಿಕೆ, ಕ್ರೋಢೀಕರಣ, ವಿಲೀನ ಸಮ್ಮಿಲನಗಳಿಂದ ಸ್ವರೂಪ ಬದಲಾವಣೆಯಾದಾಗ ಆ ಕಂಪೆನಿಯ ಷೇರನ್ನು ಕಂಪೆನಿಗೆ ಕಳಳುಹಿಸಿ ಷೇರು ಪತ್ರಗಳನ್ನು ಬದಲಿಸಿಕೊಳ್ಳಬೇಕಾಗುವುದು. ಒಂದು ವೇಳೆ ಆ ಷೇರುಗಳು ಡಿ–ಮ್ಯಾಟ್‌ ರೂಪದಲ್ಲಿದ್ದರೆ ಯಾವ ಕ್ರಮವೂ ಕೈಗೊಳ್ಳುವ ಅವಶ್ಯಕತೆ ಇರದೆ ಎಲ್ಲಾ ಬದಲಾವಣೆ ತನ್ನಷ್ಟಕ್ಕೆ ತಾನೇ ನಡೆಯುತ್ತವೆ.

ಎಲ್ಲದ್ದಕ್ಕೂ ಮುಖ್ಯವಾಗಿ ಷೇರಿನ ದರಗಳಲ್ಲಿ ಉಂಟಾದ ಏರಿಕೆಯು ಸದಾ ಸ್ಥಿರವಾಗಿರುವುದಿಲ್ಲ. ಷೇರುಗಳನ್ನು ನಮಗೆ ಅವಶ್ಯಕತೆ ಇದ್ದಾಗ ಮಾರಾಟ ಮಾಡುವೆ ಎಂಬ ಭಾವನೆ ಸರಿಯಲ್ಲ. ಈಗಿನ ದಿನಗಳಲ್ಲಿ ಪೇಟೆಯ ದರ ಹೆಚ್ಚಿದ್ದಾಗ ಅವಶ್ಯಕತೆ ಇಲ್ಲದಿದ್ದರೂ ಮಾರಾಟ ಮಾಡುವುದು ಕ್ಷೇಮ ವಿಶೇಷವಾಗಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಷೇರುಗಳ ಬಗ್ಗೆ ಇದು ಹೆಚ್ಚು ಅನ್ವಯವಾಗುತ್ತದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಷೇರು ಪತ್ರಗಳನ್ನು ಡಿ–ಮ್ಯಾಟ್‌ ಮಾಡಿಸಿಕೊಂಡಿದ್ದಲ್ಲಿ ಪೇಟೆಯಲ್ಲಿ ಲಭ್ಯವಾಗುವ ಅಪೂರ್ವ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಷೇರುಗಳು ದುರುಪಯೋಗವಾಗದೆ ಸುರಕ್ಷಿತವಾಗಿರುತ್ತವೆ. ಪ್ರತಿಭಾರಿ ಬರುವ ಡಿಮ್ಯಾಟ್‌ ಸ್ಟೇಟ್‌ಮೆಂಟ್‌ನಲ್ಲಿರುವ ಷೇರುಗಳು ಸರಿಯಾಗಿವೆಯೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT