ಮಾನವೀಯ ಮೌಲ್ಯಗಳ ‘ಸಿಂಹಾಚಲಂ’

ಶುಕ್ರವಾರ, ಏಪ್ರಿಲ್ 26, 2019
34 °C

ಮಾನವೀಯ ಮೌಲ್ಯಗಳ ‘ಸಿಂಹಾಚಲಂ’

Published:
Updated:
Prajavani

ತೆಲುಗು ನೆಲದ ಸೊಗಡನ್ನು ಮತ್ತು ಅಲ್ಲಿನ ಜೀವನಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಲೇ ಮನಮುಟ್ಟುವಂತೆ ಕಥೆಗಳನ್ನು ಹೇಳುವುದರಲ್ಲಿ ತೆಲುಗು ಕಥೆಗಾರ ಶ್ರೀರಮಣ ನಿಸ್ಸೀಮರು. ಇವರು ರಚಿಸಿರುವ ಹತ್ತಾರು ಕಥಾಸಂಕಲನಗಳಲ್ಲಿ ಬಹಳ ಜನಪ್ರಿಯವಾಗಿರುವುದು ‘ಮಿಥುನಂ’. 

‘ಮಿಥುನಂ’ ಕೃತಿಯು ಜೀವನದ ತವಕ, ತಲ್ಲಣಗಳು, ಸಣ್ಣಪುಟ್ಟ ಘಟನೆ, ಸಂಬಂಧ, ಸಂವೇದನೆ ಮತ್ತು ಭಾವನೆಗಳಿಗೆ ಸುಂದರ ಚೌಕಟ್ಟು ಒದಗಿಸುವ  ಸರಳ ಕಥೆಗಳಿಂದ ಕೂಡಿದೆ. ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರುವುದು ಮಾತ್ರವಲ್ಲ, 2012ರಲ್ಲಿ ಸಿನಿಮಾವೊಂದರ ವಸ್ತವೂ ಆಗಿರುವುದು ‘ಮಿಥುನಂ’ ಹಿರಿಮೆ.  ಮೂಲಕಥೆಗೆ ಧಕ್ಕೆಯಾಗದಂತೆ ಕನ್ನಡಿಗರಿಗೆ ಆಪ್ತವಾಗುವಂತೆ ಉತ್ತರ ಕರ್ನಾಟಕದ ಗಂಡುಮೆಟ್ಟಿನ ಭಾಷೆಯ ಸೊಗಡನ್ನು ಹೊಂದಿಸಿ ಈ ಕಥೆಯನ್ನು ಕನ್ನಡಕ್ಕೆ ತಂದವರು ಕಥೆಗಾರ ವಸುಧೇಂದ್ರ.

‘ಮಿಥುನಂ‘ ತೆಲುಗು ಕಥಾಸಂಕಲನದ ಆಯ್ದ ನಾಲ್ಕು ಕಥೆಗಳನ್ನು ಕನ್ನಡ ಜಾಯಮಾನಕ್ಕೆ ತಕ್ಕಂತೆ ಬೆಂಗಳೂರಿನ ಯುವಶ್ರೀ ರಂಗತಂಡ ‘ಸಿಂಹಾಚಲಂ ಸಂಪಿಗೆ’ ಹೆಸರಿನಲ್ಲಿ ಅಚ್ಚುಕಟ್ಟಾಗಿ ರಂಗಕ್ಕೆ ತಂದಿದೆ. ಮಾರ್ಚ್‌ 23ರಂದು ಶನಿವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಜೆ.ಪಿ. ನಗರದ ರಂಗಶಂಕರದಲ್ಲಿ ‘ಸಿಂಹಾಚಲಂ ಸಂಪಿಗೆ’ ನಾಟಕದ ಎರಡು ಪ್ರದರ್ಶನಗಳಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !