ಕೃಷಿ ವಲಯ ನಿರ್ಲಕ್ಷಿಸಿದ ಕೇಂದ್ರ: ಚಾಮರಸ ಮಾಲಿಪಾಟೀಲ

7

ಕೃಷಿ ವಲಯ ನಿರ್ಲಕ್ಷಿಸಿದ ಕೇಂದ್ರ: ಚಾಮರಸ ಮಾಲಿಪಾಟೀಲ

Published:
Updated:
Prajavani

ರಾಯಚೂರು: ಕೇಂದ್ರ ಸರ್ಕಾರವು ಕೃಷಿ ವಲಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಶುಕ್ರವಾರ ಮಂಡಿಸಿರುವ ಬಜೆಟ್ ರೈತರಲ್ಲಿ ನಿರಾಶೆ ಮೂಡಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‍ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ರೈತರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಸಾಲಮನ್ನಾ ಘೋಷಿಸಬಹುದು ಎನ್ನುವ ಆಶಾವಾದ ಇತ್ತು. ಕೃಷಿ ಸಮ್ಮಾನ್‌ ಜಾರಿಗೊಳಿಸಿ, ಕೃಷಿ ಅವಮಾನ ಮಾಡಿದ್ದಾರೆ ಎಂದರು.

ಚುನಾವಣೆಯಲ್ಲಿ ಹೇಳಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ಒಂದು ಯೋಜನೆ ಘೋಷಿಸಿದ್ದಾರೆ. ನಾಲ್ಕು ತಿಂಗಳಿಗೊಮ್ಮೆ ₹2 ಸಾವಿರ ಜಮಾಗೊಳಿಸುವ ಯೋಜನೆಯು ರೈತರಿಗೆ ಭಿಕ್ಷೆ ನೀಡಿದಂತಾಗಿದೆ. ಬೆಂಬಲ ಬೆಲೆ ನಿಗದಿಯಲ್ಲೂ ಕೇಂದ್ರ ಸರ್ಕಾರ ಅನ್ಯಾಯವಾಗಿದೆ ಎಂದು ತಿಳಿಸಿದರು.

ಕೃಷಿ ಆದಾಯ ದ್ವಿಗುಣಗೊಳಿಸುವ ಬಗ್ಗೆ ಹೇಳುತ್ತಿದ್ದ ಪ್ರಧಾನಮಂತ್ರಿಗಳು ಬಜೆಟ್‌ನಲ್ಲಿ ಯಾವುದೇ ವಿಶೇಷತೆ ನೀಡಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರಿಗಾಗಿ ಯಾವುದೇ ಪರಿಹಾರದ ಭರವಸೆ ನೀಡಿಲ್ಲ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಯಪ್ಪಸ್ವಾಮಿ, ಹುಲಿಗೆಪ್ಪ ಜಾಲಿಬೆಂಚಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !