ಶುಕ್ರವಾರ, ಸೆಪ್ಟೆಂಬರ್ 20, 2019
29 °C
ಗೂಗಲ್‌ ಸಿಇಒ ಸುಂದರ್ ಪಿಚೈ ಭರವಸೆ

‘ಗೂಗಲ್‌: ಮೂರನೇ ವ್ಯಕ್ತಿಗೆ ಮಾಹಿತಿ ಮಾರಾಟ ಇಲ್ಲ’

Published:
Updated:
Prajavani

ನ್ಯೂಯಾರ್ಕ್‌: ಗೂಗಲ್‌ ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡುವುದಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುಂದರ್ ಪಿಚೈ ಹೇಳಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮಗಳು ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಜಾಗತಿಕ ಆತಂಕದ ಕುರಿತು ಪಿಚೈ ಹೀಗೆ ಹೇಳಿದ್ದಾರೆ.

‘ದಿ ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಗೆ ನೀಡಿರುವ ಮಾಹಿತಿಯಲ್ಲಿ, ‘ಖಾಸಗಿತನ ಎಂಬುದು ಐಷಾರಾಮಿ ವಸ್ತು ಅಲ್ಲ. ಇದು ಬೆಲೆಯುಳ್ಳ ಉತ್ಪನ್ನ ಮತ್ತು ಸೇವೆಗಳನ್ನು ಖರೀದಿಸಲು ಬಯಸುವ ಜನರಿಗೆ ಮಾತ್ರವೇ ಲಭ್ಯವಾಗುತ್ತದೆ’ ಎಂದು ಹೇಳಿದ್ದಾರೆ.

ತಮ್ಮ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಮತ್ತು ಹಂಚಲಾಗುತ್ತದೆ ಎಂಬ ಬಗ್ಗೆ ಇಂದು ಜನರಿಗೆ ಕುತೂಹಲವಿದೆ. ಆದರೂ ಅವರು ತಮ್ಮದೇ ರೀತಿ ಖಾಸಗಿತನವನ್ನು
ವ್ಯಾಖ್ಯಾನಿಸುತ್ತಾರೆ ಎಂದು ಹೇಳಿದ್ದಾರೆ.

ಕೆಲವು ಕುಟುಂಬಗಳಿಗೆ ಒಂದಕ್ಕಿಂತ ಹೆಚ್ಚು ಸಾಧನಗಳ ಮೂಲಕ ಇಂಟರ್‌ನೆಟ್‌ ಹಂಚಿಕೊಳ್ಳುವವರಿಗೆ ಖಾಸಗಿತನ ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹಣ ಪಾವತಿಗೆ ಕ್ರೆಡಿಟ್‌ ಕಾರ್ಡ್‌ ಬಳಸುವ ಸಣ್ಣ ವ್ಯಾಪಾರಿಗಳಿಗೆ, ಗ್ರಾಹಕರ ಮಾಹಿತಿ ಸುರಕ್ಷಿತವಾಗಿರಬೇಕು. ಸೆಲ್ಫಿಗಳನ್ನು ಹಂಚಿಕೊಳ್ಳುವ ಯುವಜನರು ಖಾಸಗಿತನ ಎಂದರೆ ಭವಿಷ್ಯದಲ್ಲಿ ಮಾಹಿತಿಯನ್ನು ಅಳಿಸಿಹಾಕುವಂತಿರಬೇಕು ಎಂದು ಬಯಸುತ್ತಾರೆ.

ವಿಶ್ವದಾದ್ಯಂತ ಜನರಿಗೆ ಖಾಸಗಿತನ ರಕ್ಷಣೆ ಖಾತರಿಯಾಗಲು ಗೂಗಲ್‌ ನಂತಹ ಕಂಪನಿಗಳಿಗೆ ಕಾನೂನು ನೆರವಾಗಲಿದೆ. ಆದರೆ ನಾವು ಇದಕ್ಕಾಗಿ ಕಾಯುವುದಿಲ್ಲ. ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ಇದೇ ಸ್ಫೂರ್ತಿಯಲ್ಲಿ ನಾವು ಕಾರ್ಯೋನ್ಮುಖರಾಗುತ್ತೇವೆ. ಪ್ರತಿಯೊಬ್ಬರಿಗೂ ಖಾಸಗಿತನ ವಾಸ್ತವ ಎಂದು ತೋರಿಸುತ್ತೇವೆ ಎಂದು ಪಿಚೈ ಹೇಳಿದ್ದಾರೆ.

ಸುಳ್ಳು ಸುದ್ದಿಗೆ ಅಂಕುಶ (ಸಿಂಗಪುರ ವರದಿ): ಸುಳ್ಳು ಸುದ್ದಿ ಪ್ರಕಟಿಸುವುದು ಅಪರಾಧ ಕೃತ್ಯ ಎಂಬ ಕಾನೂನನ್ನು ಸಿಂಗಪುರ ಅಂಗೀಕರಿಸಿದೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ತಡೆಯುವ ಅಧಿಕಾರವನ್ನು ಸರ್ಕಾರಕ್ಕೆ ಇದು ನೀಡುತ್ತದೆ. ಅಲ್ಲದೆ ಸುದ್ದಿಯನ್ನು ಅಳಿಸಿಹಾಕುವ ಅವಕಾಶವೂ ಇರುತ್ತದೆ.

Post Comments (+)