ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಜುಸ್‌ ಸಿಬ್ಬಂದಿ ವೇತನಕ್ಕೆ ಸಾಲ ಮಾಡಿದ ರವೀಂದ್ರನ್‌

Published 22 ಏಪ್ರಿಲ್ 2024, 15:24 IST
Last Updated 22 ಏಪ್ರಿಲ್ 2024, 15:24 IST
ಅಕ್ಷರ ಗಾತ್ರ

ನವದೆಹಲಿ: ಬೈಜುಸ್‌ ಸಿಬ್ಬಂದಿಗೆ ಮಾರ್ಚ್‌ ತಿಂಗಳಿನಲ್ಲಿ ಭಾಗಶಃ ವೇತನ ಪಾವತಿಸಲು ಸಿಇಒ ಬೈಜು ರವೀಂದ್ರನ್‌ ಅವರು, ಸಾಲ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ರವೀಂದ್ರನ್‌ ತನ್ನ ವೈಯಕ್ತಿಕ ಸಾಮರ್ಥ್ಯದ ಮೇಲೆ ಸಾಲ ಪಡೆದು ಸಿಬ್ಬಂದಿಯ ಬ್ಯಾಂಕ್‌ ಖಾತೆಗಳಿಗೆ ಏಪ್ರಿಲ್‌ 20ರಂದು ವೇತನ ಜಮೆ ಮಾಡಿದ್ದಾರೆ. ಈ ಸಾಲದ ಮೊತ್ತವು ₹25 ಕೋಟಿಯಿಂದ ₹30 ಕೋಟಿ ಆಗಿದೆ ಎಂದು ತಿಳಿಸಿವೆ.

ಶಿಕ್ಷಕರು ಮತ್ತು ಕೆಳ ಹಂತದ ಸಿಬ್ಬಂದಿಗೆ ಪೂರ್ಣ ವೇತನ ಪಾವತಿಸಲಾಗಿದೆ. ಉಳಿದವರಿಗೆ ಶೇ 50ರಿಂದ ಶೇ 100ರಷ್ಟು ವೇತನ ಪಾವತಿಸಿದ್ದಾರೆ. ಸಾಲದ ಮೂಲಕ ವೇತನ ಪಾವತಿ ಮಾಡುವುದು ಕಂಪನಿಯ ಸುಸ್ಥಿರ ಬೆಳವಣಿಗೆಗೆ ಸಹಕಾರಿಯಾಗುವುದಿಲ್ಲ. ಇದು ಮತ್ತಷ್ಟು ಸಂಕೀರ್ಣತೆ ಸೃಷ್ಟಿಗೆ ನಾಂದಿ ಹಾಡಲಿದೆ ಎಂದು ತಿಳಿಸಿವೆ. 

ಕಂಪನಿಯ ಒಟ್ಟು ₹1,664 ಕೋಟಿ ಮೊತ್ತದ ಅಧಿಕೃತ ಷೇರು ಬಂಡವಾಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿಶೇಷ ಸಾಮಾನ್ಯ ಸಭೆಯಲ್ಲಿ (ಇಜಿಎಂ) ಒಪ್ಪಿಗೆ ದೊರೆತಿದೆ. ಆದರೆ, ಹೂಡಿಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮೊರೆ ಹೋಗಿದ್ದಾರೆ. ಇದರಿಂದ ಕಂಪನಿಯ ಕಾರ್ಯಾಚರಣೆ ಮತ್ತು ಸಿಬ್ಬಂದಿ ವೇತನ ಪಾವತಿಗೆ ತೊಂದರೆ ಎದುರಾಗಿದೆ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT