ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎಸ್ ವಿರುದ್ಧ ಕಿಮ್ಸ್‌ನಲ್ಲಿ ಪ್ರತಿಭಟನೆ

Last Updated 27 ಡಿಸೆಂಬರ್ 2022, 14:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೂತನ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಕಿಮ್ಸ್ ಎನ್‌ಪಿಎಸ್ ನೌಕರರ ಸಂಘ, ವೈದ್ಯರ, ಶುಶ್ರೂಷಕರ, ಅರೆ ವೈದ್ಯಕೀಯ ಹಾಗೂ ಲ್ಯಾಬ್ ಟೆಕ್ನಿಷಿಯನ್ ಆಫೀಸರ್ಸ್‌ಗಳ ಸಂಘದ ಸದಸ್ಯರು ಕಿಮ್ಸ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು, ಎನ್‌ಪಿಎಸ್ ವಿರುದ್ಧದ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ಎನ್‌ಪಿಎಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಬೆಂಗಳೂರಿನಲ್ಲಿ ನಡೆಯುತ್ತಿರುವ ಧರಣಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯ ಭಾಗವಾಗಿ ಕಿಮ್ಸ್ ಸಿಬ್ಬಂದಿ ಕಪ್ಪು ಧರಿಸಿಯೇ ಕಾರ್ಯನಿರ್ವಹಿಸಿದರು.

ವೈದ್ಯರಾದ ಡಾ. ಶಿರೋಳ, ಡಾ. ಮುರಗೋಡ, ಡಾ. ಮಂಜುನಾಥ ನೇಕಾರ, ಡಾ. ಶಕ್ತಿ ಪ್ರಸಾದ್, ಡಾ. ಎ.ಎ. ನದಾಫ, ಡಾ. ಕವಿತಾ ಎವೂರ್, ಡಾ. ಹುಚ್ಚಣ್ಣವರ, ವಿಜಯ ಪಟ್ಟೇದ, ಸಂಜೀವ ಬೆನಕಟ್ಟಿ, ಪ್ರಥಮ್ ಪ್ರಭು, ಗಾಯತ್ರಿ, ಪ್ರತಿಭಾ, ಜಗದೀಶ ಕೆ., ಮಲ್ಲಿಕಾರ್ಜುನ ಹೊಸಮನಿ, ಸೋಮಶೇಖರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT