ಫ್ರೆಂಚ್ ಓಪನ್ ಗೆಲುವಿನಂಗಳದಲ್ಲಿ ವಿಹರಿಸಿದ ಸ್ಯಾಂಚೇಜ್

ಸೋಮವಾರ, ಮೇ 20, 2019
31 °C

ಫ್ರೆಂಚ್ ಓಪನ್ ಗೆಲುವಿನಂಗಳದಲ್ಲಿ ವಿಹರಿಸಿದ ಸ್ಯಾಂಚೇಜ್

Published:
Updated:
Prajavani

ಬೆಂಗಳೂರು: ‘1989ರ ಆ ದಿನ ಪತ್ರಿಕಾಗೋಷ್ಠಿ ನಡೆದಿತ್ತು. ನನ್ನ ಎದುರಿಗೆ ಇದ್ದ ಪತ್ರಕರ್ತರೊಬ್ಬರು, ನಾಳೆ ನಡೆಯುವ ಫೈನಲ್‌ನಲ್ಲಿ ಎಷ್ಟು ಸೆಟ್‌ಗಳಲ್ಲಿ ಗೆಲ್ಲುತ್ತಿಯಾ? ಎಂದು ಕೇಳಿದ್ದರು. ಅದಕ್ಕೆ ಉತ್ತರ ನಾಳೆ ಕೊಡುತ್ತೇನೆಂದು ಪತ್ರಿಕ್ರಿಯಿಸಿದ್ದೆ. ಮರುದಿನ ನಡೆದ ಫೈನಲ್‌ನಲ್ಲಿ ಆಗಿನ ವಿಶ್ವ ನಂಬರ್ ಒನ್ ಸ್ಟೆಫಿ ಗ್ರಾಫ್ ಅವರನ್ನು ಸೋಲಿಸಿದ್ದೆ. ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಸ್ಪೇನ್ ದೇಶದ ಮೊದಲ ಮಹಿಳೆಯಾಗಿದ್ದೆ. ಅದೇ ಪತ್ರಿಕಾಗೋಷ್ಠಿಗೆ ಬಂದು ಅದೇ ಪತ್ರಕರ್ತರ ಮುಂದೆ ಕುಳಿತ. ಅವರೆಲ್ಲ ಚಪ್ಪಾಳೆ ತಟ್ಟಿ ಗೌರವಿಸಿದರು’–

ಮೂರು ದಶಕಗಳ ಹಿಂದಿನ ಸುವರ್ಣ ನೆನಪುಗಳ ಲೋಕಕ್ಕೆ ಸ್ಪೇನ್ ದೇಶದ ಟೆನಿಸ್ ತಾರೆ ಅರಾಂತಾ ಸ್ಯಾಂಚೆಜ್ ವಿಕಾರಿಯೊ ತೇಲಾಡಿದ್ದರು. ಆಗ 17 ವರ್ಷದ ಬಾಲಕಿ ಅರಾಂತಾ ಅವರು ಜರ್ಮನಿಯ ಸ್ಟೆಫಿ ಗ್ರಾಫ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದ್ದು ಇಂದಿಗೂ ಟೆನಿಸ್ ಅಂಗಳದ ಮಹತ್ವದ ಘಟನೆಗಳಲ್ಲಿ ಒಂದು.

ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಟಿಸಿಎಸ್ ವಿಶ್ವ ಟೆನ್ ಕೆ  ಓಟದ ಪ್ರಚಾರ ರಾಯಭಾರಿಯಗಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ತಮ್ಮ ಟೆನಿಸ್ ಜೀವನ ಮತ್ತು ಕುಟುಂಬದ ಪ್ರೋತ್ಸಾಹವನ್ನು ನೆನೆದರು.

‘ಇದೇ ತಿಂಗಳು ನಡೆಯಲಿರುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಸಿಮೊನಾ ಹಲೆಪ್ ಅವರಿಗೆ ಪ್ರಶಸ್ತಿ ಗೆಲುವಿನ ಅವಕಾಶ ಹೆಚ್ಚಿದೆ. ಆದರೆ ಎರಡೂ ವಿಭಾಗಗಳಲ್ಲಿ ಅಪಾರ ಪೈಪೋಟಿ ಇದೆ’ ಎಂದರು.

‘ಓಟದ ಹವ್ಯಾಸವನ್ನು ಕುಟುಂಬದ ಎಲ್ಲರೂ ರೂಢಿಸಿಕೊಳ್ಳಬೇಕು. ಅದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಬಹುತೇಕ ಎಲ್ಲ ಕ್ರೀಡೆಗಳಿಗೂ ಓಟದ ಅವಶ್ಯಕತೆ ಇದೆ. ಓಟದಿಂದ ಫಿಟ್‌ನೆಸ್, ಆರೋಗ್ಯ ಮತ್ತು ಉಲ್ಲಾಸವಿರುತ್ತದೆ. ವಿಶ್ವ 10ಕೆ ರನ್ ಭಾರತದಲ್ಲಿ ಈಗ ಬಹಳಷ್ಟು ಪ್ರಸಿದ್ಧಿ ಗಳಿಸಿದೆ’ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !