ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ವಿನ್ಯಾಸ ಹೊರೆಯಲ್ಲ

ಹೊಸ ಕಲ್ಪನೆ
Last Updated 17 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಸುಂದರವಾದ ಅಂದದ ಕಲ್ಪನೆಯ ಮನೆ ಕಟ್ಟಿಸುವಾಗ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸ  ಎರಡನ್ನು ಗಮನದಲ್ಲಿರಿಸಿಕೊಳ್ಳಬೇಕು. ಮನೆಯ ಒಳಾಂಗಣ ವಿನ್ಯಾಸ ಮನೆ ಕಟ್ಟುವಷ್ಟೇ ದುಬಾರಿಯಾಗಿದೆ. ಆದರೆ, ಮೊದಲೇ ಕೆಲವು ಯೋಜನೆಗಳನ್ನು ರೂಪಿಸಿಕೊಂಡರೆ ಒಳಾಂಗಣ ವಿನ್ಯಾಸ ಹೊರೆಯಾಗಲಾರದು.
 
ಮನೆ ನಿರ್ಮಾಣವಾದ ಕೂಡಲೇ ತಲೆಯಲ್ಲಿ ಕೆಲವು ಒಳಾಂಗಣ ವಿನ್ಯಾಸದ ಯೋಜನೆಗಳು ಸಿದ್ಧಗೊಳ್ಳುತ್ತಿರುತ್ತವೆ. ಯಾವುದೋ ಮನೆಯಲ್ಲಿ ಕಂಡ, ಸಿನಿಮಾದಲ್ಲಿ ನೋಡಿದ, ಇಂಟರ್‌ನೆಟ್‌ನಲ್ಲಿ ಸಿಕ್ಕ ಕೆಲವಷ್ಟು ಆಲಂಕಾರಿಕ ವಸ್ತುಗಳನ್ನು ಕೊಳ್ಳಲು ನಿರ್ಧರಿಸುತ್ತೇವೆ. ಆದರೆ, ಅದರ ಬೆಲೆ ನೋಡಿದಾಗ ನಮ್ಮ ಆಸೆಗಳು ಕಮರುತ್ತವೆ. ಹೀಗಾಗದಂತೆ ತಡೆಯಬಹುದಾದ ಕೆಲವು ಸರಳ ಉಪಾಯಗಳು ಇಲ್ಲಿವೆ.
 
* ವೃತ್ತಿಪರರಿಂದಲೇ ವಿನ್ಯಾಸ ಮಾಡಿಸುವುದಾದರೇ ಜಾಗೃತೆಯಿಂದ ವಿನ್ಯಾಸಕಾರರನ್ನು ಆರಿಸಿ, ಈ ಹಿಂದೆ ಅವರು ಮಾಡಿದ ವಿನ್ಯಾಸಗಳನ್ನು ಗಮನಿಸಿ, ಅವರ ಈ ಹಿಂದಿನ ಗ್ರಾಹಕರೊಂದಿಗೆ ಸಮಾಲೋಚಿಸಿ ಮತ್ತು ಮುಖ್ಯವಾಗಿ ನಮ್ಮ ಬಜೆಟ್‌ಗೆ ಹೊರೆಯಾಗದಂಥ ವಿನ್ಯಾಸಕಾರರನ್ನು ಆರಿಸಿಕೊಳ್ಳಬೇಕು.
 
* ನಾವೇ ನಮ್ಮ ಮನೆಯ ವಿನ್ಯಾಸ ಮಾಡುವುದಾದರೆ ಇನ್ನೂ ಅನುಕೂಲ. ಕೆಲವು ಉತ್ತಮ ಒಳಾಂಗಣ ವಿನ್ಯಾಸಗಳುಳ್ಳ ಮನೆಗಳಿಗೆ ಭೇಟಿ ನೀಡಿ ಗಮನಿಸಬಹುದು. ವಿನ್ಯಾಸಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ತಜ್ಞರ ಸಹಾಯ ಪಡೆಯಬಹುದು. ಗುಣಮಟ್ಟದ ಬಗ್ಗೆ  ರಾಜಿ ಬೇಡ. ವ್ಯಾಪಾರಿಗಳಿಂದ ಮೋಸ ಹೋಗದಂತೆ ಎಚ್ಚರ ವಹಿಸಬೇಕು.
 
