ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರದಲ್ಲಿ ಹೆಚ್ಚಿನ ಕಮಿಷನ್ ಲಭ್ಯವಾಗುವುದು
Published 30 ಮೇ 2024, 23:40 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಸುಂದರವಾದ ದಿನದ ಉಪಸಂಹಾರಕ್ಕೆ ಬಂದಾಗ ಈ ದಿನ ಮರುಕಳಿಸುವುದಿಲ್ಲವೆಂಬ ತಿಳಿನೋವು ಉಂಟಾಗಬಹುದು. ಶುಭ್ರವರ್ಣದ ವಸ್ತ್ರಗಳನ್ನು ಧರಿಸಿ ಇಂದಿನ ಸಮಾರಂಭದಲ್ಲಿ ಭಾಗವಹಿಸಿದಲ್ಲಿ ನಿಮ್ಮ ಘನತೆ ಹೆಚ್ಚುವುದು.
ವೃಷಭ
ವೃಷಭ: ವ್ಯವಹರಿಸುವಾಗ ಎಲ್ಲಾ ವಿಚಾರದಲ್ಲೂ ಸಾವಧಾನವಾಗಿ ಮುಂದುವರಿಯುವುದು ಉತ್ತಮವಾಗಿರುತ್ತದೆ. ಒಮ್ಮೆಗೆ ಹೆಚ್ಚಿನ ಹಣವು ಕೈಸೇರಿತೆಂದು ದುಂದುವೆಚ್ಚ ಮಾಡದೆ ಹಣದ ಸದ್ವಿನಿಯೋಗ ಮಾಡಿ.
ಮಿಥುನ
ಮಿಥುನ: ಮಹಿಳೆಯರು ನಿಮ್ಮ ದೇಹದಲ್ಲಾಗುತ್ತಿರುವ ಅಸಮರ್ಪಕ ಬದಲಾವಣೆಗಳನ್ನು ಕಡೆಗಣಿಸದೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಲೇಸು. ಇಂದಿನ ಕೆಲವು ವಿದಾಯಗಳು ಬೇಸರದ ಸಂಗತಿಯಾಗಬಹುದು.
ಕರ್ಕಾಟಕ
ಕರ್ಕಾಟಕ: ಉದ್ಯೋಗದಲ್ಲಿ ಕಂಡು ಬಂದಂತಹ ತಾಂತ್ರಿಕ ಸಮಸ್ಯೆ ಸಂಜೆ ಹೊತ್ತಿಗೆ ನಿವಾರಣೆಯಾಗುವುದು. ಮೈಮುರಿದು ಕೆಲಸ ಮಾಡುವ ಬದ್ಧತೆಯನ್ನು ಯಾವುದೇ ಕಾರಣಕ್ಕು ನಿಲ್ಲಿಸಬೇಡಿ.
ಸಿಂಹ
ಸಿಂಹ: ವಿವಾಹ ವಿಚಾರದ ನಿರ್ಧಾರಗಳೆಲ್ಲವು ಅಡ್ಡಗೋಡೆಯ ಮೇಲಿನ ದೀಪದಂತೆ ಇರುವುದು ನಿಮಗೆ ಅಸಮಧಾನ ಉಂಟು ಮಾಡುತ್ತದೆ. ಈ ದಿನ ಸ್ನೇಹಿತರೊಂದಿಗೆ ಭೂಮಿ ಖರೀದಿಗಾಗಿ ಪ್ರಯತ್ನ ನಡೆಸುವಿರಿ.
ಕನ್ಯಾ
ಕನ್ಯಾ: ಸುಮುಹೂರ್ತದಲ್ಲಿ ನಡೆದ ಕಾರ್ಯಕ್ರಮವು ಉತ್ತಮ ಫಲ ನೀಡುವುದರಲ್ಲಿ ಸಂಶಯವಿಲ್ಲ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹ ಇರುವುದು. ಷೇರು ವ್ಯವಹಾರದಲ್ಲಿ ಹೆಚ್ಚಿನ ಕಮಿಷನ್ ಲಭ್ಯವಾಗುವುದು.
ತುಲಾ
ತುಲಾ: ನಿಮ್ಮ ವಸ್ತುಗಳಿಗಾಗಿ ಇತರರು ಆಸೆಪಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣಬಹುದು. ಮನೆಯ ಹಿರಿಯರೊಬ್ಬರ ಮಧ್ಯಸ್ಥಿಕೆ ಯಿಂದ ನೆಂಟಸ್ತಿಕೆಯಲ್ಲಿ ಸಂಬಂಧ ಕೂಡಿ ಬರುವುದು. ಪ್ರೀತಿಪಾತ್ರರನ್ನು ಭೇಟಿಯಾಗುವಿರಿ.
ವೃಶ್ಚಿಕ
ವೃಶ್ಚಿಕ: ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ವಿಚಲಿತರಾಗಬೇಕಾಗಿಲ್ಲ. ಸಮಸ್ಯೆ ಬಗೆಹರಿಸಲು ಜಾಣತನ, ಬುದ್ಧಿವಂತಿಕೆಯನ್ನು ಬಳಸಿಕೊಳ್ಳಿ.
ಧನು
ಧನು: ವೈಯಕ್ತಿಕ ತೃಪ್ತಿಯ ಹೊರತಾಗಿ ನೀವು ಸಮಾಜಮುಖಿ ಆಗಬೇಕಾಗುತ್ತದೆ. ಸಂಕೀರ್ಣ ಸಂದರ್ಭಗಳಲ್ಲಿ ವಿವಿಧ ವಿಷಯಗಳನ್ನು ಒಟ್ಟಿಗೆ ನೆನಪಿಸಿಕೊಳ್ಳಬೇಕಾಗಬಹುದು. ಸಾಲ ತೀರಿಸುವ ಬಗ್ಗೆ ಯೋಚಿಸಿ.
ಮಕರ
ಮಕರ: ನಿಮ್ಮ ಹವ್ಯಾಸದ ಕೆಲಸಗಳನ್ನು ಎಷ್ಟೇ ಬಿಡುವಿಲ್ಲದ ದಿನವಾಗಿದ್ದರೂ ಸಹ ಮಾಡುವಿರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಹಿತವೆನಿಸುತ್ತದೆ. ಮಾತುಗಳನ್ನು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಆಡುವಿರಿ.
ಕುಂಭ
ಕುಂಭ: ದಂಪತಿಗಳಿಗೆ ಒಟ್ಟಾಗಿ ದೇವರ ದರ್ಶನ ಮಾಡುವ ಅಥವಾ ಹರಕೆ ತೀರಿಸುವ ಯೋಗವಿದೆ. ಮಕ್ಕಳು ಬೆಳವಣಿಗಯ ಹಾದಿಯಲ್ಲಿ ದಾರಿ ತಪ್ಪುತ್ತಿದ್ದಾರೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ.
ಮೀನ
ಮೀನ: ವರ್ಷಾವಧಿಯ ಕಾರ್ಯಕ್ರಮಕ್ಕಾಗಿ ಇರುವ ಊರಿನಿಂದ ಮೂಲಮನೆಗೆ ಬರುವಿರಿ. ಚಿತ್ರಕಲಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೆ ಬಹುಮಾನವನ್ನು ನಿರೀಕ್ಷಿಸಬಹುದು. ಅಲರ್ಜಿ ಉಂಟಾಗಬಹುದು.