ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಸಕ್ತ ಆರ್ಥಿಕ ವರ್ಷದಲ್ಲಿ 100 ಹೊಸ ಶಾಖೆ: ಕರೂರು ವೈಶ್ಯ ಬ್ಯಾಂಕ್

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಖಾಸಗಿ ವಲಯದ ಕರೂರು ವೈಶ್ಯ ಬ್ಯಾಂಕ್ ದೇಶದಾದ್ಯಂತ 100 ಶಾಖೆಗಳನ್ನು ತೆರೆಯುವುದಾಗಿ ಘೋಷಿಸಿದೆ.
Published 22 ಮೇ 2024, 11:28 IST
Last Updated 22 ಮೇ 2024, 11:28 IST
ಅಕ್ಷರ ಗಾತ್ರ

ಚೆನ್ನೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಖಾಸಗಿ ವಲಯದ ಹಾಗೂ ತಮಿಳುನಾಡು ಮೂಲದ ಕರೂರು ವೈಶ್ಯ ಬ್ಯಾಂಕ್ ದೇಶದಾದ್ಯಂತ 100 ಹೊಸ ಶಾಖೆಗಳನ್ನು ತೆರೆಯುವುದಾಗಿ ಘೋಷಿಸಿದೆ.

ಬುಧವಾರ ಅಯೋಧ್ಯೆಯಲ್ಲಿ ಬ್ಯಾಂಕ್‌ನ 844ನೇ ಶಾಖೆಯನ್ನು ಉದ್ಘಾಟಿಸಿದ ಕರೂರು ವೈಶ್ಯ ಬ್ಯಾಂಕ್ ಅಧ್ಯಕ್ಷೆ ಮೀನಾ ಹೇಮಚಂದ್ರ ಅವರು ಈ ವಿಷಯ ತಿಳಿಸಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಈಗಾಗಲೇ 39 ಶಾಖೆಗಳನ್ನು ತೆರೆದಿದೆ. ಇನ್ನೂ ನೂರು ಶಾಖೆಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.

ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ₹1,605 ಕೋಟಿ ನಿವ್ವಳ ಲಾಭ ಗಳಿಸಿದೆ. ಅಲ್ಲದೇ ಎನ್‌ಪಿಎ ಕೂಡ 0.40ಕ್ಕೆ ಕುಸಿತ ಕಂಡಿದೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಯಾಗಿರುವ ಶಾಖೆ ಈ ಬ್ಯಾಂಕ್‌ನ ದೆಹಲಿ ವಲಯದ 39ನೇ ಶಾಖೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT