ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ವಿದ್ಯಾರ್ಥಿಗಳಿಗೆ ಅತ್ಯಂತ ದೇಹಾಲಸ್ಯ ಕಾಡಲಿದೆ
Published 5 ಮೇ 2024, 0:04 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಬ್ಬು ಬೆಳೆಯುವುದರ ಜೊತೆಗೆ ವ್ಯಾಪಾರವನ್ನು ಹೊಂದಿರುವಂಥವ ರಿಗೆ ಲಾಭದ ದಿನವಾಗಲಿದೆ. ನೀವು ಯಾರಿಗೂ ತಿಳಿಯದೆ ಮಾಡಿದೆ ಎಂದು ತಿಳಿದ ಕಾರ್ಯವು ಜಗಜ್ಜಾಹೀರಾಗುವ ಪ್ರಸಂಗಗಳು ಎದುರಾಗಬಹುದು.
ವೃಷಭ
ಯಾವುದೋ ಕಾರಣದಿಂದ ನೀವು ಮಾಡಿದ ಶೋಧಕಾರ್ಯದಿಂದ ನಿಮ್ಮ ಮನೆಯ ಇತಿಹಾಸ ದೊರೆಯಬಹುದು ಹಾಗೂ ಅದನ್ನು ಕಂಡ ನಿಮಗೆ ಹೆಮ್ಮೆಯಾಗಬಹುದು. ರತ್ನ ವ್ಯಾಪಾರಿಗಳಿಗೆ ಉತ್ತಮ ಲಾಭ.
ಮಿಥುನ
ಎಲ್ಲರ ಆಸ್ತಿ ಹಂಚಿಕೆಯಾದ ಮೇಲೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ನಿಮಗೂ ಶೇಷವಾಗಿ ಸ್ವಲ್ಪ ಭಾಗ ಮಾನವೀಯತೆ ದೃಷ್ಟಿಯಲ್ಲಿ ಸಿಗಲಿದೆ. ನಿಮ್ಮ ಕಾರ್ಯಗಳು ಆದಷ್ಟು ಶೀಘ್ರವಾಗಿ ಸಿದ್ಧಿಸಲು ಅಶ್ವತ್ಥವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ.
ಕರ್ಕಾಟಕ
ಮಕ್ಕಳ ತುಂಟುತನ ತಡೆಯಲಾಗದೆ ಅವರ ಸಂತೋಷಕ್ಕಾಗಿ ಕುಟುಂಬ ಸಮೇತ ಸಣ್ಣದಾದ ಪ್ರವಾಸಕ್ಕೆ ತೆರಳಬಹುದು. ತಾಯಿಯೊಂದಿಗೆ ಸಮಾಧಾನಕರ ಸಮಯ ಕಳೆಯುವಿರಿ. ಮಧುರ ಖಾದ್ಯಗಳನ್ನು ಸವಿಯುವಿರಿ.
ಸಿಂಹ
ಇಂದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅತ್ಯಂತ ದೇಹಾಲಸ್ಯ ಕಾಡಲಿದೆ. ಆಲಸಿಯಾಗದಿರಿ. ನಿಮ್ಮ ಕೆಲವು ಶೋಕಿ ಎನ್ನಿಸುವ ಅಭ್ಯಾಸಗಳು ಇತರಿಗೆ ಅಡ್ಡಿಯಾಗುವಂತಿದ್ದಲ್ಲಿ ಆ ಅಭ್ಯಾಸವನ್ನು ಕೈಬಿಡುವ ಕಾರ್ಯವನ್ನು ಮಾಡಿ.
ಕನ್ಯಾ
ಸಸ್ಯಶಾಸ್ತ್ರಜ್ಞರಿಗೆ ನಿಮ್ಮ ದೇಹಕ್ಕೆ ಅಲರ್ಜಿಕಾರಕ ಸಸ್ಯಗಳೊಂದಿಗೆ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ಇಬ್ಬಂದಿಗೆ ಸಿಲುಕಿಸುತ್ತದೆ. ಹಾಲು ಮಾರಟಗಾರರಿಗೆ ಗುಣಮಟ್ಟದ ಹಾಲಿಗೆ ಮನ್ನಣೆ ದೊರೆಯುತ್ತದೆ.
ತುಲಾ
ಮೊಂಡು ಹಟ ನಿಮ್ಮ ಪೋಷಕರ ಹಾಗೂ ಕುಟುಂಬ ವರ್ಗದ ಚಿಂತೆಗೆ ಕಾರಣವಾಗಬಹುದು. ಅವರೋಹಣ ಪ್ರಕ್ರಿಯೆಯಲ್ಲಿರುವ ನಿಮ್ಮ ಷೇರು ವ್ಯವಹಾರಗಳು ನಿಧಾನಗತಿಯಲ್ಲಿ ಆರೋಹಣ ಪ್ರಕ್ರಿಯೆಗೆ ಬರುತ್ತದೆ.
ವೃಶ್ಚಿಕ
ಉದ್ಯೋಗ ಕ್ಷೇತ್ರದಲ್ಲಿ ಪರಿಚಯವಾಗಿ ನಿಮ್ಮ ಮನೆ ಕುಟುಂಬದವ ರಂತೆ ಆಗಿ ಹೋದ ವ್ಯಕ್ತಿಗಳೊಂದಿಗೆ ಕಳೆದ ಸಮಯ ಮನಸ್ಸಿಗೆ ಸಂತೋಷ ನೀಡುವುದು. ರುದ್ರಾರಾಧನೆಯು ಶುಭ ಫಲಗಳನ್ನು ನೀಡುವುದು.
ಧನು
ಅರ್ಹತೆಗೆ ತಕ್ಕಂಥ ಕೆಲಸವಿಲ್ಲವೆಂದು ಕೊರಗುತ್ತಿರುವವರು ತಮಗೆ ಬೇಕಾದಂತಹ ಉದ್ಯೋಗಾವಕಾಶವನ್ನು ಹುಡುಕುವರು. ಪ್ರಕೃತಿಯ ವಿಸ್ಮಯವಾದ ರೂಪುರೇಷೆಗಳಿಗೆ ಇಂದು ನೀವು ಮಾರುಹೋಗುವಿರಿ.
ಮಕರ
ಮಗಳ ವಿಚಾರವಾಗಿ ನೀವು ಮಾಡಿದ ಪರೀಕ್ಷೆಯಲ್ಲಿ ಆಕೆ ಉತ್ತಮವಾದ ವರ್ತನೆಯನ್ನು ತೋರಿ ನಿಮ್ಮನ್ನು ಸಮಾಧಾನಗೊಳಿಸುತ್ತಾಳೆ. ನಿಮ್ಮ ಸಹೋದ್ಯೋಗಿಗಳ ಅಭಿವೃದ್ಧಿಯನ್ನು ಕಂಡು ಅಸೂಯೆ ಪಡದಿರಿ.
ಕುಂಭ
ಉನ್ನತ ಸ್ಥಾನಕ್ಕೆ ತಲುಪಿರುವ ನಿಮ್ಮ ಮಕ್ಕಳು ನಿಮ್ಮ ಆಗುಹೋಗುಗಳಿಗೆ ಎಳ್ಳಿನಿತೂ ಗಮನ ಕೊಡದಿರುವುದು ನಿಮ್ಮ ಬೇಸರಕ್ಕೆ ಕಾರಣವಾಗಬಹುದು. ಮನೆ ಯುದ್ಧರಂಗವಾಗದಂತೆ ನೀವೇ ತಡೆಗಟ್ಟಬೇಕಾಗುತ್ತದೆ.
ಮೀನ
ಬಲಶಾಲಿಯಾದ ವಿರೋಧಿಗಳನ್ನು ಮಣಿಸಲು ಅವರ ಅನ್ಯಾಯ ಬೆಳಕಿಗೆ ತರಲು ನೀವು ಮಾಡಿದ ಪ್ರಯತ್ನ ಉತ್ತಮ ಫಲ ನೀಡಲಿವೆ. ನಿಮ್ಮ ಸಾಮರ್ಥ್ಯಕ್ಕಿಂತ ಕೆಲಸ ಕಳಪೆಯಾಗಲಿದ್ದು, ನಿಮಗೆ ಬೇಸರವೆನಿಸಬಹುದು.