ಬುಧವಾರ, ಡಿಸೆಂಬರ್ 11, 2019
27 °C

ಇಂದಿನಿಂದ ಬಿಜೆಪಿ ಬರ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 100 ತಾಲ್ಲೂಕುಗಳ ಬರ ಸ್ಥಿತಿಯನ್ನು ಹಾಗೂ ಕೊಡಗಿನ ಪ್ರವಾಹ ಸ್ಥಿತಿಯನ್ನು ಅರಿಯಲು ಬಿಜೆಪಿ ರಾಜ್ಯ ಘಟಕದ ಆರು ತಂಡಗಳು ಭಾನುವಾರದಿಂದ ಪ್ರವಾಸ ಮಾಡಲಿವೆ.

ಕೆ.ಎಸ್‌.ಈಶ್ವರಪ್ಪ ನೇತೃತ್ವದ ತಂಡ: 2ರಂದು ಬೀದರ್‌, 3ರಂದು ಕಲಬುರ್ಗಿ, 4ರಂದು ರಾಯಚೂರು, ಯಾದಗಿರಿ, 5ರಂದು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ. ತಂಡದ ಸದಸ್ಯರು: ಗೋವಿಂದ ಕಾರಜೋಳ, ಎನ್‌.ರವಿಕುಮಾರ್‌, ಭಗವಂತ ಖೂಬಾ, ಲಕ್ಷ್ಮಣ ಸವದಿ, ಬಾಬೂರಾವ್‌ ಚೌಹಾಣ್‌, ನರಸಿಂಹ ನಾಯಕ, ದತ್ತಾತ್ರೇಯ ಪಾಟೀಲ ರೇವೂರ.

ರಮೇಶ ಜಿಗಜಿಣಗಿ ನೇತೃತ್ವದ ತಂಡ: 3ರಂದು ಚಿಕ್ಕಬಳ್ಳಾಪುರ, 4ರಂದು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆ. ತಂಡದ ಸದಸ್ಯರು: ಪಿ.ಸಿ.ಮೋಹನ್, ಜಿ.ಎಚ್‌.ತಿಪ್ಪಾರೆಡ್ಡಿ, ತೇಜಸ್ವಿನಿ ಗೌಡ, ಪೂರ್ಣಿಮಾ ಶ್ರೀನಿವಾಸ್, ಬಿ.ಸುರೇಶ ಗೌಡ.

ಡಿ.ವಿ.ಸದಾನಂದ ಗೌಡ ನೇತೃತ್ವದ ತಂಡ: 6ರಂದು ಕೊಡಗು ಜಿಲ್ಲೆ. ತಂಡದ ಸದಸ್ಯರು: ಪ್ರಹ್ಲಾದ ಜೋಷಿ, ನಳಿನ್‌ ಕುಮಾರ್ ಕಟೀಲು, ಪ್ರತಾಪಸಿಂಹ, ಎಸ್‌.ಜಿ.ಮೇದಪ್ಪ, ಮನು ಮುತ್ತಪ್ಪ.

ಜಗದೀಶ ಶೆಟ್ಟರ್‌ ತಂಡ: 3ರಂದು ಗದಗ, ಕೊಪ್ಪಳ, 4ರಂದು ಬಳ್ಳಾರಿ, ಧಾರವಾಡ, 5ರಂದು ಬೆಳಗಾವಿ ಜಿಲ್ಲೆ. ಸದಸ್ಯರು: ಬಿ.ಶ್ರೀರಾಮುಲು, ಕರಣಿ ಸಂಗಣ್ಣ, ಸುರೇಶ್ ಅಂಗಡಿ, ಹಾಲಪ್ಪ ಆಚಾರ್, ಶಂಕರಗೌಡ ಪಾಟೀಲ, ಈಶ್ವರಚಂದ್ರ ಹೊಸಮನಿ.

ಆರ್‌.ಅಶೋಕ ತಂಡ: 6ರಂದು ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ, 7ರಂದು ಕೋಲಾರ ಹಾಗೂ ರಾಮನಗರ ಜಿಲ್ಲೆ.‌ ಸದಸ್ಯರು: ವಿ.ಸೋಮಣ್ಣ, ಬಿ.ಸೋಮಶೇಖರ್‌, ಸಿ.ಪಿ.ಯೋಗೀಶ್ವರ, ಎ.ರಾಮದಾಸ್‌, ಎಂ.ಜಯದೇವ್‌, ಎಂ.ರಾಜೇಂದ್ರ.

ಕೋಟ ಶ್ರೀನಿವಾಸ ಪೂಜಾರಿ ತಂಡ: 3ರಂದು ಹಾಸನ, ಚಿಕ್ಕಮಗಳೂರು, ದಾವಣಗೆರೆ, 4ರಂದು ಹಾವೇರಿ. ಸದಸ್ಯರು: ಬಸವರಾಜ ಬೊಮ್ಮಾಯಿ, ಆಯನೂರು ಮಂಜುನಾಥ, ಆರಗ ಜ್ಞಾನೇಂದ್ರ, ಪವಿತ್ರಾ ರಾಮಯ್ಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು