ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ವ್ಯಾಪಾರದಲ್ಲಿ ಮೋಸ ಹೋಗುವ ಸಂಭವವಿದೆ
Published 23 ಮಾರ್ಚ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ದೇವರ ಅನುಗ್ರಹದಿಂದ ನೀವು ಬಹಳ ಹಳೆಯದಾದ ಹಾಗೂ ಕೌಟುಂಬಿಕವಾದ ಮುಖ್ಯ ಕೆಲಸವೊಂದನ್ನು ಪೂರ್ಣಗೊಳಿಸುವಿರಿ. ಪಿತ್ತ ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು.
ವೃಷಭ
ವೃಷಭ: ಹೊಸ ಹುದ್ದೆಯಲ್ಲಿ ಗೌರವ, ಸಂತೋಷ, ಹೊಸ ರೀತಿಯ ಅನುಭವ ಸಿಗಲಿದೆ. ಆಮದು ಆಹಾರ ಪದಾರ್ಥಗಳಿಂದ ಹಾಗೂ ಕಾಡು ಉತ್ಪನ್ನಗಳ ಮಾರಟದಿಂದ ಲಾಭ ಸಿಗಲಿದೆ. ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.
ಮಿಥುನ
ಮಿಥುನ: ದೈಹಿಕ ಕೆಲಸವನ್ನು ಮಾಡಿ ದುಡಿಮೆ ಮಾಡುತ್ತಿರುವವರು ದೇಹಕ್ಕೆ ಸ್ವಲ್ಪಮಟ್ಟಿನ ವಿಶ್ರಾಂತಿ ನೀಡಬೇಕಾಗುತ್ತದೆ. ಅತಿಯಾಗಿ ಪ್ರೀತಿಸುವ ಹಾಗೂ ಆದರಿಸುವ ಜನರೊಂದಿಗೆ ಕಾಲ ಕಳೆಯಲು ಈ ದಿನ ಸಕಾಲವಾಗಿದೆ.
ಕರ್ಕಾಟಕ
ಕರ್ಕಾಟಕ: ವಿಪರೀತ ಕೆಲಸಗಳಿಂದ ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ. ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಮನಸ್ಸಿದ್ದರೆ ಮಾರ್ಗ ಎಂಬ ಮಾತು ಇಂದು ನಿಮಗೆ ಅನ್ವಯಿಸುತ್ತದೆ.
ಸಿಂಹ
ಸಿಂಹ: ಹಲವು ದಿನಗಳಿಂದ ಅನುಭವಿಸುತ್ತಿರುವ ಅನಾರೋಗ್ಯ ಸಮಸ್ಯೆ ಉಪಶಮನವಾಗುವುದು. ಸಾಂಸಾರಿಕವಾಗಿ ಪತಿ ಪತ್ನಿಯ ಅನ್ಯೋನ್ಯತೆಯ ಕನಸು ನನಸಾಗಲಿದೆ. ಕಾಫೀ ಬೆಳೆಗಾರರಿಗೆ ಸಂತೋಷದ ವಾತಾವರಣ.
ಕನ್ಯಾ
ಕನ್ಯಾ: ಸಮಸ್ಯೆ ಬಗೆಹರಿಸಲು ಬೇಕಾದ ಜಾಣತನ ನಿಮ್ಮಲ್ಲಿರುವುದರ ಜತೆ ಸ್ನೇಹಿತರ ಸಹಾಯ ಸಿಗುವುದು. ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುವುದರಿಂದ ಶುಭವಾಗುವುದು. ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸುವವು.
ತುಲಾ
ತುಲಾ: ಸರಳ ಸ್ವಭಾವದ ನಿಮಗೆ ಸಂಬಂಧಿಕರಲ್ಲಿ ಗೌರವವು ಹೆಚ್ಚಾಗುವುದು. ಭವಿಷ್ಯದ ಕುರಿತು ಯೋಜನೆಗಳನ್ನು ರೂಪಿಸಲು ಇದು ಸುದಿನ. ಕೋರ್ಟು ಕಚೇರಿಗಳ ವ್ಯವಹಾರದಲ್ಲಿ ವಿಳಂಬವಾದರೂ ಯಶಸ್ಸು ನಿಮ್ಮದಾಗಲಿದೆ.
ವೃಶ್ಚಿಕ
ವೃಶ್ಚಿಕ: ಮನೆಯಲ್ಲಿ ನಡೆಯಬೇಕಿರುವ ಶುಭ ಕಾರ್ಯಕ್ಕೆ ಬಂಧುಗಳ ಆಗಮನ ಸಂತೋಷವುಂಟುಮಾಡಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಂಭವ. ಕೃಷಿಗೆ ಸಂಬಂಧಪಟ್ಟ ಕಾರ್ಯಗಳು ಬಿಡುವಿಲ್ಲದೆ ನಡೆಸುವುದು ಉತ್ತಮ.
ಧನು
ಧನು: ಹಣ ಉಳಿತಾಯದ ಮಾರ್ಗಗಳನ್ನು ಕಂಡುಕೊಳ್ಳುವಿರಿ, ಅದರಂತಯೇ ಉಳಿತಾಯವಾಗಲಿದೆ. ಚರ್ಮ ಸಂಬಂಧಿತ ಉದ್ಯಮದವರಿಗೆ ರಫ್ತು ವ್ಯಾಪಾರಗಳಿಂದ ಲಾಭ. ಶೀತ ಬಾಧೆಯಿಂದ ಮುಕ್ತರಾಗುವಿರಿ.
ಮಕರ
ಮಕರ: ಲೇಖಕರಿಗೆ ವಿಷಯ ಸಂಗ್ರಹಕ್ಕೆ ಬೇಕಾದ ವಾತಾವರಣ ಸಿಗುತ್ತದೆ ಮತ್ತು ಈ ದಿನ ಬರೆಯುವ ಲೇಖನಕ್ಕೆ ಸರಸ್ವತಿಯ ಅನುಗ್ರಹ ಇದ್ದಂತೆ ಅನುಭವವಾಲಿದೆ. ವ್ಯಾಪಾರದಲ್ಲಿ ಲಾಭ ನಷ್ಟದ ಮಿಶ್ರಫಲ ಕಾಣುವಿರಿ.
ಕುಂಭ
ಕುಂಭ: ಅವಶ್ಯಕವಾಗಿ ಬೇಕಾಗಿರುವ ಮತ್ತು ನಿಮ್ಮ ನೆಚ್ಚಿನ ಉದ್ಯೋಗ ದೊರಕಿಸಿಕೊಳ್ಳಲು ತೀವ್ರ ಪ್ರಯತ್ನವನ್ನು ನಡೆಸಬೇಕಾಗುತ್ತದೆ. ಬಹಳ ದಿನಗಳ ಬಳಿಕ ಬಂಧು-ಮಿತ್ರರ ಜೊತೆಗಿನ ಒಡನಾಟ ಸಂತೋಷ ತರಲಿದೆ.
ಮೀನ
ಮೀನ: ಕುಟುಂಬದ ಸದಸ್ಯರೊಂದಿಗೆ ಶುಭ ಕಾರ್ಯದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡುವಿರಿ. ವಿರೋಧದ ನಡುವೆಯೂ ಕಾರ್ಯ ಸಾಧನೆ ಮಾಡಿದ ಹೆಮ್ಮೆ ನಿಮಗಿರುವುದು. ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ.