ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತ ಹೆಣ್ಣು ಮಕ್ಕಳಿಗೆ ಕಂಕಣಬಲ ಕೂಡಿಬರುವುದು
Published 10 ಮಾರ್ಚ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವು ವಾರಗಳಿಂದ ಮಾಡಿದ ಕಠಿಣ ಪರಿಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಪ್ರಾಪ್ತಿ. ಷೇರು ವ್ಯವಹಾರಗಳಿಂದ ಲಾಭ ಪಡೆಯಬಹುದು.
ವೃಷಭ
ಇಷ್ಟು ದಿನಗಳ ಕಠಿಣ ಕಾರ್ಯಾಗಾರದಿಂದ ಬಿಡುಗಡೆ ಬೇಕೆನಿಸಲಿದೆ. ಉದ್ಯೋಗಾಪೇಕ್ಷಿಗಳಿಗೆ ಗುತ್ತಿಗೆ ಆಧಾರಿತ ಉತ್ತಮ ಉದ್ಯೋಗ ಸಿಗಲಿದೆ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಮೂಡಲಿದೆ.
ಮಿಥುನ
ಬೇರೆಯವರ ಸಮಸ್ಯೆಗಳಿಗೆ ನೆರವಾಗುವ ಗುಣ ಹೊಂದಿರುವ ನಿಮಗೆ ದೇವರ ಆಶೀರ್ವಾದ ಇರುವುದು. ಉದ್ಯಮಿ ಹಾಗೂ ಅಧಿಕಾರಿಗಳಿಗೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇರುವುದು. ಖರ್ಚುವೆಚ್ಚಗಳನ್ನು ಸರಿದೂಗಿಸುವಿರಿ.
ಕರ್ಕಾಟಕ
ಮನಸ್ಸಿಗೆ ಶಾಂತಿ ಹಾಗೂ ಸಂತೋಷ ಇದ್ದು , ವಸ್ತ್ರಾಭರಣಗಳನ್ನು ಖರೀದಿ ಮಾಡುವಿರಿ. ಕೆಲವು ಪ್ರಭಾವಿತ ವ್ಯಕ್ತಿಗಳನ್ನು ಸಂಧಿಸಬೇಕಾಗಬಹುದು ಹಾಗೂ ಅವರಿಂದ ಹೆಚ್ಚಿನ ಮಾಹಿತಿಗಳನ್ನು ಪಡೆಯುವಿರಿ.
ಸಿಂಹ
ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಮಾರಾಟಗಾರರು ಹೆಚ್ಚಿನ ಬಂಡವಾಳ ಹೂಡುವುದು ಸರಿಯಲ್ಲ. ವ್ಯವಸಾಯಗಾರರು ಇಲಾಖೆಯಿಂದ ಸಹಾಯ ಪಡೆದುಕೊಳ್ಳಬಹುದು. ವೈಯಕ್ತಿಕ ವಿಷಯಗಳ ಬಗ್ಗೆ ನಿಗಾ ವಹಿಸಬೇಕಾಗುವುದು.
ಕನ್ಯಾ
ಪಾಲುದಾರಿಕೆ ಮತ್ತು ಸಹಭಾಗಿತ್ವದ ವ್ಯವಹಾರಗಳಿಂದ ಉತ್ತಮ ವರಮಾನ ಪಡೆದುಕೊಳ್ಳುವಿರಿ. ಇಂದಿನ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಸ್ನೇಹಿತರ ಭೇಟಿಯಿಂದ ಹಳೆಯ ನೆನಪು ಮರುಕಳಿಸಲಿವೆ.
ತುಲಾ
ಅಧ್ಯಾಪಕ ವರ್ಗದವರಿಗೆ ಹೆಚ್ಚಿನ ಕೆಲಸ ಅನಿವಾರ್ಯವಾಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ಆಯ-ವ್ಯಯದ ಕಡೆಗೆ ಗಮನವಿರಲಿ. ವ್ಯಾಪಾರಗಳಿಂದ ಸಮಾಧಾನಕರ ಆದಾಯವಿರುವುದು.
ವೃಶ್ಚಿಕ
ಕೆಲವೊಂದು ನಿರ್ಧಾರಗಳನ್ನು ಗೌಪ್ಯವಾಗಿದುವುದು ಉತ್ತಮ. ಈ ದಿನ ಪ್ರಾಪಂಚಿಕ ವಿಚಾರವನ್ನು ಬಿಟ್ಟು ಆಧ್ಯಾತ್ಮಿಕ ವಿಚಾರಗಳ ಕಡೆಗೆ ಗಮನ ಹರಿಯಲಿದೆ. ಶುಭ ಕಾರ್ಯ ನಡೆಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವಿರಿ.
ಧನು
ನಿರಂತರವಾದ ಕೆಲಸ ಕಾರ್ಯಗಳಿಂದ ಹೊರ ಬರಲು, ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಹೆಸರಿಗೆ ಕೇಡು ಬಯಸುವವರು ಎದುರಾಗುವವರು. ವ್ಯವಹಾರಿಕ ಒಪ್ಪಂದವೊಂದು ಮುರಿದು ಬೀಳದಂತೆ ಎಚ್ಚರವಹಿಸಿ
ಮಕರ
ನಿಮ್ಮ ಮನೋಭಾವವು ವ್ಯಾಪಾರ ವ್ಯವಹಾರವನ್ನು ಜೊತೆಯಲ್ಲಿ ಸಂಬಂಧವನ್ನು ಹಾಳುಮಾಡಲಿದೆ. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲ ಅಥವಾ ಆಶ್ರಯ ಸಿಗುವುದು.
ಕುಂಭ
ಸ್ವಂತ ಪ್ರಯತ್ನದಿಂದ ನೆನೆಗುದಿಯಲ್ಲಿದ್ದ ಸಮಸ್ಯೆಗಳಿಗೆ ಪರಿಹಾರ ದೊರೆತು ಮನಸ್ಸಿಗೆ ಸಂತಸವಾಗುತ್ತದೆ. ಅವಿವಾಹಿತ ಹೆಣ್ಣು ಮಕ್ಕಳಿಗೆ ಅನಿರೀಕ್ಷೀತವಾಗಿ ಪರಿಚಯದವರಿಂದ ಕಂಕಣಬಲ ಕೂಡಿಬರುವುದು.
ಮೀನ
ಕೆಲವೊಂದು ಕೋರ್ಟ್‌ನ ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರುವುದರಿಂದ ನಿರಾಳವಾಗಿ ಮುಂದುವರಿಯಿರಿ. ಸ್ವಂತವಾಗಿ ಆಸ್ತಿಯನ್ನು ಸಂಪಾದಿಸಬಹುದು. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ.