ವಿಟಿಯು ಕುಲಸಚಿವರ ಅಮಾನತಿಗೆ ಮಧ್ಯಂತರ ತಡೆ

ಶನಿವಾರ, ಏಪ್ರಿಲ್ 20, 2019
31 °C

ವಿಟಿಯು ಕುಲಸಚಿವರ ಅಮಾನತಿಗೆ ಮಧ್ಯಂತರ ತಡೆ

Published:
Updated:

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಚ್.ಎನ್. ಜಗನ್ನಾಥ ರೆಡ್ಡಿ ಅವರ ಅಮಾನತು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಜಗನ್ನಾಥ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

2019ರ ಫೆಬ್ರುವರಿ 15ರಂದು ಹೊರಡಿಸಿದ್ದ ಅಮಾನತು ಆದೇಶ ಮತ್ತು 2019ರ ಮಾರ್ಚ್‌ 3ರಂದು ಸಲ್ಲಿಸಿದ್ದ ಆರೋಪ ಪಟ್ಟಿಗೂ ನ್ಯಾಯಾಲಯದ ಮುಂದಿನ ಆದೇಶದವರೆಗೆ ತಡೆ ನೀಡಿ ವಿಚಾರಣೆ ಮುಂದೂಡಿದೆ.

ಜಗನ್ನಾಥ ರೆಡ್ಡಿ ಅವರು 2015-16ನೇ ಸಾಲಿನಲ್ಲಿ ಹೆಚ್ಚಿನ ಪ್ರಯಾಣ ಭತ್ಯೆ ಪಡೆದು ವಿ.ವಿ.ಗೆ ನಷ್ಟ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಅವರ ವರದಿ ಆಧರಿಸಿ ಕುಲಪತಿ ಕರಿಸಿದ್ದಪ್ಪ, ಜಗನ್ನಾಥ ರೆಡ್ಡಿಯನ್ನು ಅಮಾನತುಗೊಳಿಸಲಾಗಿತ್ತು.

ಅತಿಥಿ ಉಪನ್ಯಾಸಕರಿಗೆ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಾಸ್ತುಶಿಲ್ಪ (ಬಿ.ಆರ್ಕ್‌) ಕೋರ್ಸ್‌ಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏಪ್ರಿಲ್‌ 15ರಂದು ಕೊನೆಯ ದಿನಾಂಕ.
ವಿಳಾಸ: ಮುಖ್ಯಸ್ಥರು, ವಾಸ್ತು ಶಿಲ್ಪ ವಿಭಾಗ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ.
ಸಂ‍ಪರ್ಕ: 080 22961811

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !