ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಬಹುದು
Published 4 ಮಾರ್ಚ್ 2024, 23:50 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅತಿಯಾದ ಮಾತುಗಳಿಂದ ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ಕುಟುಂಬ ವರ್ಗದಲ್ಲಿ ಭಿನ್ನಾಭಿಪ್ರಾಯ ಕಂಡುಬರಬಹುದು. ದೇವತಾನುಗ್ರಹವನ್ನು ಸಂಪಾದಿಸಬೇಕು.
ವೃಷಭ
ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ. ಸಮಾಜ ಸೇವೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ನೀರಿನ ವ್ಯತ್ಯಾಸಗಳಾಗಿ ಅನಾರೋಗ್ಯ ಸಂಭವಿಸಬಹುದು.
ಮಿಥುನ
ವಿದ್ಯಾರ್ಥಿಗೆ ಶಿಕ್ಷಣ ಮುಂದುವರಿಸಲು ಸರ್ಕಾರದಿಂದ ಅಥವಾ ಬಂಧುಗಳಿಂದ ಸಹಾಯ ದೊರಕುವುದು. ಸಾಮಾಜಿಕ ಕಾರ್ಯಕ್ರಮಗಳಿಂದ ಖ್ಯಾತಿ ಪಡೆಯಲಿದ್ದೀರಿ. ಕುತೂಹಲಕಾರಿ ವಿಷಯ ತಿಳಿದು ಅಚ್ಚರಿಯಾಗುವಿರಿ.
ಕರ್ಕಾಟಕ
ಮನೆ ಮತ್ತು ಕೆಲಸದ ನಡುವೆ ಸಮನ್ವಯತೆ ಕಾಪಾಡಿಕೊಳ್ಳಲು ಕಷ್ಟವೆನಿಸಬಹುದು. ಪತ್ನಿ ವರ್ಗದವರ ಆಗಮನದಿಂದ ಸಂತಸದ ವಾತಾವರಣವಿರುವುದು. ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನವೆನಿಸಲಿದೆ.
ಸಿಂಹ
ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಿ ಮನೆಯಲ್ಲಿ ಅಶಾಂತಿಯ ವಾತಾವರಣ ತೋರಿಬರಲಿದೆ. ಅಧಿಕಾರಿಗಳ ಮೇಲೆ ಗೌರವಾನ್ವಿತ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದೀರಿ.
ಕನ್ಯಾ
ಹಿತಶತ್ರುಗಳ, ಪ್ರತಿಸ್ಪರ್ಧಿಗಳ ವಿದ್ರೋಹ ಅನುಭವಕ್ಕೆ ಬಂದೀತು. ಮಾತಿನ ಚತುರತೆಯಿಂದ ನೀವಾಡುವ ಮಾತಿಗೆ ಮರುಳಾಗುವರು. ಕಲಾವಿದರಿಗೆ ಇಂದು ಅತ್ಯುತ್ತಮ ದಿನವಾಗಿರುವುದು.
ತುಲಾ
ವ್ಯಕ್ತಿ ಗೌರವ ಕಾಪಾಡಿಕೊಳ್ಳಲು ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಬರಲಿದೆ. ಮನೋಭಿಲಾಷೆಗಳು ಈಡೇರಿ ಮನಸ್ಸಿಗೆ ಸಂತೋಷವಾಗುವುದು.
ವೃಶ್ಚಿಕ
ಜೀವನ ಶೈಲಿಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಸಮಯ. ಆಭರಣ ಅಥವಾ ಕಲಾವಸ್ತುಗಳನ್ನು ಖರೀದಿಸುವ ಮನಸ್ಸಾಗುವುದು. ಈ ದಿನ ಕೃಷಿಕರಿಗೆ ವರಮಾನ ಹೆಚ್ಚಲಿದೆ.
ಧನು
ಚರ್ಮಸಂಬಂಧ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋಗುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಉತ್ತರ ದೊರಕಲಿದೆ. ಲೇವಾದೇವಿ ವ್ಯವಹಾರದಿಂದ ಸಮಸ್ಯೆ ಉದ್ಭವಿಸಬಹುದು.
ಮಕರ
ಹೊಸದನ್ನು ಕಲಿಯುವ ಉತ್ಸಾಹ ನಿಮ್ಮಲ್ಲಿದೆ. ಅದರ ಜೊತೆಗೆ ಬದುಕಿನ ಅನುಭವಗಳು ನಿಮ್ಮನ್ನು ಯಶಸ್ಸಿನತ್ತ ಕರೆದೊಯ್ಯಬಹುದು. ಸಹನೆಯನ್ನು ಪರೀಕ್ಷಿಸುವ ಸಂದರ್ಭ ಎದುರಾಗಬಹುದು.
ಕುಂಭ
ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಪೌಷ್ಟಿಕವಾದ ಆಹಾರ ಸೇವನೆ ಮತ್ತು ಕೆಲಸದ ತೀವ್ರತೆಯ ಸಡಿಲಿಕೆಯಂಥ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಡುವುದು ಒಳ್ಳೆಯದು.
ಮೀನ
ಸ್ವಾರ್ಥಕ್ಕಾಗಿ ಅಥವಾ ಇಷ್ಟಾರ್ಥದ ಈಡೇರಿಕೆಗಾಗಲಿ ಪರರಿಗೆ ಹಿಂಸೆಯನ್ನು ಮಾಡಬೇಡಿ. ಕಮಿಷನ್ ವ್ಯಾಪಾರದ ವೃತ್ತಿಯಲ್ಲಿರುವವರಿಗೆ ಈ ದಿನ ಲಾಭಾಂಶ ವೃದ್ಧಿಯಾಗುವುದು. ಆರೋಗ್ಯದ ಕಡೆ ಗಮನವಿರಲಿ.