* ಒಳಾಂಗಣ ವಿನ್ಯಾಸದ ಬಜೆಟ್ ಅನ್ನು ಅಂತಿಮಗೊಳಿಸಿಕೊಳ್ಳಿ, ಬಜೆಟ್‌ಗೆ ಅನುಗುಣವಾಗಿಯೇ ವಿನ್ಯಾಸವನ್ನು ರೂಪಿಸಿಕೊಳ್ಳಿ, ಇದರಿಂದ ನಿಮಗೆ ನಿಜವಾಗಿಯೂ ಯಾವುದು ಅವಶ್ಯಕವೋ ಅದನ್ನಷ್ಟೇ ಖರೀದಿಸುವುದರಿಂದ ಅನವಶ್ಯಕ ದುಂದು ವೆಚ್ಚ ತಡೆಯಬಹುದು.
 
* ನಿಮ್ಮ ವಿನ್ಯಾಸದ ನೀಲನಕ್ಷೆ ತಯಾರಿಸಿಕೊಳ್ಳಿ, ವಿನ್ಯಾಸಕ್ಕೆ ಬೇಕಾದ ವಸ್ತುಗಳ ಪಟ್ಟಿಯನ್ನು ಅಂತಿಮಗೊಳಿಸಿಕೊಳ್ಳಿ. ಪಟ್ಟಿ ಮಾಡುವಾಗ ಪೀಠೋಪಕರಣಗಳು, ಲೈಟಿಂಗ್ಸ್, ಅಲಂಕಾರಿಕಗಳು, ಚಾವಣಿ ಆಲಂಕಾರಿಕಗಳು, ಚಿತ್ರಪಟಗಳು, ಗೋಡೆ ಆಲಂಕಾರಿಕೆಗಳು ಹೀಗೆ ವಿಭಾಗಿಸಿ ಪಟ್ಟಿ ಮಾಡಿ.
 
* ಮೊದಲು ಮನೆ ವಿನ್ಯಾಸಕ್ಕೆ ಅವಶ್ಯಕ ಮೂಲಭೂತ ವಸ್ತುಗಳಾದ ಪೀಠೋಪಕರಣ, ಲೈಟಿಂಗ್ ವ್ಯವಸ್ಥೆ, ಹೂದಾನಿ, ಪರದೆಗಳಿಂದ ವಿನ್ಯಾಸ ಪ್ರಾರಂಭಿಸಿ. ಇದರಿಂದ ಹಣದ ಸರಿಯಾದ ಹೂಡಿಕೆಯಾದಂತಾಗುತ್ತದೆ. ಮೊದಲೇ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರೆ ಅವಶ್ಯಕ ವಸ್ತುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಕಾಗುವ ಸಾಧ್ಯತೆ ಇದೆ.
 
* ಬಜೆಟ್ ಮಿತಿ ಇಲ್ಲದವರಿಗೆ, ವಿನ್ಯಾಸದಲ್ಲಿ ರಾಜಿ ಮಾಡಿಕೊಳ್ಳಬಯಸದವರು ವೃತ್ತಿ ಪರ ವಿನ್ಯಾಸಕಾರರ ಸಹಾಯ ಪಡೆಯುವುದು ಉತ್ತಮ. ಪರದೆಗಳು, ಮಾರ್ಬಲ್‌ಗಳ ಬಣ್ಣಗಳ ಆಯ್ಕೆ, ವಿವಿಧ ಬಣ್ಣಗಳ ಲೈಟುಗಳನ್ನು ಬಳಸಿ ಮಾಡುವ ಮೂಡ್ ಕ್ರಿಯೇಶನ್, ಅಕ್ವೇರಿಯಂ, ಬೊನ್ಸಾಯ್‌ ಗಿಡಗಳು, ಕಾರಂಜಿ ಇನ್ನಿತರ ವಿನ್ಯಾಸಗಳನ್ನು ಪ್ರಯತ್ನಿಸಿ. ಇವು ಮನೆಗೆ ಶ್ರೀಮಂತ ನೋಟ ಕೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT