ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

196 ಲಕ್ಷ ಟನ್‌ ಗೋಧಿ ಖರೀದಿಗೆ ನಿರ್ಧಾರ

Published 30 ಏಪ್ರಿಲ್ 2024, 15:42 IST
Last Updated 30 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ನವದೆಹಲಿ : ಕೇಂದ್ರ ಸರ್ಕಾರವು 2024–25ನೇ ಮಾರುಕಟ್ಟೆ ವರ್ಷದಲ್ಲಿ 196 ಲಕ್ಷ ಟನ್‌ ಗೋಧಿ ಖರೀದಿಸಲು ನಿರ್ಧರಿಸಿದೆ.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ವಾರ್ಷಿಕ 186 ಲಕ್ಷ ಟನ್‌ನಷ್ಟು ಗೋಧಿಯ ಅವಶ್ಯಕತೆಯಿದೆ.  ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ತೀರ್ಮಾನಿಸಿದೆ.

ಭಾರತೀಯ ಆಹಾರ ನಿಗಮವು ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತದೆ. ಇದಕ್ಕಾಗಿ ಕಾಪು ದಾಸ್ತಾನು ಮಾಡುತ್ತದೆ. ಸದ್ಯ ನಿಗಮದಿಂದ ಗೋಧಿ ಸಂಗ್ರಹಣೆ ಕಾರ್ಯ ಆರಂಭವಾಗಿದ್ದು, ಮಾರುಕಟ್ಟೆ ವರ್ಷದಲ್ಲಿ 310 ಲಕ್ಷದಿಂದ 320 ಲಕ್ಷ ಟನ್‌ನಷ್ಟು ಸಂಗ್ರಹಣೆ ಮಾಡುವ ಗುರಿ ಹೊಂದಿದೆ.   

ಗೋಧಿಯು ಚಳಿಗಾಲದ ಪ್ರಮುಖ ಬೆಳೆಯಾಗಿದ್ದು, ರಾಬಿ ಅವಧಿಯಲ್ಲಿ ಶೇ 11ರಷ್ಟು ಉತ್ಪಾದನೆ ಕುಸಿತವಾಗಿದೆ ಎಂದು ಸರ್ಕಾರದ ಅಂಕಿ–ಅಂಶ ತಿಳಿಸಿವೆ.  

‘ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಅನ್ನ ಯೋಜನೆ ಸೇರಿ ಇತರೆ ಯೋಜನೆಯಡಿ ವಿತರಣೆಗಾಗಿ ಗೋಧಿ ಸಂಗ್ರಹಣೆ ಪ್ರಕ್ರಿಯೆಯು ಸಾಂಗವಾಗಿ ನಡೆಯುತ್ತಿದೆ’ ಎಂದು ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಕೆ. ಮೀನಾ ತಿಳಿಸಿದ್ದಾರೆ.

2023–24ನೇ ಮಾರುಕಟ್ಟೆ ವರ್ಷದಲ್ಲಿ (ಏಪ್ರಿಲ್‌–ಮಾರ್ಚ್‌) ಕೇಂದ್ರ ಸರ್ಕಾರವು 261.97 ಲಕ್ಷ ಟನ್‌ನಷ್ಟು ಗೋಧಿ ಸಂಗ್ರಹಣೆ ಮಾಡಿತ್ತು.

‘ನಿಗಮವು ಪ್ರತಿ ಕ್ವಿಂಟಲ್‌ ಗೋಧಿಗೆ ₹2,275 ದರ ನಿಗದಿ‍ಪಡಿಸಿದೆ. 16 ಲಕ್ಷ ರೈತರಿಂದ ಗೋಧಿ ಖರೀದಿಗಾಗಿ ಒಟ್ಟು ₹45 ಸಾವಿರ ಕೋಟಿ ಮೀಸಲಿಟ್ಟಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಪಂಜಾಬ್‌ ಮತ್ತು ಹರಿಯಾಣದಲ್ಲಿ ಗೋಧಿ ಇಳುವರಿ ಉತ್ತಮವಾಗಿದೆ. ಈ ಎರಡು ರಾಜ್ಯಗಳಿಂದ 130 ಲಕ್ಷ ಟನ್‌ ಸಂಗ್ರಹಣೆಗೆ ನಿಗಮವು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT