ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯವಿದೆ
Published 1 ಏಪ್ರಿಲ್ 2024, 0:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಕಾಣಲಿದೆ. ಈ ದಿನ ಯಾವುದೇ ರೀತಿಯ ವ್ಯಾವಹಾರಿಕ ಜವಬ್ದಾರಿಯನ್ನು ವಹಿಸಿಕೊಳ್ಳಬೇಡಿ. ಕುತೂಹಲಕಾರಿ ವಿಷಯಗಳನ್ನು ತಿಳಿದು ಅಚ್ಚರಿಗೊಳ್ಳುವಿರಿ.
ವೃಷಭ
ನೀವು ಯೋಚಿಸುವ ಪ್ರತಿಯೊಂದು ಕೆಲಸ-ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆದರೂ ಮುಂದೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ವಾಹನ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ ಇರಲಿದೆ.
ಮಿಥುನ
ಮನೆಯಲ್ಲಿ ನಿಮಗೆ ಎದುರಾಗುವ ಅನಿವಾರ್ಯವಾದ ಹೊಂದಾಣಿಕೆಯನ್ನು ಸುಲಭವಾಗಿ ಮಾಡಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಈ ದಿನ ಸಾಮಾಜಿಕ ಬದುಕಿನಲ್ಲಿ ಒಂದು ಹೊಸ ತಿರುವು ಮೂಡುತ್ತದೆ.
ಕರ್ಕಾಟಕ
ಕೆಲವೊಂದು ಜವಬ್ದಾರಿಯುತವಾದ ಊರಿನ ಕಾರ್ಯಗಳು ನಿಮ್ಮ ಮುಂದಾಳತ್ವದಲ್ಲಿ ನಡೆಯಲಿದೆ. ಸೋದರ ಮಾವನ ಆರೋಗ್ಯ ಉತ್ತಮಗೊಳ್ಳುವುದು. ಸಂಗೀತಗಾರರಿಗೆ ಮತ್ತು ನರ್ತಕರಿಗೆ ಇಂದು ವಿಶೇಷ ದಿನ.
ಸಿಂಹ
ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ ಆದ್ದರಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳುವುದರಿಂದ ಕೆಲಸ ಕಾರ್ಯಗಳು ಯಾವುದೇ ಅಡೆಚಣೆಗಳಿಲ್ಲದೆ ಸಾಗುವವು.
ಕನ್ಯಾ
ನಿಮ್ಮ ಸ್ವಯಂ ಸಾಮರ್ಥ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿ. ಅದರಿಂದಾಗಿ ಮಾನಸಿಕ ವ್ಯಥೆಗಳು ನಿವಾರಣೆಯಾಗುತ್ತದೆ. ಸಮಾಜದಲ್ಲಿ ಮತ್ತು ವೈಯಕ್ತಿಕವಾಗಿ ನೀವು ಅಪೇಕ್ಷಿಸಿದ ಪ್ರಗತಿಯನ್ನು ಇಂದು ಸಾಧಿಸುವಿರಿ.
ತುಲಾ
ಸ್ವತಂತ್ರ ಮನೋಭಾವದಿಂದ ಹೊರಬಂದು ಆತ್ಮೀಯರ ಸಲಹೆಗಳಿಗೆ ಹೊಂದಿಕೊಳ್ಳುವಿರಿ. ಭೂಸಂಬಂಧ ವ್ಯವಹಾರದಲ್ಲಿ ಅಧಿಕ ಆದಾಯವು ಕಂಡುಬರುವುದು. ನವಗ್ರಹ ಪೂಜೆಯಿಂದ ಶುಭ ವಾರ್ತೆ ಪಡೆಯುವಿರಿ.
ವೃಶ್ಚಿಕ
ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಚಾಕಚಕ್ಯತೆಯನ್ನು ತೋರಿದರೆ ಯಶಸ್ಸು. ಸತತ ಪ್ರಯತ್ನದಿಂದ ಪರಸ್ಥಳದಲ್ಲಿ ವೃತ್ತಿಪರವಾಗಿ ಹೆಸರು, ಕೀರ್ತಿಯನ್ನು ಸಂಪಾದಿಸಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ.
ಧನು
ಓಂ ಗುರುಭ್ಯೋ ನಮಃ ಎಂದು ಹೇಳಿ ದಿನ ಪ್ರಾರಂಭಿಸಿದರೆ ಮನಸ್ಸಿಗೆ ನೆಮ್ಮದಿ ಜೊತೆಗೆ ಜಯಸಿಗುವುದು. ಹಣಕಾಸಿನ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರ ಕಾಣಲಿದೆ. ಯೋಗಾಭ್ಯಾಸದಿಂದ ಅರೋಗ್ಯವೃದ್ಧಿ.
ಮಕರ
ಶನಿಯು ತಿರುಗಾಟವನ್ನು ಮಾಡಿಸುವುದರಿಂದ ಆರೋಗ್ಯದ ಬಗ್ಗೆ ಗಮನಹರಿಸುವುದು ಅನಿವಾರ್ಯವಾಗುತ್ತದೆ. ನಿಮ್ಮ ಬುದ್ಧಿವಂತಿಕೆ ಹಾಗೂ ಯೋಜನೆಗಳು ನಿಮ್ಮ ಸಂವಹನವನ್ನು ಸುಲಭಗೊಳಿಸುತ್ತದೆ.
ಕುಂಭ
ಇಂದು ನೀವು ಮಾಡುವ ಯಾವುದೇ ಬದಲಾವಣೆಯಾದರೂ ಅವು ಧನಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ. ಏನಕ್ಕೂ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಿ. ಶ್ರೀ ವಿಷ್ಣುವಿನ ಸಹಸ್ರನಾಮವನ್ನು ಪಠಿಸಿರಿ.
ಮೀನ
ನ್ಯಾಯಾಲಯದ ಕೆಲಸದಲ್ಲಿ ಕೆಲವು ಅಡೆತಡೆಗಳು ಎದುರಾದರೂ ಸತ್ಯಕ್ಕೆ ಜಯವಿದೆ ಎನ್ನುವುದರಿಂದ ನೀವೇನೂ ಚಿಂತಿಸಬೇಕಾದ ಅಗತ್ಯವಿಲ್ಲ. ವಿದ್ಯಾರ್ಥಿಗಳ ಹತ್ತಾರು ದಿನಗಳ ಪರಿಶ್ರಮ ಸಾರ್ಥಕವಾಗಲಿದೆ.