ವಿವಾಹದಲ್ಲೂ ಪರಿಸರ, ಸಾಹಿತ್ಯ ಪ್ರೀತಿ

7

ವಿವಾಹದಲ್ಲೂ ಪರಿಸರ, ಸಾಹಿತ್ಯ ಪ್ರೀತಿ

Published:
Updated:
Deccan Herald

ಮಿಡಿತ ಫೌಂಡೇಷನ್ ಪ್ರಾರಂಭಿಸಿ ಅದರ ಮೂಲಕ ಸದಾ ಒಂದಿಲ್ಲೊಂದು ಪರಿಸರ ಸಂಬಂಧಿತ ಕಾರ್ಯದಲ್ಲಿ ತೊಡಗಿಕೊಳ್ಳುವ ಪರಿಸರ ಮಂಜು ತನ್ನ ವಿವಾಹ ಕಾರ್ಯದಲ್ಲೂ ಪರಿಸರ ಪ್ರೀತಿ ಮೆರೆದಿದ್ದಾರೆ. ಕನ್ನಡ ಕಾಳಜಿಯೂ ಅದರೊಟ್ಟಿಗೆ ಬೆಸೆದುಕೊಂಡಿದೆ.

 ಪರಿಸರ ಪ್ರೇಮಿಯಾಗಿರುವ ಮಂಜು ನವ್ಯಭಾರತಿ ಎಂಬುವರ ಜೊತೆ ಇದೇ 3 ಹಾಗೂ 4 ರಂದು ಎಚ್‌ಎಸ್‌ಆರ್ ಲೇಔಟ್‌ನ ಸಿದ್ದಾರ್ಥ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ತುಳಿಯಲಿದ್ದು, ಲಗ್ನ ಪತ್ರಿಕೆ ಜೊತೆಗೆ ಸಸಿಗಳನ್ನು ನೀಡಿ ಸಂಬಂಧಿಗಳು, ಸ್ನೇಹಿತರು ಹಾಗೂ ಶಿಕ್ಷಕರನ್ನು ಆಮಂತ್ರಿಸಿದ್ದಾರೆ.

ವಿವಾಹ ಆಮಂತ್ರಣ ಪತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಲೋಗೊ ಜೊತೆಗೆ ಸಿರಿಗನ್ನಡಂ ಗೆಲ್ಗೆ ಇದೆ. ತುಳಸಿ, ರುದ್ರಾಕ್ಷಿ, ದಾಸವಾಳ, ಬಿಲ್ವ ಪತ್ರೆ, ಬೆಟ್ಟದ ನೆಲ್ಲಿ, ಬೇವು, ತೆಂಗು , ನೇರಳೆ, ಕಾಡು ಬಾದಾಮಿ ಮುಂತಾದ ಮೂವತ್ತಕ್ಕೂ ಹೆಚ್ಚು ತಳಿಯ ಸಸಿಗಳನ್ನು ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಕುವೆಂಪು, ದ.ರಾ.ಬೇಂದ್ರೆ, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ ಅವರ ಹಾಗೂ ಪರಿಸರಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ನೀಡಿದ್ದಾರೆ. ವಿವಾಹದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪರಿಸರ ಪ್ರೇಮಿಗಳಿಗೆ ವಿವಿಧ ಬಗೆಯ ಬೀಜಗಳ ಉಂಡೆಗಳನ್ನು (ಸೀಡ್‌ಬಾಲ್‌)ವಿತರಿಸಲಾಗುತ್ತದೆ. ವಿವಾಹವು ಬಹುತೇಕ ಪ್ಲಾಸ್ಟಿಕ್‌ ಮುಕ್ತವಾಗಿಯೇ ನಡೆಯಲಿದೆ. ವಿವಾಹದ ಬಳಿಕ ಯಮಲೂರಿನಲ್ಲಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ 501 ಸಸಿಗಳನ್ನು ನೆಡಲು ನವಜೋಡಿ ಯೋಜನೆ ರೂಪಿಸಿದೆ. 

ಬೆಳ್ಳಂದೂರು ಬಳಿಯ ಯಮಲೂರಿನಲ್ಲಿ ವಾಸವಾಗಿರುವ ಪರಿಸರ ಮಂಜು ಮಾರತ್ತಹಳ್ಳಿಯ ವಾರ್ಡಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದಾರೆ. ಪರಿಸರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 2012ರಲ್ಲಿ ಮಿಡಿತ ಫೌಂಡೇಷನ್‌ ಅನ್ನು ಎನ್‌ಜಿಒ ಸ್ಥಾಪಿಸಿದ ಅವರು, ಅದರ ಮೂಲಕ ನಗರದ ಹಲವು ಪ್ರದೇಶಗಳಲ್ಲಿ ಇದುವರೆಗೆ 7000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಣೆ ಮಾಡಿದ್ದಾರೆ. 500ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಸಂಪರ್ಕ ಸಂಖ್ಯೆ: 9738965213

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !