ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು
Published 14 ಫೆಬ್ರುವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಾನೂನು ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಪ್ರಗತಿ ಹೊಂದುವರು. ಹಣಕಾಸಿನ ವಿಚಾರದಲ್ಲಿ ವ್ಯತ್ಯಾಸಗಳಾಗಿ ಉದ್ಯೋಗದಲ್ಲಿ ಛೀಮಾರಿಯ ಪ್ರಸಂಗ ಇದ್ದೀತು. ಸುಬ್ರಹ್ಮಣ್ಯನನ್ನು ಪೂಜಿಸಿ.
ವೃಷಭ
ಉದ್ಯೋಗ ಸಿಗುವ ಸಮಯದಲ್ಲೇ ವೇತನದ ಬಗ್ಗೆ ಹೆಚ್ಚಿನ ಗಮನ ನೀಡುವುದು ಸರಿಯಲ್ಲ. ಋಣಬಾಧೆಯಿಂದ ಮುಕ್ತರಾಗಲು ಇರುವ ಮಾರ್ಗದ ಬಗ್ಗೆ ಗಮನನೀಡಿ. ಅನಿರೀಕ್ಷಿತ ಧನಲಾಭ ಉಂಟಾಗುವುದು.
ಮಿಥುನ
ಧನಾಗಮನಕ್ಕೆ ಹಲವು ರೀತಿಯ ಅವಕಾಶಗಳು ಇದ್ದರೂ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಕೂಡ ಅಗತ್ಯವಿರುತ್ತದೆ. ನೌಕರ ವರ್ಗದವರ ಕಠಿಣ ದುಡಿಮೆಗೆ ಸೂಕ್ತ ಪ್ರತಿಫಲ ದೊರೆಯುವುದು.
ಕರ್ಕಾಟಕ
ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು. ಪ್ರಮುಖ ಸ್ಥಾನ ಪಡೆಯಲು ಹೆಚ್ಚಿನ ತಯಾರಿ ನಡೆಸುವಿರಿ. ಸಂಜೆಯ ಸಮಯದಲ್ಲಿ ಬೆಲೆ ಬಾಳುವ ವಸ್ತು ಕಾಣೆಯಾಗುವ ಸಂಭವವಿದೆ. ಜಾಗ್ರತೆ ವಹಿಸಿ.
ಸಿಂಹ
ಹಲವು ಬಗೆಯ ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಜಮೀನು ಅಥವಾ ನಿವೇಶನ ಖರೀದಿಸುವ ಯೋಜನೆ ಹಾಕಿಕೊಳ್ಳುವಿರಿ. ತಂದೆಯಾಗಲಿರುವ ಸುದ್ದಿ ಕೇಳಿ ಸಂಭ್ರಮಿಸುವಿರಿ.
ಕನ್ಯಾ
ಹೊರ ದೇಶದಲ್ಲಿರುವ ಮಕ್ಕಳು ಮನೆಗೆ ಬರುವಂಥ ಸಂತಸದ ಸುದ್ದಿ ಕೇಳಿ ಬರುತ್ತದೆ. ಆತ್ಮಸ್ಥೈರ್ಯ ಹೆಚ್ಚಾಗಿ ಕೆಲಸ ಹುರುಪಿನಿಂದ ಸಾಗುವುದು. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು.
ತುಲಾ
ದಾಖಲೆಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಬೇಗ ಮುಗಿಸಿಕೊಳ್ಳುವುದು ಸೂಕ್ತ. ನಿಮಗೆ ಸಂಬಂಧವಿಲ್ಲದ ವಿಚಾರಗಳಿಂದ, ವಿವಾದಗಳಿಂದ ದೂರ ಉಳಿಯುವುದು ಶೋಭೆ ತರಲಿದೆ.
ವೃಶ್ಚಿಕ
ಆದಾಯ ವೃದ್ಧಿಯೂ ವ್ಯಯಾಧಿಕ್ಯವೂ ಸಮತೋಲನವನ್ನು ಸಾಧಿಸುವುದು. ದೇಹದಲ್ಲಿ ಉಷ್ಣಾಂಶ ಅಧಿಕವಾಗುವುದರಿಂದ ಸಣ್ಣ-ಪುಟ್ಟ ಅನಾರೋಗ್ಯ ಎದುರಾಗಬಹುದು. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ.
ಧನು
ಅನಾರೋಗ್ಯದ ಕಾರಣದಿಂದ ಹಣಕಾಸಿನ ಅನಿವಾರ್ಯತೆಯನ್ನು ಎದುರಿಸಬೇಕಾಗಲಿದೆ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು. ಜಮೀನಿನ ಕೆಲಸಗಳು ಯಾವುದೇ ತೊಂದರೆ ಇಲ್ಲದೆ ನೆರವೇರಲಿವೆ.
ಮಕರ
ಕೆಲಸದ ಹೊರತಾಗಿ ಕೆಲ ಸಮಯ ಇತರೆ ಸಂಗತಿಗಳ ಬಗ್ಗೆ ಗಮನ ಕೊಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ದೇವತಾ ಕಾರ್ಯಗಳನ್ನು ನಡೆಸುವುರಿಂದ ಶುಭವಾಗಲಿದೆ.
ಕುಂಭ
ಮುಂಬಡ್ತಿಯ ವಿಚಾರವಾಗಿ ಹೋರಾಟ ನಡೆಸುವುದು ವ್ಯರ್ಥವಾಗುವುದು. ಸಂದರ್ಭಕ್ಕೆ ಅನುಗುಣವಾಗಿ ವರ್ತಿ ಸುವ ಕಲೆಯನ್ನು ಕಲಿಯಬೇಕಾಗುವುದು. ಜವಳಿ ವ್ಯಾಪಾರಿಗಳಿಗೆ ವ್ಯಾಪಾರವಿರುವುದು.
ಮೀನ
ಕಾರ್ಯಕ್ಷೇತ್ರದಲ್ಲಿ ಶತ್ರುಗಳು ಹಿನ್ನಡೆ ಅನುಭವಿಸಿ ಮನಸ್ಸಿಗೆ ಸಮಾ ಧಾನ ದೊರಕಲಿದೆ. ಸಹಾಯಕರಲ್ಲಿ ಕೆಲಸ ಮಾಡಿಸಿಕೊಳ್ಳುವ ಬದಲು ಸ್ವಂತವಾಗಿ ಕೆಲಸ ಮಾಡುವುದು ಉತ್ತಮವೆಂದು ಅನಿಸಲಿದೆ.