ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಖಾಸಗಿ ಕಂಪನಿಯಲ್ಲಿರುವವರಿಗೆ ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಅನುಕೂಲ
Published 14 ಮೇ 2024, 0:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಕ್ಕಳ ಎಲ್ಲಾ ವಿಚಾರಗಳಲ್ಲೂ ಮೃದು ಮನಸ್ಸಿನ ಆಲೋಚನೆಗಳನ್ನೇ ಮಾಡಿದಲ್ಲಿ ಫಲಿತಾಂಶವು ನೀವಂದುಕೊಂಡ ರೀತಿಯಲ್ಲಿ ಇರುವುದಿಲ್ಲ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.
ವೃಷಭ
ದಿನಗೂಲಿ ಲೆಕ್ಕದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಜೀವನದಲ್ಲಿ ಒಂದು ತರಹದ ಅಸ್ಥಿರ ಭಾವನೆ ಕಾಡಲು ಶುರುವಾಗುತ್ತದೆ. ಆಹಾರದ ವಿಚಾರವಾಗಿ ನಿರ್ಲಕ್ಷ್ಯ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮಿಥುನ
ಜಟಿಲ ಸಮಸ್ಯೆಗೆ ಬೇರೆಯವರಿಗೆ ಸುಲಲಿತವಾಗಿ ಪರಿಹಾರವನ್ನು ಸೂಚಿಸುವ ನೀವು ನಿಮ್ಮದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಡವುತ್ತೀರಿ.ವಾಹನದ ಖರೀದಿಗೆ ಸೂಕ್ತ ಸಮಯವಾಗಿರುತ್ತದೆ.
ಕರ್ಕಾಟಕ
ಯುವಕ ಯುವತಿಯರಿಗೆ ಕಾಲೇಜಿನ ಶಿಸ್ತುಬದ್ಧ ಜೀವನವು ಉಸಿರುಗಟ್ಟಿಸುವಂಥ ಅನುಭವವನ್ನು ತರಿಸಬಹುದು. ಯೋಗಿಗಳ ದರ್ಶನ ಹಾಗೂ ಮಾರ್ಗದರ್ಶನದ ಅವಶ್ಯಕತೆ ಅಗತ್ಯವಿರುತ್ತದೆ.
ಸಿಂಹ
ಖಾಸಗಿ ಕಂಪನಿಯಲ್ಲಿರುವವರು ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಅನುಕೂಲ ಪಡೆಯುವರು. ಉತ್ತಮ ವಿಚಾರಗಳು ಜಾರಿಗೆ ಬರಬೇಕೆಂದು ಮಾಡುತ್ತಿರುವ ಪ್ರಯತ್ನವು ಶೀಘ್ರ ಶುಭಫಲ ನೀಡುವುದು.
ಕನ್ಯಾ
ಬರಹಗಾರರಾಗಬೇಕು ಎಂಬ ಪಥದಲ್ಲಿ ಸಾಗುತ್ತಿರುವವರಿಗೆ ಇತರರ ಬರಹಗಳನ್ನು ಓದಿ ಬರವಣಿಗೆಗೆ ಸ್ಪಷ್ಟತೆ ದೊರೆಯುತ್ತದೆ. ಫೈನಾನ್ಸ್‌ನಲ್ಲಿ ಹೂಡಿಕೆ ಮಾಡುವವರು ಜಾಗರೂಕರಾಗಿ.
ತುಲಾ
ಆಹಾರವನ್ನು ಮಿತವಾಗಿ ಸೇವಿಸುವುದು ಉತ್ತಮ. ಸಂಪೂರ್ಣ ಸಾವಯವ ವ್ಯವಸಾಯವನ್ನು ಮಾಡುವವರಿಗೆ, ತಾಜಾ ತರಕಾರಿ ಹಾಗೂ ಹಣ್ಣುಗಳ ಮಾರಾಟಗಾರರಿಗೆ ಲಾಭವು ಅಧಿಕವಾಗಲಿದೆ.
ವೃಶ್ಚಿಕ
ಹಿಂದುಸ್ತಾನಿ ಸಂಗೀತಗಾರರು ಕಛೇರಿಯಲ್ಲಿ ಭಾವಪರವಶರಾಗಿ ಹಾಡಿದ ವಿರಹ ರಾಗಕ್ಕೆ ಅಭಿಮಾನಿಗಳು ಮರುಳಾಗುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮನೆಯ ವಿಚಾರಗಳನ್ನು ಚರ್ಚಿಸುವಂಥ ಕೆಲಸ ಮಾಡದಿರಿ.
ಧನು
ಚರ್ಮ ಸಂಬಂಧಿ ಕಾಯಿಲೆಗಳಿದ್ದಲ್ಲಿ ಆಯುರ್ವೇದ ಅಥವಾ ನಾಟಿ ಚಿಕಿತ್ಸೆ ಪರಿಣಾಮಕಾರಿ ಮಗಳ ಶಿಫಾರಸಿನ ಮೇಲೆ ಖರೀದಿಸಿದ ಆಸ್ತಿಯು ಲಾಭದಾಯಕವಾದದ್ದು ಎಂದು ಮನವರಿಕೆಯಾಗುತ್ತದೆ.
ಮಕರ
ಆಕಸ್ಮಿಕವಾಗಿ ಹೊಸ ವ್ಯಕ್ತಿಯ ಪರಿಚಯವಾಗಲಿದೆ. ಅವಿವಾಹಿತರಿಗೆ ಒಳ್ಳೆಯ ಕಡೆ ಸಂಬಂಧ ಬರುವುದು. ಗಣಕಯಂತ್ರದ ತಯಾರಕರು, ರಿಪೇರಿ ಮಾಡುವ ವ್ಯಕ್ತಿಗಳಿಗೆ ಈ ದಿನ ಉತ್ತಮ ದಿನವಾಗಲಿದೆ.
ಕುಂಭ
ಇಷ್ಟು ದಿನಗಳವರೆಗೂ ಅತ್ಯಂತ ತಾಳ್ಮೆಯಿಂದಿದ್ದ ಮನಸ್ಸು ಅನಿವಾರ್ಯ ಕಾರಣದಿಂದಾಗಿ ಕಾರ್ಯಕ್ಷೇತ್ರದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಬೃಹತ್ ಯೋಜನೆಗಾಗಿ ಸಾಲ ಮಾಡುವ ಪರಿಸ್ಥಿತಿ ಬರಬಹುದು.
ಮೀನ
ವ್ಯವಸ್ಥಾಪಕರು ನೀಡುವ ಧೈರ್ಯದ ಮಾತುಗಳು ಜವಾಬ್ದಾರಿಯನ್ನು ಉತ್ತಮ ಗುಣಮಟ್ಟದ್ದಾಗಿಸುತ್ತದೆ. ದೇವಸ್ಥಾನದ ಭೇಟಿ ಹಾಗೂ ದೇವರ ದರ್ಶನದಿಂದ ಮನಸ್ಸಿಗೆ ಸಂತಸವಾಗುವುದು.