ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಪತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
Published 4 ಜೂನ್ 2024, 23:46 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೃಷಿಗೆ ಸಂಬಂಧಿಸಿದ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸರಿಯಾಗಿ ಮುಂದುವರಿಯಲಿವೆ. ಇಂದು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಬೇಕಾದ ಕಾರಣ ಭೋಜನದ ಸಮಯವು ಬದಲಾಗಬಹುದು.
ವೃಷಭ
ಮಗಳ ಮದುವೆ ವಿಷಯದ ಕುರಿತು ಆಕೆಯ ಅನುಮತಿ ಪಡೆದು ಮನೆಯವರ ಜೊತೆ ಪ್ರಸ್ತಾಪಿಸುವುದು ಒಳಿತು. ನಿಮ್ಮ ಎಲ್ಲ ಕಾರ್ಯಗಳಿಗೂ ಹೆಗಲು ಕೊಡುವ ಸಂಗಾತಿಯನ್ನು ಅಭಿನಂದಿಸುವ ಸಂದರ್ಭ ಒದಗಿಬರಲಿದೆ.
ಮಿಥುನ
ನಿಮ್ಮ ಮಿತ್ರರೊಬ್ಬರು ಎಲ್ಲ ವಿಧದಲ್ಲಿಯೂ ನಿಮಗೆ ಕುಟುಂಬದವರಿಗಿಂತ ಹೆಚ್ಚಿನ ಸಹಾಯ ಮಾಡಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಹೊರಬರಲು ವೈದ್ಯರ ಸಹಾಯ ಪಡೆಯುವುದು ಸರಿ.
ಕರ್ಕಾಟಕ
ಸದಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಕಾಲ ಕಳೆಯಲಿದ್ದೀರಿ. ಇದು ನಿಮಗೆ ಖುಷಿ ಕೊಡಲಿದೆ. ರಕ್ಷಣೆ ಬಯಸಿ ಬಂದ ಸ್ನೇಹಿತನಿಗೆ ಕೈಲಾದ ಸಹಾಯ ಮಾಡಿ, ಒಳ್ಳೆಯದಾಗಲಿದೆ.
ಸಿಂಹ
ಸ್ನೇಹಪರ ಸ್ವಭಾವ, ಪರೋಪಕಾರ ಅಥವಾ ಕೊನೆಯ ಪಕ್ಷದಲ್ಲಿ ನಿರ್ಲಿಪ್ತತೆಯಿಂದಾಗಿ ವೈಯಕ್ತಿಕ ಸ್ಥಾನ ಮಾನಗಳು ನಿಮ್ಮದಾಗಲಿವೆ. ತುರ್ತು ಕಾರ್ಯಗಳ ನಿರ್ವಹಣೆ ಮಾಡಬೇಕಾಗಲಿದೆ. ಈಶ್ವರನನ್ನು ಆರಾಧಿಸಿ.
ಕನ್ಯಾ
ನಿಕಟ ಸಂಬಂಧಿಗಳೊಂದಿಗೆ ನಿಮ್ಮ ಬದುಕಿನ ದುರ್ಘಟನೆಯ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಉತ್ತಮ ಸಲಹೆಗಳು ಸಿಗಲಿವೆ. ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ.
ತುಲಾ
ವೈಯಕ್ತಿಕ ವಿಚಾರವನ್ನು ಆಪ್ತರೊಬ್ಬರ ಬಳಿ ಹೇಳಿಕೊಳ್ಳುವುದರಿಂದ ಮಾನಸಿಕ ದುಃಖ ಕಡಿಮೆಯಾಗಲಿದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆ ಕಾಣುವ ಸಾಧ್ಯತೆ ಇದೆ. ಪತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವೃಶ್ಚಿಕ
ಸ್ವತ್ತು ಮಾರಾಟ ಅಥವಾ ಖರೀದಿ ವಿಚಾರವಾಗಿ ಸೋದರರ ಅಭಿಪ್ರಾಯ ಪಡೆದು ಮುಂದುವರಿಯುವುದು ಉತ್ತಮ. ಈ ದಿನದ ನಿಮ್ಮ ಲೇವಾದೇವಿ ವ್ಯವಹಾರದಲ್ಲಿ ಭಾಗಶಃ ಅನುಕೂಲವಿದೆ.
ಧನು
ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ದೊಡ್ಡ ಮಟ್ಟದಲ್ಲಿ ದಿನಸಿ ವಸ್ತುಗಳ ಖರೀದಿಸಬೇಕಾಗಲಿದೆ. ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳಲ್ಲಿ ತೊಡಗುವಿರಿ. ಕಾರ್ಯ ನಿಮಿತ್ತವಾಗಿ ದೂರದ ಸಂಚಾರ ಅಗತ್ಯವಾಗಲಿದೆ.
ಮಕರ
ಗಂಭೀರ ಚಿತ್ತ ಹಾಗೂ ದೃಢ ಮನಸ್ಸಿನಿಂದ ಕೈಗೊಂಡ ಕೆಲಸಗಳು ಖಂಡಿತವಾಗಿಯೂ ಕಾರ್ಯಗತವಾಗಲಿವೆ. ಮಕ್ಕಳ ಹೆಚ್ಚಿನ ಮೊಬೈಲ್ ಬಳಕೆಯು ನಿಮ್ಮ ಯೋಚನೆಗಳಿಗೆ ಕಾರಣವಾಗುತ್ತದೆ.
ಕುಂಭ
ಹಣಕಾಸಿನ ಜವಾಬ್ದಾರಿ ಹೊಂದಿದ ಕೆಲಸ ಮಾಡುವವರಿಗೆ ಹಣಕಾಸಿನಲ್ಲಿ ನಿಮ್ಮಿಂದ ವ್ಯತ್ಯಾಸಗಳಾಗುವ ಸಾಧ್ಯತೆಗಳಿದೆ. ಆತ್ಮೀಯರೊಂದಿಗೆ ವ್ಯವಹಾರಗಳ ಕುರಿತು ಅತ್ಯಂತ ಆಳವಾದ ಚರ್ಚೆಯನ್ನು ನಡೆಸಿ.
ಮೀನ
ನಿಮ್ಮ ರಾಜಕೀಯ ಭವಿಷ್ಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನಿಮ್ಮ ಸ್ವಂತ ಊರಿನಲ್ಲಿ ಬೇಕಾದ ಪ್ರಯತ್ನ ಮಾಡಿ. ಧರ್ಮ-ಕರ್ಮದಂತಹ ಕಾರ್ಯಗಳಲ್ಲಿ ಹಿರಿಯರ ಮಾರ್ಗದರ್ಶನದಿಂದ ಆಸಕ್ತಿ ಹೆಚ್ಚಲಿದೆ.