ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ ಶೇ 6.7ಕ್ಕೆ ಏರಿಕೆ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌

Last Updated 8 ಜೂನ್ 2022, 11:06 IST
ಅಕ್ಷರ ಗಾತ್ರ

ಮುಂಬೈ: ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಪರಿಷ್ಕರಿಸಿದೆ. ಹಣದುಬ್ಬರ ದರವು ಶೇಕಡ 6.7ಕ್ಕೆ ಏರಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು, ಚಿಲ್ಲರೆ ಹಣದುಬ್ಬರವು ಶೇ 5.7ರಷ್ಟು ಆಗುವ ಅಂದಾಜು ಮಾಡಲಾಗಿತ್ತು. ‘ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಹಣದುಬ್ಬರವು ಜಾಗತಿಕವಾಗಿ ವ್ಯಾಪಿಸಿದ್ದು, ಇದರಿಂದಾಗಿ ಹೊಸ ಸವಾಲುಗಳು ಎದುರಾಗುತ್ತಿವೆ. ಹೀಗಾಗಿ ಹಣದುಬ್ಬರದ ಅಂದಾಜನ್ನು ಶೇ 6.7ಕ್ಕೆ ಹೆಚ್ಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಚಿಲ್ಲರೆ ಹಣದುಬ್ಬರ ದರವು ಶೇ 6ನ್ನು ಮೀರದೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಆರ್‌ಬಿಐ ಮೇಲಿದೆ. ಆದರೆ, ಕಳೆದ ನಾಲ್ಕು ತಿಂಗಳಿನಿಂದ ಅದು ಶೇ 6ಕ್ಕಿಂತ ಹೆಚ್ಚಿಗೆ ಇದೆ. ಏಪ್ರಿಲ್‌ನಲ್ಲಿ ಶೇ 7.8ಕ್ಕೆ ಏರಿಕೆ ಆಗಿದೆ.

‘ರಷ್ಯಾ–ಉಕ್ರೇನ್‌ ಸಂಘರ್ಷವು ಹೊಸ ಸವಾಲುಗಳನ್ನು ಮುಂದಿಟ್ಟಿದೆ. ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಆಹಾರ, ಇಂಧನ ಮತ್ತು ಸರಕುಗಳ ಬೆಲೆ ಹೆಚ್ಚಾಗುವಂತೆ ಆಗಿದೆ. 2022ರಲ್ಲಿ ಮುಂಗಾರು ವಾಡಿಕೆಯಂತೆ ಇರುವ ಹಾಗೂ ಭಾರತವು ಖರೀದಿಸುವ ಕಚ್ಚಾ ತೈಲದ ಸರಾಸರಿ ಬೆಲೆಯು ಬ್ಯಾರಲ್‌ಗೆ 105 ಡಾಲರ್‌ ಇರುವ ಅಂದಾಜನ್ನು ಇಟ್ಟುಕೊಂಡು ಚಿಲ್ಲರೆ ಹಣದುಬ್ಬರುವ ಶೇ 6.7ರಷ್ಟು ಇರುವ ಅಂದಾಜು ಮಾಡಲಾಗಿದೆ’ ಎಂದು ಗವರ್ನರ್‌ ಹೇಳಿದ್ದಾರೆ.

ಸವಾಲುಗಳು

ಗರಿಷ್ಠ ಮಟ್ಟದಲ್ಲಿ ಸರಕುಗಳ ದರ

ಹಲವು ರಾಜ್ಯಗಳಿಂದ ವಿದ್ಯುತ್‌ ದರ ಪರಿಷ್ಕರಣೆ

ಪೂರೈಕೆ ವ್ಯವಸ್ಥೆಯಲ್ಲಿ ಅಡಚಣೆಗಳು

ಕೋಳಿ ಮತ್ತು ಪಶು ಆಹಾರ ದುಬಾರಿ

***

ಚಿಲ್ಲರೆ ಹಣದುಬ್ಬರ: ಆರ್‌ಬಿಐ ಅಂದಾಜು (%)

ಏಪ್ರಿಲ್‌–ಜೂನ್‌;7.5

ಜುಲೈ–ಸೆಪ್ಟೆಂಬರ್‌;7.4

ಅಕ್ಟೋಬರ್‌–ಡಿಸೆಂಬರ್‌;6.2

ಜನವರಿ–ಮಾರ್ಚ್‌;5.8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT