ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಒಡಹುಟ್ಟಿದವರನ್ನು ಹೊರಗಿನವರಂತೆ ಕಾಣುವುದು ಸರಿಯಲ್ಲ
Published 22 ಏಪ್ರಿಲ್ 2024, 20:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಶಸ್ಸು ಹೊಂದಲು ನೀವು ಅನುಸರಿಸುತ್ತಿರುವ ಹಳೆಯ ದಾರಿ ಬಿಟ್ಟು ಉತ್ತಮ ಹಾಗೂ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಒಡಹುಟ್ಟಿದವರನ್ನು ಹೊರಗಿನವರಂತೆ ಕಾಣುವುದು ಸರಿಯಲ್ಲ.
ವೃಷಭ
ತಿಳಿದು ಮಾಡಿದ ತಪ್ಪಿಗೆ ತುಂಬ ವ್ಯಥೆ ಪಡುತ್ತೀರಿ ಹಾಗೂ ಕ್ಷಮೆ ಕೋರಲು ಬಹಳ ಪ್ರಯತ್ನ ಪಡುತ್ತೀರಿ. ಉದ್ಯೋಗ ಬದಲಾವಣೆ ವಿಚಾರದಲ್ಲಿದ್ದ ಗೊಂದಲ ನಿವಾರಿಸಿಕೊಳ್ಳಲಿದ್ದೀರಿ. ಕೀಲು ನೋವನ್ನು ನಿರ್ಲಕ್ಷಿಸುವುದು ಬೇಡ.
ಮಿಥುನ
ನಿಮ್ಮ ದೈನಂದಿನ ಬದುಕಿನಲ್ಲಿರುವ ವ್ಯಕ್ತಿಗಳ ಸಹವಾಸದಿಂದ ಅಪವಾದಗಳಿಗೆ ಒಳಗಾಗಲಿದ್ದೀರಿ. ಹಿಂದಿನ ಕಹಿ ಘಟನೆಗಳನ್ನು ಮರೆಯಲು ಒಳ್ಳೆಯ ಸಮಯ ಸಿಗಲಿದೆ. ಶ್ರದ್ಧೆಯಿಂದ ಕೆಲಸ ಮಾಡಿದರೆ, ಜಯ ಸಿಗಲಿದೆ.
ಕರ್ಕಾಟಕ
ನಿಮ್ಮ ಸ್ವತಂತ್ರ ಆಲೋಚನೆಯಿಂದ ಮಾಡಿದ ಕೆಲಸಗಳೇ ಹೆಚ್ಚಿನ ಗುಣಮಟ್ಟದ್ದಾಗಿರಲಿದ್ದು, ಬೇರೆಯವರ ಕೆಲಸವನ್ನು ನಕಲು ಮಾಡುವ ಪ್ರಯತ್ನ ಬೇಡ. ಸಂಪಾದಿಸಿದ ಹಣವನ್ನು ಸನ್ಮಾರ್ಗದಲ್ಲಿ ಬಳಸಿ.
ಸಿಂಹ
ಇಂದು ಮಕ್ಕಳ ಆಟೋಪಚಾರಗಳನ್ನು ನೋಡಿದ ನಿಮಗೆ ಬಾಲ್ಯದ ನೆನಪು ಕಾಡಲಿದೆ. ಬಹಳ ದಿನಗಳ ನಂತರ ಕ್ರೀಡೆಗಳಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಮನೆಗೆ ಮಕ್ಕಳ ಆಗಮನದಿಂದ ಹೆಚ್ಚಿನ ಸಂತೋಷವಿರಲಿದೆ.
ಕನ್ಯಾ
ನೂತನ ವಾಹನ ಖರೀದಿಯನ್ನು ಸ್ವಲ್ಪ ದಿನ ಮುಂದೂಡುವುದೇ ಒಳಿತು. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರ ನೆರವು ಸಿಗಲಿದೆ.
ತುಲಾ
ಸಂತೋಷದಲ್ಲಿ ಮೈಮರೆಯುವುದರಿಂದ ಕೆಲವು ವಿಷಯಗಳ ಮೇಲೆ ಗಮನ ಕಡಿಮೆಯಾಗಿ ಎಡವಟ್ಟುಗಳು ಆಗಬಹುದು. ವಿವಾದಾತ್ಮಕ ವಿಷಯದಲ್ಲಿ ಮಧ್ಯಪ್ರವೇಶ ಬೇಡ. ಕೆಟ್ಟವರಾಗಲು ಹೆಚ್ಚು ಸಮಯ ಬೇಕಿಲ್ಲ.
ವೃಶ್ಚಿಕ
ಪ್ರತಿದಿನವೂ ಒಂದೇ ರೀತಿಯ ದಿನಚರಿಯಿಂದ ಬೇಸರವಾಗಲಿದೆ. ಬೇರೆಯವರ ಸಂಸಾರವನ್ನು ಟೀಕಿಸುವ ಮೊದಲು ನಿಮ್ಮ ಸಂಸಾರದ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವುದು ಉತ್ತಮ.
ಧನು
ನಿಮ್ಮ ಆವೇಶ, ಆಕ್ರೋಶ ವ್ಯಕ್ತಪಡಿಸಲು ಅದಕ್ಕೆ ಕಾರಣರಲ್ಲದ ವ್ಯಕ್ತಿಗಳನ್ನು ಆರಿಸಬೇಡಿ. ಈಗಾಗಲೇ ಶಿಕ್ಷಣ ಮುಗಿಸಿರುವ ಉದ್ಯೋಗ ಆಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಮುಖ್ಯ ವ್ಯಕ್ತಿಗಳ ಭೇಟಿಯ ಸಾಧ್ಯತೆ ಇದೆ.
ಮಕರ
ಜ್ಞಾನಿಗಳಿಗೆ ಇಂದು ನಿಮ್ಮ ಪರಂಪರೆ ಉಳಿಸಲು ಯೊಗ್ಯವಾದಂಥ ಶಿಷ್ಯನನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ಸರ್ಕಾರಿ ಹುದ್ದೆಯಲ್ಲಿದ್ದು, ಉನ್ನತ ಮಟ್ಟದ ಪದವಿಗೆ ಪ್ರಯತ್ನ ಪಡುತ್ತಿರುವವರಿಗೆ ಶುಭವಾಗಲಿದೆ.
ಕುಂಭ
ನಿಮ್ಮ ಬದಲಾಗುತ್ತಿರುವ ಮನಃಸ್ಥಿತಿಯಿಂದಾಗಿ ನಿಮ್ಮ ನಿಕಟವರ್ತಿಗಳಿಗೆ ಗೋಳು ಎನ್ನಿಸಬಹುದು. ನಿಮ್ಮ ಮಕ್ಕಳ ಅಗತ್ಯಗಳನ್ನು ಪೂರೈಸಿ. ಮನೆಯ ಹಿರಿಯರಿಗೆ ಸರಿಯಾದ ಗೌರವ ಮತ್ತು ಮನ್ನಣೆ ನೀಡಬೇಕು.
ಮೀನ
ದಿನವೂ ದೇವರನ್ನು ಸ್ತುತಿಸಿದ ನಿಮಗೆ ಅದರ ಪುಣ್ಯಫಲಗಳ ಅನುಭವ ನಿಮ್ಮ ಮಕ್ಕಳ ಮೂಲಕ ತಿಳಿಯಲ್ಪಡುತ್ತದೆ. ಒಪ್ಪಂದ ವ್ಯವಹಾರಗಳಿಂದ ವರಮಾನ ಹೆಚ್ಚಲಿದೆ. ಬಡ ವಿದ್ಯಾರ್ಥಿಗೆ ಕೈಲಾದ ಧನ ಸಹಾಯ ಮಾಡಿ.