ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಮಸ್ಯೆಯ ಸರಪಳಿಯಿಂದ ಹೊರಬರಲು ಕಷ್ಟವಾಗಲಿದೆ
Published 15 ಫೆಬ್ರುವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ಸ್ವಂತ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿದೆ. ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಹೆಚ್ಚಿನ ಅಧಿಕಾರವನ್ನು ಪಡೆದುಕೊಳ್ಳುವಿರಿ. ಶುಭಕ್ಕಾಗಿ ಗಣಪತಿಯನ್ನು ಆರಾಧಿಸಿ.
ವೃಷಭ
ಆಡಿದ ಮಾತುಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಸೋಲ ಬೇಕಾಗುತ್ತದೆ. ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ದಾಂಪತ್ಯ ಜೀವನ ಸುಖಮಯವಾಗಿರುವುದು.
ಮಿಥುನ
ನಿಮ್ಮಲ್ಲಿ ಸಹಾಯ ಸಿಗುವುದೆಂಬ ನಂಬಿಕೆಯಲ್ಲಿ ಈ ದಿನ ಮನೆಯವರು ತಮ್ಮ ಅಂತರಂಗದ ಮಾತುಗಳನ್ನು ಬಿಚ್ಚಿಡಲಿದ್ದಾರೆ. ಆರೋಗ್ಯದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಕಿರಿಕಿರಿ ಎನಿಸಲಿದೆ.
ಕರ್ಕಾಟಕ
ಸಲಹೆ ಸೂಚನೆಗಳನ್ನು ನಿಮ್ಮ ಮೇಲಧಿಕಾರಿಗಳು ಮಾನ್ಯ ಮಾಡಿದ್ದಕ್ಕೆ ಸಂತೋಷವಾಗಲಿದೆ. ಯೋಜನೆಗಳು ಕಾರ್ಯಗತಗೊಳ್ಳವುದರ ಬಗ್ಗೆ ಶನೈಶ್ಚರನಲ್ಲಿ ಪೂಜೆ ಪ್ರಾರ್ಥನೆ ನಡೆಸುವುದು ಉತ್ತಮ.
ಸಿಂಹ
ಶ್ರಮದ ದುಡಿಮೆ ನಿಮ್ಮ ಮುಖ್ಯ ಧ್ಯೇಯವಾಗಿರಲಿ, ಅದರಿಂದ ಶತ್ರುಗಳು ಮಿತ್ರರಾಗುವರು. ಬಾಳೆ ಮತ್ತು ಕಾಫಿ ಬೆಳೆಗಾರರಿಗೆ ಉತ್ತಮ ಆದಾಯ ಲಭಿಸುವುದು. ಕೌಟುಂಬಿಕ ಸವಾಲುಗಳನ್ನು ಎದುರಿಸಬೇಕಾಗಲಿದೆ.
ಕನ್ಯಾ
ವೃತ್ತಿ ಅಥವಾ ಕೆಲಸಗಳಲ್ಲಿ ಬದಲಾವಣೆ ಸನ್ನಿಹಿತವಾಗಲಿದೆ. ಸಹವರ್ತಿಗಳು ಬೆಂಬಲಕ್ಕೆ ಬರುವರು. ಉದ್ಯೋಗದಲ್ಲಿ ಅನಿಶ್ಚಿತತೆ ದೂರಾಗುವುದು. ಮಹಾಲಕ್ಷ್ಮಿಯ ಅನುಗ್ರಹದಿಂದ ಸಂಪಾದನೆ ಅಧಿಕವಾಗಿರುವುದು.
ತುಲಾ
ಸರ್ಕಾರಿ ನೌಕರಿಯಲ್ಲಿರುವವರಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಂಭವವಿದೆ. ಅವಿವಾಹಿತರು ಬಾಳ ಸಂಗಾತಿಯನ್ನು ಪಡೆಯುವಂತಾಗಲಿದೆ. ಒಳ್ಳೆಯ ಪಾಲುದಾರರೊಬ್ಬರು ದೊರೆಯಲಿದ್ದಾರೆ.
ವೃಶ್ಚಿಕ
ಅಧಿಕವಾದ ಆತ್ಮ ವಿಶ್ವಾಸದಿಂದ ಸಾಮರ್ಥ್ಯಕ್ಕಿಂತ ದೊಡ್ಡ ಕೆಲಸವನ್ನು ಮಾಡಲು ಹೋಗುವುದು ಸರಿಯಲ್ಲ. ಲೆಕ್ಕಾಚಾರದ ಕಾಗದ-ಪತ್ರಗಳ ನಿರ್ವಹಣೆಯಲ್ಲಿ ಎಚ್ಚರಿಕೆ ಇರಲಿ. ನೆಮ್ಮದಿಯ ವಾತಾವರಣ ಅನುಭವಿಸುವಿರಿ.
ಧನು
ಗೃಹದಲ್ಲಿ ಶುಭ, ಮಂಗಳ ಕಾರ್ಯಗಳ ಚಟುವಟಿಕೆಗಳು ತೋರಿ ಬರುವವು. ಸಹೋದರನ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಮಕರ
ಗುರಿ ಸಾಧಿಸಬೇಕು ಅಥವಾ ಗೆಲುವು ಬೇಕೆಂಬ ಛಲವನ್ನು ಇಟ್ಟುಕೊಳ್ಳುವುದು ಉತ್ತಮವೇ ಹೊರತು, ಹೋಲಿಕೆಯನ್ನು ಮನಸ್ಸಿಗೆ ಹಚ್ಚಿಕೊಳ್ಳುವುದು ಸರಿಯಲ್ಲ. ಸಮಸ್ಯೆಯ ಸರಪಳಿಯಿಂದ ಹೊರಬರಲು ಕಷ್ಟವಾಗಲಿದೆ.
ಕುಂಭ
ಕೆಲಸ ಕಾರ್ಯಗಳು ನಿರೀಕ್ಷಿತ ಹಾದಿಯಲ್ಲಿ ಸಾಗುವುದರಿಂದ ನಿಮ್ಮಲ್ಲಿ ನೈತಿಕ ಧೈರ್ಯ ಹೆಚ್ಚುತ್ತದೆ. ಉದ್ಯೋಗಿಗಳಿಗೆ ವೃತ್ತಿಯು ತಾತ್ಕಾಲಿಕ ಸಮಾಧಾನವನ್ನುತಂದರೂ ಬದಲಾವಣೆಗೆ ಅವಕಾಶ ಇರುತ್ತದೆ.
ಮೀನ
ವ್ಯವಹಾರದಲ್ಲಿ ಉಂಟಾಗಿರುವ ಸಮಸ್ಯೆಗೆ ಸ್ನೇಹಿತರಿಂದ ಸೂಕ್ತ ಸಲಹೆ ಬರುವುದು. ಗೃಹಕ್ಕೆ ಅನಿರೀಕ್ಷಿತವಾಗಿ ಅಪರೂಪದ ವ್ಯಕ್ತಿಯ ಆಗಮನ ಆಗಬಹುದು. ಕಾಗದ ಕಾರ್ಖಾನೆಯವರಿಗೆ ಆಕಸ್ಮಿಕ ಲಾಭವಾಗಲಿದೆ.