ಜೇವರ್ಗಿ: ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟ

7

ಜೇವರ್ಗಿ: ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟ

Published:
Updated:

ಜೇವರ್ಗಿ: ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ 2ನೇ ಅವಧಿಗೆ (30ತಿಂಗಳು) ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಪ್ರಸನ್ನಕುಮಾರ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.ಅಲೂರ: ಅಧ್ಯಕ್ಷ (ಪ್ರವರ್ಗ-ಎ), ಉಪಾಧ್ಯಕ್ಷ (ಎಸ್‌ಸಿ ಮಹಿಳೆ). ಯಡ್ರಾಮಿ: ಅಧ್ಯಕ್ಷ (ಪ್ರವರ್ಗ-ಎ),

ಉಪಾಧ್ಯಕ್ಷ (ಎಸ್‌ಸಿ ಮಹಿಳೆ). ಬಳಬಟ್ಟಿ: ಅಧ್ಯಕ್ಷ (ಪ್ರವರ್ಗ-ಎ), ಉಪಾಧ್ಯಕ್ಷ (ಎಸ್‌ಸಿ ಮಹಿಳೆ). ಕುರಳಗೇರಾ ಅಧ್ಯಕ್ಷ (ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ (ಎಸ್‌ಸಿ ಮಹಿಳೆ).ಹಿಪ್ಪರಗಾ (ಎಸ್.ಎನ್)-ಅಧ್ಯಕ್ಷ (ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ-(ಸಾಮಾನ್ಯ).ಕೂಡಿ: ಅಧ್ಯಕ್ಷ (ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ-(ಸಾಮಾನ್ಯ). ವಡಗೇರಾ: ಅಧ್ಯಕ್ಷ (ಪ್ರವರ್ಗ-ಬಿ ಮಹಿಳೆ), ಉಪಾಧ್ಯಕ್ಷ (ಎಸ್‌ಟಿ ಮಹಿಳೆ). ಮಾಗಣಗೇರಾ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರವರ್ಗ-ಎ ಮಹಿಳೆ).ಬಿರಾಳ (ಬಿ): ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ( ಸಾಮಾನ್ಯ ಮಹಿಳೆ). ನರಿಬೋಳ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರವರ್ಗ-ಬಿ ಮಹಿಳೆ).ನೆಲೋಗಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ- (ಸಾಮಾನ್ಯ ಮಹಿಳೆ). ಗಂವ್ಹಾರ: ಅಧ್ಯಕ್ಷ (ಸಾಮನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ಕಲ್ಲೂರ (ಕೆ): ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ).ಅಂಕಲಗಾ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ಇಜೇರಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ). ಕೋಳಕೂರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಎ).ಯಾಳವಾರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್‌ಟಿ). ಹರನೂರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ಬಿಳವಾರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಎಸ್‌ಸಿ). ಇಟಗಾ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್‌ಸಿ).ಕುಕನೂರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ). ಕಡಕೋಳ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಎ). ಮಂದೇವಾಲ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್‌ಸಿ).ಬಳುಂಡಗಿ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಎ). ಕೆಲ್ಲೂರ: ಅಧ್ಯಕ್ಷ (ಎಸ್‌ಸಿ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ಅರಳಗುಂಡಗಿ: ಅಧ್ಯಕ್ಷ (ಎಸ್‌ಸಿ), ಉಪಾಧ್ಯಕ್ಷ (ಸಾಮಾನ್ಯ).ಯಲಗೋಡ: ಅಧ್ಯಕ್ಷ (ಎಸ್‌ಸಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ಸೊನ್ನ: ಅಧ್ಯಕ್ಷ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ). ಮಳ್ಳಿ: ಅಧ್ಯಕ್ಷ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ).ಗುಡೂರ (ಎಸ್.ಎ): ಅಧ್ಯಕ್ಷ (ಎಸ್‌ಸಿ ಮಹಿಳೆ), ಉಪಾದ್ಯಕ್ಷ (ಪ್ರವರ್ಗ-ಎ ಮಹಿಳೆ). ಜೇರಟಗಿ: ಅಧ್ಯಕ್ಷ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹರವಾಳ: ಅಧ್ಯಕ್ಷ (ಎಸ್‌ಟಿ), ಉಪಾಧ್ಯಕ್ಷ (ಸಾಮಾನ್ಯಮಹಿಳೆ). ಆಂದೋಲಾ: ಅಧ್ಯಕ್ಷ (ಎಸ್‌ಟಿ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಎ ಮಹಿಳೆ).ತಾಲ್ಲೂಕಿನಲ್ಲಿ ಒಟ್ಟು 33 ಗ್ರಾಮ ಪಂಚಾಯಿತಿಗಳಿದ್ದು, 563 ಸದಸ್ಯರಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹರ್ಷಾ ಶೆಟ್ಟಿ, ತಹಶೀಲ್ದಾರ್ ಡಿ.ವೈ. ಪಾಟೀಲ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲಾ ನರಸಿಂಹರೆಡ್ಡಿ ಇದ್ದರು.ಜೇವರ್ಗಿ:ಉಪಾಧ್ಯಕ್ಷರ ಆಯ್ಕೆ ನಾಳೆ

ಜೇವರ್ಗಿ:
ತಾಲ್ಲೂಕು ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಅ.11ರಂದು ನಡೆಯಲಿದೆ. ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 22 ಜನ ಸದಸ್ಯರಿದ್ದಾರೆ. ಅದರಲ್ಲಿ ಕಾಂಗ್ರೆಸ್-14, ಬಿಜೆಪಿ-07 ಹಾಗೂ ಜೆಡಿಎಸ್‌ನ ಒಬ್ಬರು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಕಳೆದ ಅವಧಿಯಲ್ಲಿ ತಾ.ಪಂ ಅಧ್ಯಕ್ಷರಾಗಿ ಬಿಜೆಪಿಯ ನೀಲಾಬಾಯಿ ಪುಂಡಲಿಕ ಚವ್ಹಾಣ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ರೇವಣಸಿದ್ಧಪ್ಪಗೌಡ ಕಮಾನಮನಿ ಕಾರ್ಯನಿರ್ವಹಿಸಿದ್ದರು.ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಹರ್ಷಾಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಥಮ ಅವಧಿಗೆ ಅಧ್ಯಕ್ಷರಾಗಿ ಆಂದೋಲಾ ಕ್ಷೇತ್ರದ ತಾ.ಪಂ. ಸದಸ್ಯೆ ಬಿಜೆಪಿಯ ವಿಜಯಲಕ್ಷ್ಮಿ ಆಂದೋಲಾ, ಆಲೂರ ಕ್ಷೇತ್ರದ ತಾ.ಪಂ.ಸದಸ್ಯೆ ನೀಲಾಬಾಯಿ ಚವ್ಹಾಣ ತಲಾ 10ತಿಂಗಳು ಕಾರ್ಯ ನಿರ್ವಹಿಸಿದ್ದರು. ಪ್ರಥಮ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸದಸ್ಯರಿರದ ಕಾರಣ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry