ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ನಿವ್ವಳ ಲಾಭ ಕುಸಿತ

Published 11 ಜನವರಿ 2024, 16:59 IST
Last Updated 11 ಜನವರಿ 2024, 16:59 IST
ಅಕ್ಷರ ಗಾತ್ರ

ಮುಂಬೈ/ ನವದೆಹಲಿ: 2023–24ನೇ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಶೇ 8.2ರಷ್ಟು ನಿವ್ವಳ ಲಾಭ ಕಂಡಿದ್ದರೆ, ಇನ್ಫೊಸಿಸ್‌ನ ನಿವ್ವಳ ಲಾಭದಲ್ಲಿ ಶೇ 7.3ರಷ್ಟು ಕುಸಿತವಾಗಿದೆ.

ಇನ್ಫೊಸಿಸ್‌ ₹6,106 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹6,586 ಕೋಟಿ ನಿವ್ವಳ ಲಾಭಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಕುಸಿತ ಕಂಡಿದೆ.

ಕಂಪನಿಯ ಕಾರ್ಯಾಚರಣಾ ವರಮಾನ ₹38,821 ಕೋಟಿಗೆ ತಲುಪಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ವರಮಾನವು ₹38,318 ಕೋಟಿ ಇತ್ತು. ಆದಾಯದಲ್ಲಿ ಒಟ್ಟಾರೆ ಶೇ 1.3ರಷ್ಟು ಏರಿಕೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಪನಿಯ ವರಮಾನವು ಶೇ 1ರಿಂದ ಶೇ 2.5ರಷ್ಟು ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಸದ್ಯ ಇದನ್ನು ಪರಿಷ್ಕರಿಸಿದ್ದು, ಶೇ 1.5ರಿಂದ ಶೇ 2ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಿದೆ. 

ಸೆಮಿಕಂಡಕ್ಟರ್‌ ವಿನ್ಯಾಸ ಸೇವೆ ಒದಗಿಸುವ ಬೆಂಗಳೂರು ಮೂಲದ ಇನ್‌ಸೆಮಿ ಕಂಪನಿಯನ್ನು ₹280 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ನಾಲ್ಕನೇ ತ್ರೈಮಾಸಿಕದ ಅಂತ್ಯಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT