ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕೈ ತಪ್ಪಿ ಹೋದ ವಿಚಾರಗಳು ಪುನಃ ಕೈ ಸೇರಿ ಸಂತೋಷ ಇಮ್ಮಡಿಗೊಳ್ಳಲಿದೆ
Published 1 ಜನವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಲೇವಾದೇವಿ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ. ಓದಿನೆಡೆ ಹೆಚ್ಚಿನ ಆಸಕ್ತಿ ಮೂಡುವುದು. ಮಾತಿನಲ್ಲಿ ಹಿಡಿತವಿರಲಿ.
ವೃಷಭ
ಅನುಮಾನಕ್ಕೆ ಎಡೆಮಾಡಿಕೊಡುವಂಥ ಕೆಲಸಗಳು ನಿಮ್ಮಿಂದ ನಡೆಯಲಿದೆ. ಸಣ್ಣಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಹಸ್ತ ದೊರಕಲಿದೆ. ಬಡಗಿ ಕೆಲಸ ಮಾಡುವವರಿಗೆ ಇಂದು ಸುಯೋಗ.
ಮಿಥುನ
ಗೊಂದಲದ ಸಮಸ್ಯೆಗೆ ಅನುಭವಿಗಳ ಸಲಹೆ ಪಡೆಯುವುದು ಸರಿಯಾದ ಮಾರ್ಗ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿಕೆಯಿಂದ ಮಾನಸಿಕ ಶಾಂತಿ ಹೆಚ್ಚಾಗಲಿದೆ. ಬ್ಯಾಂಕಿನ ಸಾಲ ತೀರಲಿದೆ.
ಕರ್ಕಾಟಕ
ನಿಯಮವನ್ನು ಬದಿಗಿಟ್ಟು ಸಮಯಕ್ಕೆ ಸರಿಯಾಗಿ ವರ್ತಿಸುವ ಅನಿವಾರ್ಯತೆ ಎದುರಾಗುವುದು. ಕಾರ್ಯನಿಮಿತ್ತ ಅತ್ತೆ-ಸೊಸೆಯಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ, ಸಮಾಧಾನ ಇರಲಿ.
ಸಿಂಹ
ಸಹಚರರನ್ನು ಒಮ್ಮನಸ್ಸಿನಿಂದ ಕರೆದೊಯ್ಯುವಲ್ಲಿ ಯಶಸ್ವಿಯಾಗುವಿರಿ. ರಚನಾತ್ಮಕ ಕಾರ್ಯಕ್ರಮಗಳ ಕುರಿತು ಮಾಧ್ಯಮದವರಿಂದ ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ.
ಕನ್ಯಾ
ಕೈ ತಪ್ಪಿ ಹೋದ ವಿಚಾರಗಳು ಪುನಃ ಕೈ ಸೇರಿ ಸಂತೋಷ ಇಮ್ಮಡಿಗೊಳ್ಳಲಿದೆ. ಮಾತಾ-ಪಿತೃಗಳ ಹಾರೈಕೆಯಿಂದ ಕೆಲಸ ಕಾರ್ಯಗಳಲ್ಲಿ ವಿಜಯ ಪಡೆಯುವಿರಿ. ನೀವಂದುಕೊಂಡ ಕೆಲಸ ನಡೆಯುತ್ತದೆ.
ತುಲಾ
ಕೋರ್ಟ್‌ ಕಚೇರಿ ದೂರುಗಳಂತಹ ಗೊಡವೆಗಳಿಗೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ. ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ.
ವೃಶ್ಚಿಕ
ಸ್ನೇಹಿತರಲ್ಲಿ ಅಥವಾ ಸಂಬಂಧಿಕರಲ್ಲಿ ಅವರ ವೈಯಕ್ತಿಕ ವಿಚಾರವನ್ನು ಅನಗತ್ಯವಾಗಿ ಮಾತನಾಡು ವುದಕ್ಕಿಂತ ಮೌನವಾಗಿ ಇರುವುದು ಲೇಸು. ಮನೆಯನ್ನು ನವೀಕರಣಗೊಳಿಸುವ ವಿಚಾರಗಳು ಯೋಚನೆಗೆ ಬರಲಿದೆ.
ಧನು
ಕೆಲಸದಲ್ಲಿ ಅಥವಾ ಕೆಲಸದ ಜಾಗವನ್ನು ಬದಲಾವಣೆ ಮಾಡುವುದು ಸರಿಯಲ್ಲ. ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು ಉತ್ತಮ. ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ.
ಮಕರ
ಕೆಲಸದಲ್ಲಿನ ಹೆಚ್ಚಿನ ಸ್ವಾತಂತ್ರ್ಯ ಸಿಗುವುದರಿಂದ ಗುರಿ ಸಾಧನೆ ಇನ್ನೂ ಹತ್ತಿರವಾಗಲಿದೆ. ನೃತ್ಯ ಮತ್ತು ಅಭಿನಯ ಕಲಿಯಲು ಆಸಕ್ತಿ ಉಂಟಾಗುವುದು. ಸರ್ಕಾರಿ ಕೆಲಸದವರಿಗೆ ಅನುಕೂಲಕರ ದಿನ.
ಕುಂಭ
ಸಿವಿಲ್ ಎಂಜಿನಿಯರ್‌ಗಳಿಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವುದು. ವಿದೇಶಿ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದಗಳನ್ನು ಮಾಡಿಕೊಳ್ಳುವುದು ಬಹಳ ಸಮಂಜಸವಾಗಿ ಕಾಣುವುದಿಲ್ಲ.
ಮೀನ
ಕೆಲವು ವಿಚಾರಗಳನ್ನು ತೀರ್ಮಾನಿಸುವ ಸಂದರ್ಭದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಹರಿದು ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಉಳಿತಾಯದ ಹಣ ಕೈ ಸೇರುವುದು.