ಶವಸಂಸ್ಕಾರಕ್ಕೆ ಸಿ.ಎಂ ಆಹ್ವಾನಿಸಿ ರೈತ ಆತ್ಮಹತ್ಯೆ

ಗುರುವಾರ , ಜೂಲೈ 18, 2019
29 °C

ಶವಸಂಸ್ಕಾರಕ್ಕೆ ಸಿ.ಎಂ ಆಹ್ವಾನಿಸಿ ರೈತ ಆತ್ಮಹತ್ಯೆ

Published:
Updated:
Prajavani

ಮಂಡ್ಯ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನ ಶವಸಂಸ್ಕಾರಕ್ಕೆ ಬರಬೇಕು, ನಮ್ಮ ಹೋಬಳಿ ವ್ಯಾಪ್ತಿಯ ಕೆರೆ ತುಂಬಿಸಬೇಕು’ ಎಂದು ಮನವಿ ಮಾಡುವ ವಿಡಿಯೊ ಚಿತ್ರೀಕರಿಸಿ ಕೆ.ಆರ್‌.ಪೇಟೆ ತಾಲ್ಲೂಕು, ಸಂತೇಬಾಚಹಳ್ಳಿ ಹೋಬಳಿ ಅಘಲಯ ಗ್ರಾಮದ ರೈತರೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ಸಂಸ್ಕಾರದ ನಂತರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಎ.ಎನ್‌.ಸುರೇಶ್‌ (45) ತನ್ನ ಜಮೀನಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ. ಸೋಮವಾರ ಎರಡು ವಿಡಿಯೊ ದೊರೆತಿವೆ.

ಸಂತೇಬಾಚಹಳ್ಳಿ ಹೋಬಳಿಯಲ್ಲಿ ವಿಪರೀತ ಬರವಿದೆ. 1,500 ಅಡಿ ಕೊಳವೆ ಬಾವಿ ಕೊರಸಿದರೂ ನೀರು ಬರುತ್ತಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಮ್ಮ ಹೋಬಳಿಯ ಕೆರೆಗಳನ್ನು ತುಂಬಿಸಬೇಕು. ಸಮ್ಮಿಶ್ರ ಸರ್ಕಾರದಲ್ಲಿರುವ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರು ಕೆರೆ ತುಂಬಿಸಲು ಸಹಾಯ ಮಾಡಬೇಕು. ಸಚಿವ ಸಿ.ಎಸ್‌.ಪುಟ್ಟರಾಜು, ಶಾಸಕ ನಾರಾಯಣಗೌಡ ಒಗ್ಗಟ್ಟಿನಿಂದ ನೀರು ಹರಿಸಬೇಕು ಎಂದು ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.

ಬೆಳ್ಳೂರಿನಲ್ಲಿ ನಮ್ಮ ಮನೆ ದೇವರ ದೇವಾಲಯ ನಿರ್ಮಾಣ ಅಪೂರ್ಣಗೊಂಡಿದೆ. ನಾಗಮಂಗಲ ಶಾಸಕ ಸುರೇಶ್‌ಗೌಡ ಅವರು ದೇವಾಲಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ವಾರದ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆ. ಆದರೆ ನಮ್ಮ ಕುಟುಂಬ ಧರ್ಮಸ್ಥಳ ಪ್ರವಾಸದಲ್ಲಿ ಇತ್ತು. ಕುಟುಂಬ ಸದಸ್ಯರ ಮುಖ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಅವರಿಗೆ ಮನವಿ: ವಿಡಿಯೊದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವ ಸುರೇಶ್‌, ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿ ಆಗಬೇಕು. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳ ಕಾಲು ಎಳೆಯಬಾರದು, ಸರ್ಕಾರ ಬೀಳಿಸಬಾರದು. ಭವಿಷ್ಯ ಇದ್ದರೆ ಮುಂದೆ ನೀವೂ ಮುಖ್ಯಮಂತ್ರಿ ಆಗುತ್ತೀರಿ. ರಾಜ್ಯದ ಅಭಿವೃದ್ಧಿ ಮಾಡಲು ಕುಮಾರಸ್ವಾಮಿ ಅವರಿಗೆ ಅವಕಾಶ ಕೊಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.

‘ಮುಖ್ಯಮಂತ್ರಿಗಳ ಕಾಲು ಎಳೆಯಬಾರದು’

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವ ಸುರೇಶ್‌, ‘ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿ ಆಗಿರಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳ ಕಾಲು ಎಳೆಯಬಾರದು. ಸರ್ಕಾರ ಬೀಳಿಸಬಾರದು. ಭವಿಷ್ಯ ಇದ್ದರೆ ಮುಂದೆ ನೀವೂ ಮುಖ್ಯಮಂತ್ರಿ ಆಗುತ್ತೀರಿ. ರಾಜ್ಯದ ಅಭಿವೃದ್ಧಿ ಮಾಡಲು ಕುಮಾರಸ್ವಾಮಿ ಅವರಿಗೆ ಅವಕಾಶ ಕೊಡಿ’ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ. ಅಘಲಯ ಕೆರೆ ಬತ್ತಿದ ನಂತರ ಬೆಳೆ ನಾಶವಾಗಿ, ಸುರೇಶ್‌ ನಷ್ಟ ಅನುಭವಿಸಿದ್ದರು. ನಂತರ ಚೀಟಿ ವ್ಯವಹಾರ ನಡೆಸಿ ಕೈಸುಟ್ಟುಕೊಂಡಿದ್ದರು. ₹ 5 ಲಕ್ಷದವರೆಗೆ ಕೈಸಾಲ ಮಾಡಿಕೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 9

  Sad
 • 0

  Frustrated
 • 4

  Angry

Comments:

0 comments

Write the first review for this !