ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಚರ್ಮದ ಮೇಲೆ ಕಾಳಜಿವಹಿಸಿ
Published 30 ಏಪ್ರಿಲ್ 2024, 1:07 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಅನಿವಾರ್ಯವಾಗಿ ಗೈರಾಗುವ ಸಂದರ್ಭ ಬರಲಿದೆ. ಉತ್ತಮ ವ್ಯಕ್ತಿಗಳ ಜತೆ ವಿಷಯ ವಿನಿಮಯವು ಮನಸ್ಸನ್ನು ಪ್ರಫುಲ್ಲವಾಗಿರಿಸುತ್ತದೆ.
ವೃಷಭ
ಕುಟುಂಬದಲ್ಲಿನ ನೂತನ ಶಿಶುವಿನ ಜನನ ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ. ಊಟದ ಸಮಯದಲ್ಲಿ ಯಾರೊಂದಿಗೂ ಮಾತು ಬೆಳೆಸಬೇಡಿ. ಇಷ್ಟವಾಗುವ ಭೋಜನವನ್ನು ಮಾಡುವಿರಿ.
ಮಿಥುನ
ಚರ್ಮ ಸಂಬಂಧಿ ಕಾಯಿಲೆಗಳನ್ನು ಪರಿಹರಿಸಿಕೊಳ್ಳಲು ಔಷಧಿಗಳ ಪ್ರಯೋಗ ಬೇಡ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳು ದೊರೆಯಲಿವೆ.
ಕರ್ಕಾಟಕ
ವಿದ್ಯಾರ್ಥಿಗಳು ಹೊಸ ವಿದ್ಯಾಲಯಕ್ಕೆ ಸೇರಿರುವವರಾದರೆ ಹೊಸ ಸ್ನೇಹಿತರಿಂದ ಅಸಮಾಧಾನಕರ ಘಟನೆಗಳನ್ನು ಎದುರಿಸಬೇಕಾಗಬಹುದು. ಹಣ್ಣು ಮಾರಾಟಗಾರರಿಗೆ ಉತ್ತಮ ವ್ಯಾಪಾರ.
ಸಿಂಹ
ಒತ್ತಡಗಳ ನಡುವೆಯು ಬಂಧು ಮಿತ್ರರಿಗಾಗಿ ಸಮಯವನ್ನು ಕೊಡಲೇಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮದುವೆ ಸಮಾರಂಭಕ್ಕೆ ಸಿಗುವ ಶುಭ ಚಾಲನೆ ಶುಭ ಸಂಕೇತಗಳನ್ನೆ ಪ್ರತಿಫಲಿಸಲಿವೆ.
ಕನ್ಯಾ
ಜಗದ್ಗುರುಗಳನ್ನು ದರ್ಶನ ಮಾಡುವ ಭಾಗ್ಯವಿದೆ. ಅವರ ಬಳಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು. ಕಲಿಕಾ ಸಾಮರ್ಥ್ಯ ಬೇರೆಯವರ ಈರ್ಷ್ಯೆಗೆ ಕಾರಣವಾಗಬಹುದು. ಕೆಲಸಕ್ಕೆ ಮನ್ನಣೆ ದೊರೆಯುತ್ತದೆ.
ತುಲಾ
ಸ್ವಾಗತಕಾರರಿಗೆ ಇಂದು ನೀವು ಮಾಡುವ ಅತಿಥಿ ಸತ್ಕಾರದ ಮೇಲೆ ಮುಂದಿನ ಆಗುಹೋಗುಗಳು ನಿಂತಿವೆ. ಹೊಸ ವಾತಾವರಣಕ್ಕೆ ಬಂದವರಿಗೆ ಹೊಂದಾಣಿಕೆ ಆದ ಬಗ್ಗೆ ಸಂತೋಷವಾಗಲಿದೆ.
ವೃಶ್ಚಿಕ
ಮಾಡುವ ಕೆಲಸದ ಫಲಿತಾಂಶವು ಸರಿಯಾಗಿದ್ದರೂ ವಿಧಾನವನ್ನು ಬದಲಿಕೊಳ್ಳಬೇಕೆಂಬ ಸಲಹೆಗಳನ್ನು ಪಡೆಯಲಿದ್ದೀರಿ. ಇಷ್ಟ ಮಿತ್ರರ ಅಥವಾ ಬಂಧುಗಳ ಭೇಟಿಯಿಂದ ಉಲ್ಲಾಸ ಉಂಟಾಗುತ್ತದೆ.
ಧನು
ಹೊಸ ದಂಪತಿಗಳು ದೇವರ ದರ್ಶನಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಶಿಕ್ಷಕರು ಎಷ್ಟೇ ಪೂರ್ವತಯಾರಿಯನ್ನು ಮಾಡಿಕೊಂಡಿದ್ದರೂ ವಿಷಯಗಳು ನೆನಪಿಗೆ ಬಾರದೆ ಇರಬಹುದು.
ಮಕರ
ಸಾಹಸವನ್ನು ಮಾಡಿ ಪಡೆದ ವಸ್ತುವನ್ನು ಅಥವಾ ಹಣವನ್ನು ಸಾಹಸ ಮಾಡಿಯೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇತರರಿಗೆ ಸಲಹೆ ಕೊಡುವಾಗ ಸೂಕ್ಷ್ಮಮತಿ ಇರಲಿ.
ಕುಂಭ
ಉತ್ತರ ಸಿಗದ ನಿಮ್ಮ ಹಲವಾರು ಪ್ರಶ್ನೆಗಳಿಗೆ ಇಂದು ಸದ್ಪುರುಷನ ಜತೆಯ ಸಂಭಾಷಣೆಯಿಂದ ಉತ್ತರ ದೊರೆಯಲಿದೆ. ತಾಯಿಗೆ ಕಣ್ಣಿನ ದೃಷ್ಟಿಯ ದೋಷ ಕಾಣಿಸಿಕೊಂಡಲ್ಲಿ ವೈದ್ಯರನ್ನು ಭೇಟಿ ಮಾಡಿ.
ಮೀನ
ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಕವಿತೆ–ಕಥೆಗಳನ್ನು ಬರೆಯುವ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯಲಿದೆ. ಚರ್ಮದ ಮೇಲೆ ಕಾಳಜಿ ಇರಲಿ.