ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ತೀರ್ಮಾನಗಳು ಭಾಗಶಃ ಸರಿಯಾಗಿರುವುದು
Published 8 ಮೇ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಂಖ್ಯಾಶಾಸ್ತ್ರಜ್ಞರಿಗೆ ಬಂದ ಉತ್ತಮ ಅವಕಾಶಗಳನ್ನು ಬಿಟ್ಟು ಇಚ್ಛೆಯ ಸಂಸ್ಥೆಯ ಕೆಲಸವನ್ನು ನಿರೀಕ್ಷಿಸುವುದರಲ್ಲಿ ಹುರುಳಿಲ್ಲವೆಂದು ಕಾಣುತ್ತದೆ. ಮಗನ ಮುಜುಗರದ ಸಂಗತಿಗಳು ತಲೆನೋವಾಗಬಹುದು.
ವೃಷಭ
ಐಶ್ವರ್ಯವು ಅನಿರೀಕ್ಷಿತವಾಗಿ ಬಂದಾಗ ದುಂದುವೆಚ್ಚ ಮಾಡದೆ ಬುದ್ಧಿವಂತಿಕೆಯನ್ನು ಬಳಸಿ ಸದುಪಯೋಗ ಮಾಡಿ. ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವ ಸನ್ನಿವೇಶಗಳು ಎದುರಾಗಲಿದೆ.
ಮಿಥುನ
ಮನೆಯ ಸಮೀಪದ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಾದಿಗಳ ವ್ಯವಸ್ಥೆಯ ಜವಾಬ್ದಾರಿ ನಿಮ್ಮದಾಗಬಹುದು. ತೆರಿಗೆ ಅಧಿಕಾರಿಗಳಿಗೆ ಮಧ್ಯಾಹ್ನದ ನಂತರದ ಸಮಯದಲ್ಲಿ ಕೆಲಸಗಳ ಒತ್ತಡ ಕಡಿಮೆಯಾಗಲಿದೆ.
ಕರ್ಕಾಟಕ
ಕುಟುಂಬದ ಅಭಿವೃದ್ಧಿಗೆ ಅಂತಃಕಲಹ, ಹಿತಶತ್ರುಗಳ ಬಾಧೆಯು ಅನುಭವಕ್ಕೆ ಬರಲಿದೆ. ರೈತರು ಉತ್ತಮ ತಳಿಯ ಬೆಳೆಯಿಂದ ಹೆಚ್ಚಿನ ಸಂತೋಷ ಹೊಂದುವರು. ಮಕ್ಕಳ ಪರೀಕ್ಷೆಯು ಸಮಸ್ಯೆಯಾಗದಿರಲಿ.
ಸಿಂಹ
ವೈದ್ಯರು ವೃತ್ತಿಯಲ್ಲಿ ಮುಖ್ಯವಾಗಿ ಈ ದಿನ ಹೆಚ್ಚಿನ ಜಾಗ್ರತೆ ವಹಿಸುವುದು ಒಳ್ಳೆಯದು. ಉತ್ಸವಾದಿಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮ ಮನಸ್ಸಿಗೆ ಒಂದು ರೀತಿಯ ದಿವ್ಯ ಅನುಭೂತಿಯು ದೊರೆಯುತ್ತದೆ.
ಕನ್ಯಾ
ಹಿರಿಯರ ಬಳಿಯಲ್ಲಿ ಅನವಶ್ಯಕ ವಿವಾದ, ಗೊಂದಲಗಳಿಗೆ ಅವಕಾಶ ನೀಡಬೇಡಿ. ವಿದೇಶದಿಂದ ಹೆಚ್ಚಿನ ಶಿಕ್ಷಣಕ್ಕೆಂದು ತೆರಳಿದ ಮಗನ ಆಗಮನವಾಗುವುದು. ಸ್ಪರ್ಧಾ ಮನೋಭಾವ ತೀವ್ರಗೊಳ್ಳುವುದು.
ತುಲಾ
ಪುರಾತತ್ವ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕಾರ್ಯ ನಿಮಿತ್ತ ದೂರದ ಊರಿನ ಪ್ರಯಾಣ ಬೆಳೆಸಬೇಕಾಗುವುದು. ಅನಗತ್ಯ ಅಲೆದಾಟಗಳನ್ನು ತಪ್ಪಿಸುವ ಪ್ರಯತ್ನ ಮಾಡಿ.
ವೃಶ್ಚಿಕ
ಷೇರು ಖರೀದಿ ಅಥವಾ ನಿವೇಶನಗಳಿಗೆ ಮುಂಗಡ ಪಾವತಿ ಮಾಡುವ ಮುನ್ನ ಹತ್ತು ಬಾರಿ ಆಲೋಚಿಸಿ. ನೀರಿಗೆ ಸಂಬಂಧಪಟ್ಟ ಅಪಾಯಗಳು ಸಂಭವಿಸುವ ಸಾಧ್ಯತೆ ಇರುವುದು.
ಧನು
ಅತಿಯಾದರೆ ಅಮೃತವು ವಿಷ ಎಂಬಂತೆ ನಿಮ್ಮ ಮಕ್ಕಳ ಮೇಲಿನ ಅತಿಯಾದ ಪ್ರೀತಿ ನಿಮಗೆ ಮಾರಕವಾಗಿ ಪರಿಣಮಿಸಬಹುದು. ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
ಮಕರ
ರಾತ್ರಿ ಅನಿವಾರ್ಯ ಕಾರಣಗಳಿಂದ ಆದ ನಿದ್ರಾಹೀನತೆ ಕೆಲಸದ ಸಮಯದಲ್ಲಿ ಬಹಳವಾಗಿ ಕಾಡುವ ಸಂಭವವಿದೆ. ಯಾವ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡುವುದು ಸರಿಯಲ್ಲ. ಲೋಭಿಗಳಂತೆ ವರ್ತಿಸಬೇಡಿ.
ಕುಂಭ
ತಹಶೀಲ್ದಾರರಿಂದ ಆಗಬೇಕಾದ ಕೆಲಸಗಳು ಸರಿಯಾಗಿ ಆಗುವ ಸಾಧ್ಯತೆಗಳು ಕಂಡುಬರುತ್ತವೆ. ಗುಪ್ತ ಸಂಕೇತಗಳು ಬಹಿರಂಗಗೊಳ್ಳಲಿದೆ. ಸೃಜನಶೀಲತೆಗೆ ಮನ್ನಣೆ ದೊರಕುವುದು.
ಮೀನ
ಗುಣಮಟ್ಟವನ್ನು ನೋಡಿ ಖರೀದಿಸಿದ ಜಮೀನು ಈಗ ಕೈ ಕೊಡುವ ಸಾಧ್ಯತೆ ಇದೆ. ಮಧ್ಯಮ ಮಟ್ಟದ ಜೀವನಕ್ಕೆ ಹಣಕಾಸಿನ ತೊಂದರೆ ಕಾಣುವುದಿಲ್ಲ. ತೀರ್ಮಾನಗಳು ಭಾಗಶಃ ಸರಿಯಾಗಿರುವುದು.