ಷರೀಫ್ ಅಕ್ರಮವಾಗಿ ಲಂಡನ್ನಲ್ಲಿ ಐಷಾರಾಮಿ ಸಂಪತ್ತು ಹೊಂದಿದ್ದ ಸಂಪತ್ತಿನ ಮಾಹಿತಿ ಪನಾಮಾ ಪೇಪರ್ಸ್ ಮೂಲಕ ಸೋರಿಕೆಯಾಗಿತ್ತು.ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ಷರೀಫ್ ಅವರ ಹೆಸರು ಈ ಹಗರಣದಲ್ಲಿ ಕೇಳಿಬಂದಾಗ, ಸುಪ್ರೀಂಕೋರ್ಟ್ ಅವರನ್ನು ಪದಚ್ಯುತಗೊಳಿಸಿ ಆದೇಶಿಸಿತ್ತು. ಅಲ್ಲದೆ, ಅವರ ಮಕ್ಕಳ ವಿರುದ್ಧವೂ ಭ್ರಷ್ಟಾಚಾರದ ಪ್ರಕರಣ ದಾಖಲಿಸಲಾಗಿತ್ತು.